ರಾಮನಾಥಿ (ಗೋವಾ): ಭ್ರಷ್ಟಾಚಾರ ಅಂದರೆ ಕೇವಲ ಆರ್ಥಿಕವಾಗಿ ಕೊಡು-ಕೊಳ್ಳುವಿಕೆಯಾಗಿರದೇ ಸಂವಿಧಾನವನ್ನು ಜಾತ್ಯತೀತವನ್ನಾಗಿಸುವುದು ಸಹ ಭ್ರಷ್ಟಾಚಾರವೇ ಆಗಿದೆ ಎಂದು ಕೇರಳದ ಸರಕಾರಿ ನ್ಯಾಯವಾದಿ ಗೋವಿಂದ ಕೆ. ಭರತನ್ ಪ್ರತಿಪಾದಿಸಿದರು.
ಅವರು ಗೋವಾದ ಫೋಂಡಾದಲ್ಲಿರುವ ರಾಮನಾಥಿಯಲ್ಲಿನ ಶ್ರೀ ರಾಮನಾಥ ದೇವಸ್ಥಾನದ ಶ್ರೀವಿದ್ಯಾಧಿರಾಜ ಸಭಾಗೃಹದಲ್ಲಿ ಆಯೋಜಿಸಲಾದ ಸಪ್ತಮ ಅಖಿಲ ಭಾರತೀಯ ಹಿಂದೂ ಅಧಿವೇಶನದ ಅಂತರ್ಗತದ ಎರಡು ದಿನದ ನ್ಯಾಯವಾದಿ ಅಧಿವೇಶನದ ಸಮಾರೋಪದಲ್ಲಿ ಇಂದು ಮಾತನಾಡಿದರು.
ಜಾತ್ಯತೀತ ಶಬ್ದವನ್ನು ಸಂವಿಧಾನದಲ್ಲಿ ತುರುಕಿಸಲಾಯಿತು ಹಾಗೂ ಅಲ್ಲಿಂದಲೇ ಸಂವಿಧಾನ ಹಾಗೂ ಅಧ್ಯಾತ್ಮ ಇವೆರಡರಲ್ಲಿ ಬಿರುಕು ನಿರ್ಮಾಣವಾಯಿತು. ಸದ್ಯ ನ್ಯಾಯವ್ಯವಸ್ಥೆಗೆ ಭ್ರಷ್ಟಾಚಾರದೊಂದಿಗೆ ಸಂಬಂಧವಿರುವುದರಿಂದ ರಾಷ್ಟ್ರ ಹಾಗೂ ಸಮಾಜದ ಮೇಲೆ ಗಂಭೀರ ಪರಿಣಾಮವಾಗುತ್ತಿರುವುದು ಕಾಣುತ್ತಿದೆ ಎಂದರು.
ಇಂದು ನ್ಯಾಯಧೀಶರ ಯಾವ ರೀತಿಯಲ್ಲಿ ಆಯ್ಕೆ ಮಾಡಲಾಗುತ್ತದೆ ಎಂಬುದು ಅದರ ಪ್ರಕ್ರಿಯೆ ಸುಸ್ಪಷ್ಟವಾಗಿಲ್ಲ. ಈ ಪ್ರಕ್ರಿಯೆಯಲ್ಲಿ ಗುಣಮಟ್ಟ ಹಾಗೂ ರಾಷ್ಟ್ರೀಯತೆ ಈ ಗುಣಗಳ ಕಡೆಗೆ ದುರ್ಲಕ್ಷ ಮಾಡಲಾಗುತ್ತಿದೆ ಎಂದರು.
ಸದ್ಯ ಗುಣಮಟ್ಟದ್ದಲ್ಲ ಬದಲಾಗಿ ಪ್ರಭಾವದ ಆಧಾರದಲ್ಲಿ ನೇಮಕ ಮಾಡಲಾಗುತ್ತಿರುವುದರಿಂದ ನ್ಯಾಯವ್ಯವಸ್ಥೆಯಲ್ಲಿ ಅನಾಚಾರ ಹಬ್ಬಿದೆ. ಈ ಸ್ಥಿತಿಯನ್ನು ಬದಲಾಯಿಸಬೇಕಾದರೆ, ಇಚ್ಛಾಶಕ್ತಿ, ಕ್ರಿಯಾಶಕ್ತಿ ಹಾಗೂ ಜ್ಞಾನಶಕ್ತಿ ಇವಗಳ ಅವಶ್ಯಕತೆ ಇದ್ದು ಅದು ಧರ್ಮದಿಂದಲೇ ಸಿಗುತ್ತದೆ. ಆದ್ದರಿಂದ ಧರ್ಮಾಭಿಮಾನಿ ನಾಗರಿಕರೇ ಆದರ್ಶ ನ್ಯಾಯವ್ಯವಸ್ಥೆ ನಿರ್ಮಾಣ ಮಾಡಿ ಅದನ್ನು ಕಾರ್ಯರೂಪಕ್ಕೆ ತರಬಹುದು. ಅದಕ್ಕಾಗಿ ಧರ್ಮಪ್ರೇಮಿ ನ್ಯಾಯವಾದಿಗಳು ಪ್ರಯತ್ನಿಸಬೇಕಿದೆ ಎಂದು ತಿಳಿಸಿದರು.
