ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಚಳ್ಳಕೆರೆ: ಸದ್ಯದ ಪರಿಸ್ಥಿತಿಯಲ್ಲಿ ನಮ್ಮ ಚಿತ್ರದುರ್ಗ ಗ್ರೀನ್ ಝೋನ್’ನಲ್ಲಿದೆ. ಆದರೂ ಜಿಲ್ಲೆಯಾದ್ಯಂತ ಸಾಮಾಜಿಕ ಅಂತರ ಕಾಪಾಡಿಕೊಂಡರೆ ಕೊರೋನಾ ಜಿಲ್ಲೆಗೆ ಬಾರದಂತೆ ತಡೆಯಬಹುದು ಎಂದು ಜಿಲ್ಲಾ ವರಿಷ್ಠಾಧಿಕಾರಿ ಜಿ. ರಾಧಿಕ ಕರೆ ನೀಡಿದರು.
ಡಿವೈಎಸ್’ಪಿ ಕಚೇರಿಯ ಮುಂಭಾಗದಿಂದ ಹೋರಾಟ ಕೊರೋನಾ ವೈರಸ್ ಹತೋಟಿಲ್ಲಿ ಸಾರ್ವಜನಿಕ ಸಹಕಾರ ಮುಖ್ಯ ಎಂದು ಸೈಕಲ್ ಜಾಥಾಕ್ಕೆ ಚಾಲನೆ ನೀಡಿ ನೆಹರು ವೃತ್ತದಲ್ಲಿ ಸಾರ್ವಜನಿಕರನ್ನು ಕುರಿತು ಅವರು ಮಾತನಾಡಿದರು.
ಕೊರೋನಾ ಮಹಾಮಾರಿ ಬೆಂಬಿಡದೆ ಕಾಡುತ್ತಿದೆ. ಪಕ್ಕದಲ್ಲಿ ಜಿಲ್ಲೆಯಲ್ಲಿ ಕೊರೋನಾ ವೈರಸ್ ಹೆಚ್ಚಾಗಿ ಹರಡುತ್ತಿರುವುದರಿಂದ ನಮ್ಮ ಜಿಲ್ಲೆಯಲ್ಲಿ ಹೆಚ್ಚಿನ ಜಾಗ್ರತೆ ವಹಿಸಬೇಕಾಗುತ್ತದೆ. ನಮ್ಮ ಜಿಲ್ಲೆಯಲ್ಲಿ ಯಾವುದೇ ವೈರಸ್ ಇಲ್ಲದ ಕಾರಣ ಲಾಕ್’ಡೌನ್’ನಲ್ಲಿ ಸಡಿಲಿಕೆ ನೀಡಲಾಗಿದ್ದು, ವ್ಯಾಪಾರ ವಹಿವಾಟು ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ಪ್ರತಿಯೊಬ್ಬರೂ ಮುಖಕ್ಕೆ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ಅಂಗಡಿ, ತರಕಾರಿ ಮಾರುವಾಗ ಹಾಗೂ ಕೊಂಡುಕೊಳ್ಳುವಾಗ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು, ಶಾಲೆಗಳು ಸಂತೆ, ಜಾತ್ರೆ, ಯಾವುದಕ್ಕೂ ಅವಕಾಶವಿರುವುದಿಲ್ಲ. ಗುಂಪು ಗುಂಪಾಗಿ ಸೇರುವಂತಿಲ್ಲ ಎಂದರು.
ಬೇರೆ ಜಿಲ್ಲೆ ಹಾಗೂ ಬೇರೆ ರಾಜ್ಯದಿಂದ ಯಾರಾದರೂ ಬಂದರೆ ಆ ಬಗ್ಗೆ ಬಗ್ಗೆ ಮಾಹಿತಿ ನೀಡಬೇಕು, ಹೊರಗಿನಿಂದ ಮನೆಗೆ ಬಂದಾಗ ಕೈ ತೊಳೆದುಕೊಳ್ಳಬೇಕು, ಸ್ಯಾನಿಟೈಜರ್ ಬಳಸಿಕೊಳ್ಳಬೇಕು, ಪ್ರತಿಯೊಬ್ಬರು ಜಾಗೃತಿ ವಹಿಸಿದ್ದೇಯಾದರೆ ನಮ್ಮ ಜಿಲ್ಲೆಯಲ್ಲಿ ಕೊರೋನಾ ಬರದಂತೆ ತಡೆಯಬಹುದು. ನಮ್ಮ ಇಲಾಖೆಯಲ್ಲಿ ಎಲ್ಲರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಜಾಗೃತಿ ಸಹ ಮೂಡಿಸುತ್ತಿದ್ದಾರೆ ಎಂದರು.
ಸೈಕಲ್ ಜಾಗೃತಿ ಜಾಥಾದಲ್ಲಿ ಎಎಸ್’ಪಿ ನಂದಗಾವಿ, ಡಿವೈಎಸ್’ಪಿ ರೋಷನ್ ಜಮೀರ್, ಮಾತನಾಡಿದರು. ಮೊಳಕಾಲ್ಮೂರು ಡಿವೈಎಸ್’ಪಿ ಗೋಪಾಲ್ ನಾಯ್ಕ, ವೃತ್ತ ನಿರೀಕ್ಷಕ, ಎ. ಆನಂದ, ಪಿಎಸ್’ಐಗಳಾದ ಎಸ್.ಡಿ. ನೂರ್ ಅಹಮದ್, ರಾಘವೇಂದ್ರ, ಕೆ. ಸತೀಶ್ ನಾಯ್ಕ್, ಬಸವರಾಜ್ ಪೊಲೀಸ್ ಎಎಸ್‌ಐಗಳು ಕಾನ್’ಸ್ಟೇಬಲ್’ಗಳು ಇದ್ದರು.
ಇದೆ ಸಂದರ್ಭದಲ್ಲಿ ಚಳ್ಳಕೆರೆ ಆಟೋ ಚಾಲಕರು ಪೊಲೀಸ್ ಇಲಾಖೆ ಜಾಗೃತಿ ಸೈಕಲ್ ಜಾಥಾಕ್ಕೆ ಪುಷ್ಟವೃಷ್ಠಿ ಮಾಡಿ ಅಭಿನಂದಿಸಿದರು.
(ವರದಿ: ಸುರೇಶ್ ಬೆಳಗೆರೆ, ಚಳ್ಳಕೆರೆ)
Get in Touch With Us info@kalpa.news Whatsapp: 9481252093
Discussion about this post