ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಝೀ ಕನ್ನಡ ಝೀ ಎಂಟರ್ಪ್ರೈಸಸ್ ಲಿಮಿಟೆಡ್(ಝೀಲ್) ಕನ್ನಡದ ಸಾಮಾನ್ಯ ಮನರಂಜನಾ ಚಾನೆಲ್ ಆಗಿದೆ.
ಮೇ 2006ರಲ್ಲಿ ಪ್ರಾರಂಭವಾದ ಝೀ ಕನ್ನಡ ಜನಪ್ರಿಯ ಮನರಂಜನೆಯ ಆದ್ಯತೆಯಾಗಿದ್ದು ವಿಶ್ವದಾದ್ಯಂತ ಕನ್ನಡ ವೀಕ್ಷಕರನ್ನು ರಂಜಿಸುವ ಅಸಂಖ್ಯ ಕಾರ್ಯಕ್ರಮಗಳನ್ನು ನೀಡುತ್ತಿದೆ. ಚಲನಚಿತ್ರಗಳು, ಧಾರಾವಾಹಿಗಳು ಗೇಮ್’ಗಳು, ಟಾಕ್ ಶೋಗಳು ಮತ್ತು ಪ್ರಚಲಿತ ವಿದ್ಯಮಾನಗಳ ಕಾರ್ಯಕ್ರಮಗಳಿಂದ ಈ ಚಾನೆಲ್ ಬಹು ಪ್ರಕಾರಗಳ ಕೊಡುಗೆಗಳನ್ನು ನೀಡುತ್ತಿದೆ ಮತ್ತು ಮನರಂಜನೆಯ ಪ್ರಮುಖ ತಾಣವಾಗಿ ಅಪಾರ ಮೆಚ್ಚುಗೆ ಪಡೆದಿದೆ.
ಝೀ ಕನ್ನಡ ಹಲವು ಬ್ಲಾಕ್ ಬಸ್ಟರ್ ಕಾರ್ಯಕ್ರಮಗಳಾದ ವೀಕೆಂಡ್ ವಿಥ್ ರಮೇಶ್, ಸರೆಗಮಪ ಮತ್ತು ಡ್ರಾಮಾ ಜೂನಿಯರ್ಸ್ ಮುಂತಾದವುಗಳನ್ನು ಸೃಷ್ಟಿಸಿದ್ದು ಎಲ್ಲ ವಯೋಮಾನದ ವೀಕ್ಷಕರಿಗೂ ಇಷ್ಟವಾಗುತ್ತವೆ.
ಕಂಟೆಂಟ್ ಮತ್ತು ಕಾರ್ಯಕ್ರಮದ ಆಯ್ಕೆಯ ಸಮತೋಲಿತ ಮಿಶ್ರಣವಾದ ಝೀ ಕನ್ನಡ ಕರ್ನಾಟಕದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಜಿಇಸಿಗಳಲ್ಲಿ ಒಂದಾಗಿದೆ. ಝೀ ಕನ್ನಡ ಎಲ್ಲ ಕೇಬಲ್ ಮತ್ತು ಡಿಜಿಟಲ್ ಪ್ಲಾಟ್’ಫಾರಂಗಳಲ್ಲಿ ಉತ್ತಮ ಸಂಪರ್ಕ ಹೊಂದಿದೆ. ಈ ಚಾನೆಲ್ ಝೀಲ್ ಡಿಜಿಟಲ್ ಮತ್ತು ಮೊಬೈಲ್ ಮನರಂಜನೆಯ ಪ್ಲಾಟ್’ಫಾರಂ ಝೀ5ನಲ್ಲಿ ಕೂಡಾ ಲಭ್ಯವಿದ್ದು ನೀವು ನಿಮ್ಮ ಅಚ್ಚುಮೆಚ್ಚಿನ ಝೀ ಕನ್ನಡ ಶೋಗಳನ್ನು ತಪ್ಪಿಸಿಕೊಳ್ಳದಂತೆ ದೃಢಪಡಿಸುತ್ತದೆ.