ಆದರ್ಶ ನ್ಯಾಯವ್ಯವಸ್ಥೆಗಾಗಿ ನ್ಯಾಯವಾದಿಗಳು ಪ್ರಯತ್ನಿಸುವುದು ಆವಶ್ಯಕ ಎಂದು ನ್ಯಾಯವಾದಿ ನೀಲೇಶ ಸಾಂಗೋಲಕರ ಹೇಳಿದರು.
ಇಂದಿನ ನ್ಯಾಯಾಂಗ ವ್ಯವಸ್ಥೆ ಪದ್ಧತಿ ಬ್ರಿಟಿಷರದ್ದಾಗಿದೆ. ಅದರಲ್ಲಿ ನ್ಯಾಯವು ತಡವಾಗಿ ಸಿಗುತ್ತಿರುವುದು ಅನ್ಯಾಯಕಾರಿಯಾಗಿದೆ. ಹಾಗಾಗಿ ಈ ಕೊರತೆಯನ್ನು ನೀಗಿಸಲು ನ್ಯಾಯವಾದಿಗಳು ಪ್ರಯತ್ನಿಸಬೇಕು ಎಂದರು.
ನ್ಯಾಯವ್ಯವಸ್ಥೆಯಲ್ಲಿನ ಭ್ರಷ್ಟಾಚಾರವನ್ನು ಸಮಾಜದ ಎದುರು ತಂದು ಜನರಿಂದ ಆದರ್ಶ ವ್ಯವಸ್ಥೆ ನಿರ್ಮಿಸುವ ಹೊಣೆಯು ನಮ್ಮ ಮೇಲಿದೆ. ಪ್ರಸ್ತುತ ಅಸ್ತಿತ್ವದಲ್ಲಿರುವ ಕಾನೂನನ್ನು ಬಳಸಿ ಅನ್ಯಾಯ ಪೀಡಿತರಿಗೆ ನ್ಯಾಯ ದೊರಕಿಸಿಕೊಡಲು ಹಾಗೂ ನಿರಪರಾಧಿಗಳ ವಿರುದ್ಧ ಸುಳ್ಳು ಅಪರಾಧವನ್ನು ದಾಖಲಿಸುವ ಪೊಲೀಸರ ವಿರುದ್ಧ ಕಾನೂನುಕ್ರಮಕೈಗೊಳ್ಳಲು ನಾವು ಪ್ರಯತ್ನಿಸಬೇಕು ಎಂದರು.
ನ್ಯಾಯವಾದಿ ಹರಿಶಂಕರ್ ಜೈನ್ ಮಾತನಾಡಿ, ದೇಶದ ಸಂಪತ್ತಿನ ಮೇಲೆ ಮೊದಲನೇಯ ಅಧಿಕಾರ ಹಿಂದೂಗಳದ್ದಾಗಿದೆ. ಸ್ವಾತಂತ್ರ್ಯನಂತರ ರಾಜಕಾರಣಿಗಳು ಅನೇಕಬಾರಿ ಸಂವಿಧಾನದಲ್ಲಿ ತಿದ್ದುಪಡಿ ಮಾಡಿದರು. ಕೆಲವು ಜಾತ್ಯತೀತ ರಾಜಕಾರಣಿಗಳು ದೇಶದ ಸಂಪತ್ತಿನ ಮೇಲೆ ಮುಸಲ್ಮಾನರಿಗೆ ಮೊದಲ ಅಧಿಕಾರವಿದೆ ಎಂದು ಹೇಳಿದರು.
ಆದರೆ ಈ ದೇಶ ದೇವರ, ಹಿಂದೂ ಧರ್ಮದ ಮತ್ತು ಇಲ್ಲಿನ ಮೂಲನಿವಾಗಳಾದ ಹಿಂದೂಗಳದ್ದಾಗಿದೆ. ಹಾಗಾಗಿ ಇಲ್ಲಿನ ಭೂಮಿ ಮತ್ತು ಸಾಧನ ಸಂಪತ್ತು ಮೊದಲು ಹಿಂದೂಗಳದ್ದಾಗಿದ್ದು ಅಲ್ಪಸಂಖ್ಯಾತರಿಗೆ ಅದರ ಮೇಲೆ ಅಧಿಕಾರವಿರಲು ಸಾಧ್ಯವಿಲ್ಲ ಎಂದರು.
ಅಧಿವೇಶನದ ಸಮಾರೋಪದಲ್ಲಿ ಸದ್ಗುರು ಡಾ. ಚಾರುದತ್ತ ಪಿಂಗಳೆಯವರು ಹಿಂದೂ ರಾಷ್ಟ್ರಕ್ಕಾಗಿ ನ್ಯಾಯವಾದಿಗಳ ಯೋಗದಾನ ಹಾಗೂ ಮುಂಬರುವ ಕಾಲದಲ್ಲಿ ಸಂಘಟಿತವಾಗಿ ಮಾಡುವ ಪ್ರಯತ್ನ ಮುಂತಾದವುಗಳ ಬಗ್ಗೆ ಮಾರ್ಗದರ್ಶನ ಮಾಡಿದರು.
Discussion about this post