ಕಲ್ಪ ಮೀಡಿಯಾ ಹೌಸ್ | ಮಧ್ಯಪ್ರದೇಶ |
ದೇಶದಾದ್ಯಂತ ಟೊಮೆಟೋ ಬೆಲೆ ಗಗನಕ್ಕೇರಿದ ಬೆನ್ನಲ್ಲೇ ಈ ಬೆಲೆಯನ್ನುಕಾಯ್ದುಕೊಳ್ಳುವುದು ಕೃಷಿಕರಿಗೆ ಒಂದು ಸವಾಲಾಗಿದ್ದರೆ, ಇಲ್ಲೊಂದು ಪ್ರಕರಣದಲ್ಲಿ ಇದೇ ಟೊಮೇಟೋದಿಂದಾಗಿ ಪತ್ನಿಯೊಬ್ಬಳು ಪತಿಯನ್ನು ತೊರೆದು ಮನೆ ಬಿಟ್ಟು ಹೋಗಿರುವ ವಿಚಿತ್ರ ಘಟನೆ ನಡೆದಿದೆ.
ಮಧ್ಯಪ್ರದೇಶದ ಶಹದೋಲ್’ನಲ್ಲಿ ಘಟನೆ ನಡೆದಿದ್ದು, ಹೆಂಡತಿಯ ಅನುಮತಿಯಿಲ್ಲದೇ ಗಂಡ ಅಡುಗೆಯಲ್ಲಿ ಟೊಮೆಟೋ ಬಳಸಿದ ಎಂಬ ಕಾರಣಕ್ಕಾಗಿ ಕೋಪಗೊಂಡ ಪತ್ನಿ ತನ್ನ ಮಗಳನ್ನೂ ಸಹ ಕರೆದುಕೊಂಡು ಮನೆ ಬಿಟ್ಟು ಹೋಗಿದ್ದಾಳೆ ಎಂದು ವರದಿಯಾಗಿದೆ.
ಸಂಜೀವ್ ಬರ್ಮನ್ ಟಿಫನ್ ಸರ್ವಿಸ್ ನಡೆಸುತ್ತಿದ್ದರು. ಇವರು ಅಡುಗೆ ಮಾಡುವ ಸಂದರ್ಭದಲ್ಲಿ ಹೆಂಡತಿಯ ಅಪ್ಪಣೆಯಿಲ್ಲದೆ 2 ಟೊಮೆಟೊವನ್ನು ಅಡುಗೆಯಲ್ಲಿ ಬಳಸಿದ್ದಾರೆ. ಇದರಿಂದ ಕೋಪಗೊಂಡ ಹೆಂಡತಿ ಗಂಡನೊಂದಿಗೆ ಜಗಳಕ್ಕೆ ಇಳಿದಿದ್ದಾಳೆ. ಇವರಿಬ್ಬರ ಜಗಳ ಅತಿರೇಕಕ್ಕೆ ಹೋಗಿದ್ದು, ಹೆಂಡತಿ ತನ್ನ ಮಗಳನ್ನು ಕರೆದುಕೊಂಡು ಮನೆಬಿಟ್ಟು ಹೋಗಿದ್ದಾಳೆ.
Also read: ರಾಜೀವ್ ಗಾಂಧಿ ವಸತಿ ನಿಗಮದಿಂದ 7.06 ಲಕ್ಷ ಮನೆ ನಿರ್ಮಾಣ ಗುರಿ: ಜಮೀರ್ ಅಹಮದ್ ಖಾನ್
ಕೆಲವು ಸಮಯದ ನಂತರ ಸಂಜೀವ್ ತನ್ನ ಹೆಂಡತಿ ಮತ್ತು ಮಗಳನ್ನು ಊರಿನ ಎಲ್ಲಾ ಕಡೆ ಹುಡುಕಾಡಿದರೂ ಎಲ್ಲಿಯೂ ಸುಳಿವು ಸಿಗದ ಹಿನ್ನೆಲೆ ಹತ್ತಿರದ ಪೊಲೀಸ್ ಠಾಣೆಯಲ್ಲಿ ಕಾಣೆಯಾದ ಬಗ್ಗೆ ದೂರು ನೀಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post