ಕಲ್ಪ ಮೀಡಿಯಾ ಹೌಸ್ | ಮಂಡ್ಯ |
ಸ್ವಾತಂತ್ರ್ಯ ಹೋರಾಟದ ಜೊತೆಗೆ ಕರ್ನಾಟಕದ ಏಕೀಕರಣಕ್ಕೂ ಮಂಡ್ಯ ಜಿಲ್ಲೆ ಮಹತ್ವದ ಕೊಡುಗೆ ನೀಡಿದೆ. ಸಹುಕಾರ್ ಚನ್ನಯ್ಯ ಹಾಗೂ ಕುವೆಂಪು ಅವರು ಇಬ್ಬರೂ ಇಲ್ಲದಿದ್ದರೆ ಕರ್ನಾಟಕದ ಏಕೀಕರಣ ಆಗುತ್ತಿರಲಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ #Basavaraja Bommai ಹೇಳಿದರು.
ಅವರು ಇಂದು ಸಾಂಸ್ಕೃತಿಕ ಟಸ್ಟ್, ಮಂಡ್ಯ ಕರ್ನಾಟಕ ಸಂಘದ ಜೊತೆಗೂಡಿ ಕೊಡಮಾಡುವ 27ನೇ ವರ್ಷದ ದೇವಮ್ಮ ಇಂಡವಾಳು ಎಚ್. ಹೊನ್ನಯ್ಯ, ಇಂಡವಾಳು ಎಚ್. ಹೊನ್ನಯ್ಯ ಸಮಾಜ ಸೇವಾ ಪ್ರಶಸ್ತಿ ಮತ್ತು ಎಚ್. ಶಾರದಮ್ಮ ಮತ್ತು ಕೆಂಪಯ್ಯ ವಿದ್ಯಾರ್ಥಿ ಪುರಸ್ಕಾರ ಸಮಾರಂಭದಲ್ಲಿ ಪಾಲ್ಗೊಂಡು ಪ್ರಶಸ್ತಿ ಪ್ರದಾನ ಮಾಡಿದರು.
ಇದೊಂದು ಅಪರೂಪವಾಗಿರುವ ಹೃದಯಸ್ಪರ್ಷಿ ಕಾರ್ಯಕ್ರಮ, ಇಲ್ಲಿ ನಮ್ಮ ಇತಿಹಾಸ ಇದೆ. ಪರಂಪರೆ, ನಮ್ಮ ಪ್ರಸ್ತುತತೆ ಇದೆ. ಅದರೊಂದಿಗೆ ನಮ್ಮ ಭವಿಷ್ಯವೂ ಇದೆ. ಈ ಮೂರು ಕಾಲಗಳ ಸಂಗಮ ಈ ಪಶಸ್ತಿ ಪ್ರದಾನ ಸಮಾರಂಭ. ಜಯಪ್ರಕಾಶ ಗೌಡರ ನೇತೃತ್ವದಲ್ಲಿ ಒಂದು ಸತ್ಯ, ಸಾತ್ವಿಕ ಚಿಂತನೆ ಇರುವವರ ನೇತೃತ್ವದಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮಕ್ಕೆ ಬಹಳ ಮಹತ್ವ ಬಂದಿದೆ ಎಂದರು.
Also read: ಭದ್ರಾವತಿ | ನಗರಸಭೆ ಮೂವರು ಸದಸ್ಯರು ಬಿಜೆಪಿಯಿಂದ ಉಚ್ಛಾಟನೆ | ಕಾರಣವೇನು?