ಆರ್.ಕೆ. ನಾರಾಯಣ್ ಅವರ ಬರಹಗಳ ಆಧಾರಿತ ’ಮಾಲ್ಗುಡಿ ಡೇಸ್’ ಧಾರಾವಾಹಿಯನ್ನು 1986ರಲ್ಲಿ ಖ್ಯಾತ ನಿರ್ದೇಶಕ, ನಟ ಶಂಕರ್ ನಾಗ್ ದೂರದರ್ಶನಕ್ಕಾಗಿ ನಿರ್ದೇಶಿಸಿದ್ದರು. ಆ ಕಾಲದಲ್ಲಿ ಮಾಲ್ಗುಡಿ ಡೇಸ್ ಅಪಾರ ಜನಮನ್ನಣೆ ಗಳಿಸಿತ್ತು.
ರಾಷ್ಟ್ರೀಯ ಚಾನೆಲ್’ನಲ್ಲಿ ಕನ್ನಡಿಗರು ರೂಪಿಸಿದ ಯಶಸ್ವಿ ಧಾರಾವಾಹಿ, ದಿ.ಶಂಕರ್’ನಾಗ್ ನಿರ್ದೇಶನದ ‘ಮಾಲ್ಗುಡಿ ಡೇಸ್’ ಝೀ ಕನ್ನಡ ವಾಹಿನಿಯಲ್ಲಿ ಮೇ 11ರಿಂದ ಕನ್ನಡ ಭಾಷೆಯಲ್ಲಿ ಪ್ರಸಾರವಾಗಲಿದೆ.
ಮೇ 11ರ ಇಂದಿನಿಂದ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9.30ಕ್ಕೆ ಪ್ರಸಾರವಾಗಲಿದ್ದು ಇದು ಕನ್ನಡ ಕಿರುತೆರೆಯಲ್ಲಿಯೇ ಪ್ರಪ್ರಥಮ ಪ್ರಯತ್ನವಾಗಿದೆ. ವಿಶ್ವವಿಖ್ಯಾತ ಲೇಖಕ ಆರ್.ಕೆ. ನಾರಾಯಣ್ ಅವರ ಮಾಲ್ಗುಡಿ ಡೇಸ್ ಅವರ ಜನಪ್ರಿಯ ಕಥಾಗುಚ್ಛವಾಗಿದೆ. ಮಾಲ್ಗುಡಿ ಎಂಬ ಕಲ್ಪಿತ ಊರಿನಲ್ಲಿ ನಡೆಯುವ ಈ ಕಥೆಯನ್ನು ಅವರ ಕಲ್ಪನೆಯಂತೆಯೇ ರೂಪಿಸಿದ್ದಕ್ಕೆ ಶಂಕರ್ ನಾಗ್ ಲೇಖಕರಿಂದ ಅಪಾರ ಪ್ರಶಂಸೆ ಪಡೆದಿದ್ದರು. ವಿಷ್ಣುವರ್ಧನ್, ಅನಂತ್’ನಾಗ್, ಗಿರೀಶ್ ಕಾರ್ನಾಡ್, ಮಾಸ್ಟರ್ ಮಂಜುನಾಥ್, ವೈಶಾಲಿ ಕಾಸರವಳ್ಳಿ, ಬಿ. ಜಯಶ್ರೀ, ಶಂಕರ್ ನಾಗ್, ಅರುಂಧತಿ ನಾಗ್ ಮುಂತಾದವರು ನಟಿಸಿದ್ದಾರೆ.
