ಕಲ್ಪ ಮೀಡಿಯಾ ಹೌಸ್ | ಮಡಿಕೇರಿ |
ಕೊಡಗು #Kodagu ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಗ್ರಂಥಾಲಯ ವಿಭಾಗ ವತಿಯಿಂದ ಕರ್ನಾಟಕ ಆರೋಗ್ಯ ವಿಜ್ಞಾನಗಳ ಗ್ರಂಥಾಲಯಗಳ ಸಂಘ, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯ ಮತ್ತು ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಎರಡು ದಿನಗಳ ಕಾಲ ಏರ್ಪಡಿಸಿರುವ 14 ನೇ ‘ರಾಷ್ಟ್ರೀಯ ಗ್ರಂಥಾಲಯ ಸಮ್ಮೇಳನ’ಕ್ಕೆ #National_Library_Conference ಶುಕ್ರವಾರ ಗಣ್ಯರಿಂದ ಚಾಲನೆ ದೊರೆಯಿತು.
ಈ ಬಾರಿ ಗ್ರಂಥಪಾಲಕರು ಮತ್ತು ವೈದ್ಯರಿಗೆ ಆರೋಗ್ಯ ವಿಜ್ಞಾನದ ಮಾಹಿತಿ ಎಂಬ ಶೀರ್ಷಿಕೆಯಡಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಸ್ಮಾರ್ಟ್ ಟೆಕ್ನಾಲಜೀಸ್‍ನ ಹೊರಹೊಮ್ಮುವಿಕೆ, ಮಾಹಿತಿ ಸಂಪನ್ಮೂಲಗಳ ಹೊಸ ಸ್ವರೂಪ, ಡಿಜಿಟಲ್ ಸಂಪನ್ಮೂಲಗಳ ತೀವ್ರ ಬಳಕೆ ಮತ್ತು ನವೀನ ತಂತ್ರಜ್ಞಾನಗಳು ಮತ್ತು ಪ್ರವೇಶವನ್ನು ಒದಗಿಸುವಲ್ಲಿ ಅದರ ಬಳಕೆಯು ಗ್ರಂಥಾಲಯ ವೃತ್ತಿಪರರಿಗೆ ಅತ್ಯಂತ ಬಲವಾದ ಅಂಶಗಳು ಮತ್ತು ಸವಾಲುಗಳಾಗಿವೆ ಎಂದರು.
‘ವೃತ್ತಿಪರರು ಬಳಕೆದಾರರಲ್ಲಿ ಮಾಹಿತಿ ಸಾಕ್ಷರತೆಯ ಕೌಶಲ್ಯವನ್ನು ಅಭಿವೃದ್ಧಿಪಡಿಸುವುದರ ಜೊತೆಗೆ, ತಮ್ಮ ಜ್ಞಾನ ಮತ್ತು ಕೌಶಲ್ಯದ ನೆಲೆಯನ್ನು ನವೀಕರಿಸಬೇಕಿದೆ. ಆರೋಗ್ಯ ವಿಜ್ಞಾನ ಗ್ರಂಥಾಲಯಗಳು ಮಾಹಿತಿ ಮತ್ತು ಜ್ಞಾನ ವಿತರಣಾ ಪ್ರಕ್ರಿಯೆಯ ಸಕಾಲಿಕ ಪ್ರವೇಶದ ಮೂಲಕ ತಮ್ಮ ಗುರಿ ಸಾಧಿಸಲು ಆರೋಗ್ಯ ವಿಜ್ಞಾನ ವೃತ್ತಿಪರರಿಗೆ ಸಹಾಯ ಮಾಡಲು ಪ್ರಮುಖ ಮತ್ತು ವೇಗವರ್ಧಕ ಪಾತ್ರ ವಹಿಸುತ್ತದೆ ಎಂದು ಕೆಂಪರಾಜು ಅವರು ಹೇಳಿದರು.

ಶಿಕ್ಷಣವೆಂಬುದು ಇವತ್ತು ಎಲ್ಲಾ ಕಡೆ ಸ್ಪರ್ಧಾತ್ಮಕವಾಗಿ ದೇಶದ ಬೆಳವಣಿಗೆಗೆ ಒಂದು ಪ್ರಮುಖ ಅಂಶವಾಗಿದೆ. ಕೌಶಲ್ಯ ಪೂರ್ಣ ಜ್ಞಾನದ ಸಮಾಜವನ್ನು ನಿರ್ಮಾಣ ಮಾಡಲು ಶಿಕ್ಷಣವೆಂಬುವುದು ಪ್ರಮುಖ ಸಾಧನವಾಗಿದೆ ಎಂದು ತಿಳಿಸಿದರು. ಕರ್ನಾಟಕ ಆರೋಗ್ಯ ವಿಜ್ಞಾನಗಳ ಗ್ರಂಥಾಲಯಗಳ ಸಂಘದ ಅಧ್ಯಕ್ಷರಾದ ಡಾ.ಎಚ್.ಎಸ್.ಸಿದ್ದಮಲ್ಲಯ್ಯ ಅವರು ಮಾತನಾಡಿ ಗ್ರಂಥಾಲಯಗಳ ಸಂಘವು ಪ್ರತಿ ವರ್ಷ ವಿವಿಧ ವೈದ್ಯಕೀಯ ಕಾಲೇಜಿನಲ್ಲಿ ಸಮ್ಮೇಳನವನ್ನು ಆಯೋಜಿಸುತ್ತಿರುವ ಬಗ್ಗೆ ಹರ್ಷ ವ್ಯಕ್ತಪಡಿಸಿದರು.
ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಪ್ರಾಂಶುಪಾಲರಾದ ಡಾ.ವಿಶಾಲ್ ಕುಮಾರ್ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ಸ್ವಾಮಿ ಎ.ಎಲ್, ವೈದ್ಯಕೀಯ ಅಧೀಕ್ಷರಾದ ಡಾ.ರೂಪೆಶ್ ಗೋಪಲ್, ಸಂಸ್ಥೆಯ ಆರ್ಥಿಕ ಸಲಹೆಗಾರರಾದ ಕೆ.ಆನಂದ, ಡಾ.ಮೇದಾ ಜೋಶಿ, ಸಂಸ್ಥೆಯ ಮಕ್ಕಳ ವಿಭಾಗದ ಪ್ರಾಧ್ಯಾಪಕರಾದ ಡಾ.ಪುರುಷೋತ್ತಮ್ ಡಿ.ಆರ್. ಅವರು ಮಾತನಾಡಿದರು. ಸಭಾ ಕಾರ್ಯಕ್ರಮದ ನಂತರ ವಿವಿಧ ವಿಷಯಗಳ ಬಗ್ಗೆ ವೈಜ್ಞಾನಿಕ ಕಾರ್ಯಕ್ರಮ ನಡೆಯಿತು.
ಬೆಂಗಳೂರು ಉತ್ತರ ವಿಶ್ವವಿದ್ಯಾನಿಲಯದ ವಿಶ್ರಾಂತಿ ಕುಲಪತಿಗಳಾದ ಡಾ. ಟಿ.ಡಿ.ಕೆಂಪರಾಜು, ಕೊಡಗು ವೈದ್ಯಕೀಯ ಕಾಲೇಜಿನ ನಿವೃತ ಮುಖ್ಯ ಆಡಳಿತಾಧಿಕಾರಿ ಮೇರಿ ನಾಣಯ್ಯ ಹಾಗೂ ಇತರರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಕಾರ್ಯಕ್ರಮದ ಸಂಘಟನಾ ಕಾರ್ಯದರ್ಶಿ ಹಾಗೂ ಮುಖ್ಯ ಗ್ರಂಥಪಾಲರಾದ ಸ್ವಾಮಿ ನಾಯಕ ಸಿ.ಕೆ, ಕಾಲೇಜಿನ ಅಕಾಡೆಮಿಕ್ ರಿಜಿಸ್ಟ್ರಾರ್ ಡಾ.ರವಿಕಿರಣ್ ಕಿಸಾನ್, ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ.ನಂಜುಂಡಯ್ಯ, ಸ್ಥಾನೀಯ ವೈದ್ಯಾಧಿಕಾರಿ ಡಾ.ಸತೀಶ್ ವಿ.ಎಸ್. ಇತರರು ಇದ್ದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಆರೋಗ್ಯ ವಿಜ್ಞಾನಗಳ ಗ್ರಂಥಾಲಯಗಳ ಸಂಘದ ಪದಾಧಿಕಾರಿಗಳು ಸೇರಿದಂತೆ ರಾಜ್ಯ ಹಾಗೂ ದೇಶದ ವಿವಿಧ ವೈದ್ಯಕೀಯ, ದಂತ ವ್ಯೆದ್ಯಕೀಯ, ನರ್ಸಿಂಗ್, ಪ್ಯಾರಾಮೆಡಿಕಲ್ ಮತ್ತು ಪಿಸಿಯೋ ಥೆರಪಿ ಕಾಲೇಜುಗಳ 250 ಕ್ಕೂ ಹೆಚ್ಚು ಪ್ರತಿನಿಧಿಗಳು ಪಾಲ್ಗೊಂಡಿದ್ದರು. ಡಾ.ವಿಶಾಲ್ ಕುಮಾರ್ ಸ್ವಾಗತಿಸಿದರು. ಡಾ.ನರಸಿಂಹ ಬಿ.ಸಿ ವಂದಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post