ಮಂಡ್ಯ ಆಂದರೆನೇ ವಿಶೇಷ. ಮಂಡ್ಯ ಇಸ್ ಇಂಡಿಯಾ ಅಂತ ಹೇಳುತ್ತಾರೆ. ಅದು ಹಲವಾರು ರೀತಿಯಲ್ಲಿ ಸತ್ಯ ಇದೆ. ಮಂಡ್ಯ ಇಸ್ ಮೋರ್ ದ್ಯಾನ್ ಇಂಡಿಯಾ ಯಾಕೆಂದರೆ, ಮಂಡ್ಯದಲ್ಲಿ ಭಾವನೆಗಳಿವೆ. ಒಂದು ಪ್ರದೇಶದ ಜೀವಾಳ ಭಾವನೆಗಳು. ಕಟ್ಟಡಗಳು, ರಸ್ತೆಗಳು, ಆಸ್ತಿಗಳು, ಅಭಿವೃದ್ಧಿ ಕಾರ್ಖಾನೆ ಒಂದು ಭಾಗ. ಅದು ನಾಗರಿಕತೆ ಒಂದು ಭಾಗ. ಆದರೆ, ಈ ನಾಡು ನಮ್ಮದು. ಈ ನೆಲ ನಮ್ಮದು ಎನ್ನುವ ಭಾವನೆ ಅದು ಸ್ವಾರ್ಥದ ಪ್ರತೀಕ ಅಲ್ಲ. ಅದು ಪ್ರೀತಿಯ ಪ್ರತೀಕ. ಅಂತಹ ಒಂದು ಭಾವನೆ ಮಂಡ್ಯದಲ್ಲಿ ನಾನು ಕಾಣುತ್ತೇನೆ. ಆ ಪ್ರೀತಿ ಇರುವುದರಿಂದಲೇ ನೀವು ಸಂಘರ್ಷವನ್ನೂ ಮಾಡುತ್ತೀರಿ. ಪ್ರೀತಿಯನ್ನೂ ಮಾಡುತ್ತೀರಿ. ಯಾರು ನೆಲೆಗಟ್ಟಿಗೆ ಸ್ಪಂದಿಸುತ್ತಾರೆ ಅವರನ್ನು ಪ್ರೀತಿಸುತ್ತೀರಿ. ಯಾರು ಸ್ಪಂದಿಸುವುದಿಲ್ಲ ಅವರೊಂದಿಗೆ ಸಂಘರ್ಷ ಮಾಡುತ್ತೀರಿ. ಇದೇ ನನಗೆ ಪ್ರತಿ ಬಾರಿ ಮಂಡ್ಯಕ್ಕೆ ಬಂದಾಗ ಸ್ಫೂರ್ತಿ ಕೊಡುತ್ತದೆ ಎಂದರು.
ಇಲ್ಲಿ ಹಲವಾರು ವಿಚಾರಗಳನ್ನು ಪಸ್ತಾಪ ಮಾಡಿದ್ದಾರೆ. ಅದು ನನ್ನ ಸಾಧನೆ ಅಂಥ ಹೇಳಿಕೊಳ್ಳುವುದಿಲ್ಲ. ಅದೊಂದು ಜವಾಬ್ದಾರಿ ಕಾಯಕಕ್ಕೂ, ಕರ್ತವ್ಯಕ್ಕೂ ವ್ಯತ್ಯಾಸ ಇದೆ. ಯಾವುದನ್ನು ನಮಗೆ ವಹಿಸಿದ್ದಾರೆ. ಅದು ಕರ್ತವ್ಯ ಅದನ್ನು ಮೀರಿ ಕರ್ತವ್ಯದಲ್ಲಿ ಬಂದಿರುವುದನ್ನು ಇಲ್ಲದವರಿಗೆ ಹಂಚಿಕೊಳ್ಳುವುದು ಅವರಿಗೆ ಆಶ್ರಯ ಕೊಡುವುದು ಕಾಯಕ. ಅದು ಕರ್ತವ್ಯ ಮೀರಿದ್ದು. ಅದು ಪರಿಪೂರ್ಣತೆ ಆಗುತ್ತದೆ ಎಂದು ಹೇಳಿದರು
