ಕಲ್ಪ ಮೀಡಿಯಾ ಹೌಸ್ | ಮಡಿಕೇರಿ |
ಕೇಂದ್ರ ಸರ್ಕಾರದ ಪಿಎಂ ಮಿನಿಸ್ಟರ್ಸ್, ಇಂಟರ್ನ್ಶಿಪ್ ಯೋಜನೆಯಡಿ #PM Internship Scheme ಯುವಕ, ಯುವತಿಯರಿಗೆ ಅವಕಾಶ ಒದಗಿಸುವ ಮೂಲಕ ನವೀನ ಕೌಶಲ್ಯವನ್ನು ವೃದ್ಧಿಸಿಕೊಳ್ಳಲು ವೇದಿಕೆ ಕಲ್ಪಿಸಲಾಗಿದೆ.
ಈ ಮೂಲಕ 5 ವರ್ಷಗಳಲ್ಲಿ ಉನ್ನತಮಟ್ಟದ 300ಕ್ಕೂ ಹೆಚ್ಚಿನ ಕಂಪೆನಿಗಳಲ್ಲಿ ಅವಕಾಶ ಕಲ್ಪಿಸಲಾಗಿದ್ದು, ಆಸಕ್ತಿಯುಳ್ಳ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಎಷ್ಟು ಅವಧಿ ದೊರೆಯಲಿದೆ?
ಅವಧಿಯು 12 ತಿಂಗಳುಗಳಾಗಿದ್ದು ಮಾಸಿಕ ರೂ.5000 ಶಿಷ್ಯವೇತನ ನೀಡಲಾಗುವುದು. ಅಭ್ಯರ್ಥಿಯು ಕನಿಷ್ಟ ಮೂರು ಇಂಟರ್ನ್ಶಿಪ್’ಗಳಿಗೆ ಅರ್ಜಿ ಸಲ್ಲಿಸಬಹುದು. ಆಯ್ಕೆಯಾಗುವ ಕಂಪೆನಿಗಳಲ್ಲಿ ಇಂಟರ್ನ್ಶಿಪ್ ಮಾಡಬೇಕಾಗುತ್ತದೆ.
Also read: ಇನ್ಮುಂದೆ ನಿಮ್ಮ ಮನೆ ಬಾಗಿಲಿಗೇ ಬರಲಿದೆ ಪ್ರಮುಖ ದೇಗುಲಗಳ ಪ್ರಸಾದ | ಪಡೆಯುವುದು ಹೇಗೆ?
ಯಾರೆಲ್ಲಾ ಅರ್ಹರು?
ಅಭ್ಯರ್ಥಿಯು 21 ರಿಂದ 24 ವರ್ಷ ವಯೋಮಿತಿಯೊಳಗಿಬೇಕು. ಯಾವುದೇ ಪದವಿ ಡಿಪ್ಲೊಮಾ ಐಟಿಐ, 10ನೇ ತರಗತಿ ಹಾಗೂ ಪಿಯುಸಿ ಪೂರ್ಣಗೊಳಿಸಿರಬೇಕು. ಕುಟುಂಬದ ವಾರ್ಷಿಕ ಆದಾಯ ರೂ.8.00 ಲP್ಷÀಗಳಿಗಿಂತ ಹೆಚ್ಚಿರಬಾರದು. ಕುಟುಂಬದ ಸದಸ್ಯರು ಯಾವುದೇ ಸರ್ಕಾರಿ ಉದ್ಯೋಗಿಯಾಗಿರಬಾರದು.
ಇಂಟರ್ನ್ಶಿಪ್ ತರಬೇತಿಯು 12 ತಿಂಗಳ ಅವಧಿ ಇರುತ್ತದೆ. ಇಂಟರ್ಶಿಪ್’ನಲ್ಲಿ ಆಯ್ಕೆಯಾದ ಅಭ್ಯರ್ಥಿಗಳು ಕಂಪೆನಿ ಆಯೋಜಿಸಿದ ಸ್ಥಳದಲ್ಲಿ ಹೋಗಿ ತರಬೇತಿ ಪಡೆಯುವುದು.
ಆಸಕ್ತಿಯುಳ್ಳ ಅಭ್ಯರ್ಥಿಗಳು www.pminternship.mca.gov.in ಜಾಲತಾಣದಲ್ಲಿ ಅರ್ಜಿ ಸಲ್ಲಿಸಬಹುದು ಎಂದು ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಮಂಜುನಾಥ್ ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post