ಮಾಲ್ಗುಡಿ ಡೇಸ್ 39 ಕಂತುಗಳಲ್ಲಿ 1986ರಲ್ಲಿ ದೂರದರ್ಶನದಲ್ಲಿ ಪ್ರಸಾರವಾಗಿತ್ತು. ಈ ಧಾರಾವಾಹಿಯ ಮಾಲ್ಗುಡಿಯನ್ನು ಶಂಕರ್ ನಾಗ್ ಶಿವಮೊಗ್ಗ ಜಿಲ್ಲೆಯ ಆಗುಂಬೆಯಲ್ಲಿ ರೂಪಿಸಿದ್ದರು. ಎಲ್. ವೈದ್ಯನಾಥನ್ ಸಂಗೀತ, ಆರ್.ಕೆ. ನಾರಾಯಣ್ ಅವರ ಸೋದರ ರ್.ಕೆ. ಲಕ್ಷ್ಮಣ್ ಅವರ ಚಿತ್ರಗಳು ಈ ಧಾರಾವಾಹಿಯ ಮಹತ್ವ ಹೆಚ್ಚಿಸಿವೆ. ಈ ಸರಣಿಯನ್ನು ಟಿ.ಎಸ್. ನರಸಿಂಹನ್ ನಿರ್ಮಾಣ ಮಾಡಿದ್ದರು.
ಈ ಧಾರಾವಾಹಿ ಸ್ವಾಮಿ ಅಂಡ್ ಫ್ರೆಂಡ್ಸ್, ಎ ಹಾರ್ಸ್ ಅಂಡ್ ಟು ಗೋಟ್ಸ್, ಅನ್ ಅಸ್ಟ್ರಾಲಜರ್ಸ್ ಡೇ ಮತ್ತಿತರೆ ಸಣ್ಣ ಕಥೆಗಳು ಹಾಗೂ ಸ್ವಾಮಿ ಅಂಡ್ ಫ್ರೆಂಡ್ಸ್ ಮತ್ತು ದಿ ವೆಂಡರ್ ಆಫ್ ಸ್ವೀಟ್ಸ್ ಕಾದಂಬರಿಯನ್ನು ಆಧರಿಸಿದೆ.
ಮಾಲ್ಗುಡಿಯ ಕರ್ತೃ ಆರ್.ಕೆ. ನಾರಾಯಣ್ ಚೆನ್ನೈನಲ್ಲಿ ಜನಿಸಿದರೂ ತಮ್ಮ ಬಹುತೇಕ ಜೀವನವನ್ನು ಮೈಸೂರಿನಲ್ಲಿ ಕಳೆದರು. ಅವರು ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಪದ್ಮ ವಿಭೂಷಣ ಮತ್ತು ಪದ್ಮ ಭೂಷಣ ಪುರಸ್ಕಾರಗಳನ್ನು ಪಡೆದಿದ್ದರು. ರಾಯಲ್ ಸೊಸೈಟಿ ಆಫ್ ಲಿಟರೇಚರ್ ನೀಡುವ ಎಸಿ ಬೆನ್ಸನ್ ಮೆಡಲ್ ಗೌರವಕ್ಕೂ ಭಾಜನರಾಗಿದ್ದರು. ವಿಶ್ವ ಸಾಹಿತ್ಯದಲ್ಲಿ ಪ್ರಮುಖ ಭಾರತೀಯ ಲೇಖಕರಲ್ಲಿ ಒಬ್ಬರೆನಿಸಿದ್ದಾರೆ.
ಅವರ ಮಾಲ್ಗುಡಿ ಸಾಹಿತ್ಯಾಸಕ್ತರಿಗೆ ಕುತೂಹಲ ಕೆರಳಿಸುವ ತಾಣವಾಗಿದೆ. ಅವರು ಬರೆದಿದ್ದು ಶ್ರೀಸಾಮಾನ್ಯರ ಕಥೆಗಳಾಗಿದ್ದು ಅವು ಓದುಗರನ್ನು ಅಪಾರವಾಗಿ ಸೆಳೆದಿವೆ.
Get in Touch With Us info@kalpa.news Whatsapp: 9481252093
Discussion about this post