ನಾನು ನೀರಾವರಿ ಸಚಿವ ಆಗಿದ್ದೆ, ಒಂದು ತಿಂಗಳಲ್ಲಿ ಕೆಆರ್‌ಎಸ್ ಡ್ಯಾಂ ಸೇಫ್ಟಿ ವರದಿನೋಡಿದಾಗ ನಾನೇ ಕುದ್ದು ನೋಡಬೇಕೆಂದು ಬಂದೆ. ಇಂಜನೀಯರ್ ಕೆಳಗೆ ಇಳಿಯುವುದು ಬೇಡ ಎಂದರು. ಆದರೂ ನಾನು ಕೆಳಗೆ ಇಳಿದು ನೋಡಿದೆ. ಸುಮಾರು ಪ್ಲಸ್ 80 ಹತ್ತಿರ ನೀರು ಬಂದಾಗ ಸುಮಾರು 300 ಕ್ಯೂಸೆಕ್ ನೀರು ಹರಿಯುತ್ತಿತ್ತು. ಅಲ್ಲಿ ಗೋಣಿ ಚೀಲ ಹಾಕಲಾಗಿತ್ತು. ಒಂದೊಂದು ಹನಿಗೂ ಸುಪ್ರೀಂ ಕೋರ್ಟ್‌ನಲ್ಲಿ ಹೋರಾಟ ಮಾಡುತ್ತಿದ್ದೇವೆ. ಇಲ್ಲಿ ಈ ರೀತಿ ನೀರು ಹರಿಯಲು ಬಿಡುತ್ತಿದ್ದೀರಿ ಎಂದು ಪ್ರಶ್ನಿಸಿದೆ. ಅದನ್ನು ಬಹಳ ವರ್ಷಗಳಿಂದ ನಡೆಯುತ್ತಿದೆ ಎಂದರು. ಅದನ್ನು ಬದಲಾಯಿಸಲು ಅಧಿಕಾರಿಗಳು ಬೇಡ ಎಂದರು. ಮಹಾರಾಜರು ಕಟ್ಟಿದ್ದು, ವಿಶ್ವೇಶ್ವರಯ್ಯ ಕಟ್ಟಿದ್ದು, ಇದನ್ನು ಬದಲಾಯಿಸಲು ಆಗುವುದಿಲ್ಲ ಎಂದು ಹೇಳಿದರು.
ನಾನು ಇಲ್ಲಿಗೆ ಬಂದು ಹೋದ ನಂತರ ಎರಡು ದಿನ ನಿದ್ದೆಯೇ ಬರಲಿಲ್ಲ. ಅಲ್ಲಿಂದ ಎಂಜನೀಯರ್‌ಗೆ ಕಾಲ್ ಮಾಡಿ ಯಾವುದೇ ಚರ್ಚೆ ಇಲ್ಲದೇ ತೀರ್ಮಾಣ ಮಾಡಲಾಗುವುದು ಎಂದು ಹೇಳಿದೆ. ಮೈಸೂರಿನಲ್ಲಿ ಗೇಟ್ ಮಾಡಿದ ಕಾರ್ಖಾನೆ ಬಂದ್ ಆಗಿತ್ತು. ತುಂಗಭದ್ರಾದಲ್ಲಿ ಗೇಟ್ ಹಾಕಿರುವ ಟೀಮ್ ಜೊತೆ ಚರ್ಚಿಸಿ 16 ಗೇಟ್‌ಗಳನ್ನು ಬದಲಾಯಿಸಲಾಯಿತು. ಯಾವುದೇ ನೀರು ಪೋಲಾಗದಂತೆ ನೋಡಿಕೊಳ್ಳಲಾಯಿತು. ಗೇಟ್ ಹಾಗೂ ಡ್ಯಾಮ್ ಸುರಕ್ಷಿತವಾಗಿರಬೇಕೆಂದು ನಾನು ಆ ಕೆಲಸ ಮಾಡಿದ್ದೇನೆ. ಆ ಸಮಾಧಾನ ನನಗಿದೆ. ಈ ನಾಡಿನ ರೈತರು ಭೂಮಿ ತಾಯಿಗೆ ಬೆವರು ಕೊಡುತ್ತಾರೆ. ಅದೇ ಭೂಮಿ ತಾಯಿಗೆ ಬೆವರಿನ ಹನಿಯ ಜೊತೆಗೆ ಗಂಗಾ ಮಾತೆಯ ನೀರಿನ ಹನಿ ಸೇರಿದರೆ ಭೂಮಿತಾಯಿ ಬಂಗಾರದ ಬೆಳೆ ಕೊಡುತ್ತಾಳೆ ಎಂದರು.
