ಹೈದರಾಬಾದ್: ತಾವು ಜನ್ಮ ಕೊಟ್ಟ ಮಕ್ಕಳು ಎಂದರೆ ಮನುಷ್ಯರಿಗೆ ಮಾತ್ರವಲ್ಲ, ಪ್ರಾಣಿ-ಪಕ್ಷಗಿಳಿಗೂ, ಕ್ರಿಮಿ ಕೀಟಗಳಿಗೂ ಸಹ ಮಮಕಾರವಿರುತ್ತದೆ. ಆದರೆ, ಇಲ್ಲೊಬ್ಬ ತಂದೆ ತನ್ನ ಮಗುವನ್ನೇ ಬಡಿದು ಕೋಪ ತೀರಿಸಿಕೊಂಡಿದ್ದಾನೆ.
ಹೈದರಾಬಾದ್ನಲ್ಲಿ ಈ ಘಟನೆ ನಡೆದಿದ್ದು, ಮನೆಯಲ್ಲಿ ಜಗಳ ಮಾಡಿಕೊಂಡಿದ್ದ ಆಟೋ ಚಾಲಕನೊಬ್ಬರ, ಪತ್ನಿಯ ಮೇಲಿನ ಕೋಪಕ್ಕೆ ತನ್ನ ಮಗುವನ್ನೇ ಆಟೋಗೆ ಬಡಿದಿದ್ದಾನೆ.
#WATCH Man in an inebriated state bangs his 3-yr-old son against an auto-rickshaw following a quarrel with his wife. Child handed over to Child Welfare Committee. Case registered under Sec 324 of IPC & Sec 75 of the Juvenile Justice Act; Accused absconding (9.07.18) #Hyderabad pic.twitter.com/8YWjfrEdjN
— ANI (@ANI) July 10, 2018
ಶಿವ ಗೌಡ್ 40 ಮಗುವನ್ನು ಆಟೋಗೆ ಬಡಿದು ಆಕ್ರೋಶ ವ್ಯಕ್ತಪಡಿಸುವ ವ್ಯಕ್ತಿಯಾಗಿದ್ದು, ಘಟನೆ ಬಳಿಕ ವ್ಯಕ್ತಿ ತಲೆಮರೆಸಿಕೊಂಡಿದ್ದಾನೆ.
ಆರೋಪಿ ಶಿವ ಗೌಡ್ ಕುಡಿದ ಮತ್ತಿನಲ್ಲಿ ಭಾನುವಾರ ತನ್ನ ಪತ್ನಿಯೊಂದಿಗೆ ಜಗಳ ಮಾಡಿಕೊಂದ್ದು, ಈ ವೇಳೆ ಪತ್ನಿ ಮೇಲಿನ ಕೋಪಕ್ಕೆ ತನ್ನ ಮೂರು ವರ್ಷದ ಮಗುವನ್ನು ಆಟೋಗೆ ಬಡಿದು ಕೋಪ ತೀರಿಸಿಕೊಂಡಿದ್ದಾನೆ.
ಘಟನೆಯ ದೃಶ್ಯಾವಳಿಗಳು ಸಿಸಿಟಿವಿಗಳಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದು ಸಾಕಷ್ಟು ಆಕ್ರೋಶಕ್ಕೂ ಕಾರಣವಾಗಿದೆ.
Discussion about this post