ಕಲ್ಪ ಮೀಡಿಯಾ ಹೌಸ್ | ಮಂಡ್ಯ |
ಕೆ.ಆರ್.ಪೇಟೆ ತಾಲ್ಲೂಕು ಅಂಬಿಗರಹಳ್ಳಿ ಹತ್ತಿರ ತ್ರಿವೇಣಿ ಸಂಗಮದಲ್ಲಿ ಕುಂಭವೇಳ ಅ.13 ರಿಂದ 16 ರವರೆಗೆ ಕುಂಭಮೇಳ ಅದ್ಧೂರಿಯಾಗಿ ನಡೆಯಲಿದೆ. ಈ ಬೃಹತ್ ಕುಂಭಮೇಳ ಕಾರ್ಯಕ್ರಮಕ್ಕೆ ಅಧಿಕಾರಿಗಳು ಸಕಲ ಸಿದ್ಧತೆ ಮಾಡಿಕೊಳ್ಳಿ ಎಂದು ಜಿಲ್ಲಾಧಿಕಾರಿ ಎಸ್. ಅಶ್ವತಿ ರವರು ತಿಳಿಸಿದರು.
ಜಿಲ್ಲಾಪಂಚಾಯತ್ ನ ಕಾವೇರಿ ಸಭಾಂಗಣದಲ್ಲಿ ಕೆ.ಆರ್.ಪೇಟೆ ತಾಲ್ಲೂಕು ಅಂಬಿಗರಹಳ್ಳಿ ಹತ್ತಿರ ತ್ರಿವೇಣಿ ಸಂಗಮದಲ್ಲಿ ಕುಂಭವೇಳ ಆಚರಿಸುವ ಕುರಿತು ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.

ಮೂಲ ಸೌಕರ್ಯಗಳಾದ ರಸ್ತೆ, ಶೌಚಾಲಯ,ವಾಹನ ನಿಲ್ದಾಣ, ಕುಡಿಯುವ ನೀರು, ಉಪಾಹಾರ, ನೈರ್ಮಲ್ಯ, ತಂಗುದಾಣಗಳು, ವೈದ್ಯಕೀಯ ಸೇವೆಗಳು ಮತ್ತು ತುರ್ತಚಕಿತ್ಸೆ, ಅಗ್ನಶಾಮಕದಳ, ರಕ್ಷಣಕಾರ್ಯ, ವಿದ್ಯುತ್ ದೀಪಾಲಂಕಾರ, ಮಾಹಿತಿ ಕೇಂದ್ರ ಗಳ ವ್ಯವಸ್ಥೆ ಕಲ್ಪಿಸಲು ಸಿದ್ಧತೆ ಮಾಡಿಕೊಳ್ಳಿ ಎಂದರು.

ಜ್ಯೋತಿ ಯಾತ್ರೆ ಸಂಚರಿಸುವ ಮೂರು ಮಾರ್ಗಗಳಿಗೆ ಸಂಬಂಧಿಸಿದಂತೆ ಮಾರ್ಗ ಅಧಿಕಾರಿಗಳನ್ನು ನೇಮಿಸಲಾಗಿದೆ. ರಥ ಸಂಚರಿಸುವ ಮಾರ್ಗದಲ್ಲಿ ಭಕ್ತರು ನೀಡುವ ದವಸ ಧಾನ್ಯಗಳನ್ನು ಸ್ವೀಕರಿಸುವ ವ್ಯವಸ್ಥೆಯನ್ನು ಮಾಡಲಾಗಿದೆ ಎಂದರು.

ಸಭೆಯಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಪಾಂಡವಪುರ ಉಪವಿಭಾಗಾಧಿಕಾರಿ ಶಿವಾನಂದಮೂರ್ತಿ,ಉಪವಿಭಾಗಾಧಿಕಾರಿ ಆರ್.ಐಶ್ವರ್ಯ , ಜಿ ಪಂ.ಉಪಕಾರ್ಯದರ್ಶಿ ಸರಸ್ವತಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.










Discussion about this post