ನಮ್ಮ ತಾಯಿ ಹೆಚ್ಚಿಗೆ ಓದಿರಲಿಲ್ಲ. ಅವಳು ಸಂಬಂಧಿಕರ ಎದುರು ಮಾತನಾಡುವಾಗ ಸ್ವಾತಂತ್ರ್ಯ ಬಂದು ಇಷ್ಟು ವರ್ಷ ಆಯಿತು ದೇಶ ಅಭಿವೃದ್ಧಿ ಆಗಿಲ್ಲ ಎಂದು ಮಾತನಾಡುತ್ತಿದ್ದರು. ಯಾವಾಗ ರೈತರು ಉದ್ಧಾರವಾಗುತ್ತಾರೆ ಅವಾಗ ನಮ್ಮ ದೇಶ ಉದ್ದಾರವಾಗುತ್ತದೆ. ಯಾವ ರೀತಿ ಹೆಣ್ಣು ಮಗಳು ಹಬ್ಬದಲ್ಲಿ ಹಸಿರು ಸೀರೆ ಉಡುತ್ತಾಳೋ ಹಾಗೇ ಭೂಮಿ ತಾಯಿ ಯಾವಾಗ ಹಸಿರು ಸೀರೆ ಉಡುತ್ತಾಳೆ ಆಗ ದೇಶ ಉದ್ದಾರ ಆಗುತ್ತದೆ ಎಂದು ಹೇಳಿದರು. ಆ ಶಬ್ದ ನನಗೆ ಪೇರಣೆ ಕೊಟ್ಟಿತು ಎಂದರು.
ಇಲ್ಲಿನ ಅರ್ವಿನ್ ನಾಲೆ ಮಾಡುವ ಸಲುವಾಗಿ ದೊಡ್ಡ ಹೋರಾಟ ಆಯಿತು. ಮಂಡ್ಯದ ಮಣ್ಣಿನ ಗುಣ ಅದು. ರೈತ ಸಂಘದವರು ಪ್ರತಿಭಟನೆ ಕುಳಿತಾಗ ಅವರ ಬಳಿ ಹೋಗಬೇಡಿ ಎಂದರು. ಅವರು ನಮ್ಮ ಸ್ನೇಹಿತರು ಎಂದು ಅವರ ಬಳಿ ಹೋಗಿ ಕೇಳಿದೆ. ಅವರು ಹೋರಾಟದ ಉದ್ದೇಶ ತಿಳಿಸಿದರು. ಒಂದು ವಾರದಲ್ಲಿ ನಾಲೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದೆ. ಆ ಒಂದು ಮಣ್ಣಿನ ಗುಣ ಇಂಡವಾಳು ಹೊನ್ನಯ್ಯ ಅವರ ಕುಟುಂಬದವಲ್ಲಿ ಇತ್ತು. ಆ ಯೋಚನೆ ಬಂದ ಕ್ಷಣಕ್ಕೆ ನನ್ನ ಹೃದಯಂತರಾಳದ ಕೋಟಿ ಕೋಟಿ ನಮನಗಳು. ಅದು ನಿಜವಾಗಲೂ ಪ್ರೇರಣೆ ಕೊಡುತ್ತದೆ. ಹೋರಾಟದಲ್ಲಿ ಇರುವ ಸುಖ ಅಧಿಕಾರ ಬಂದಾಗ ಇರುವುದಿಲ್ಲ. ನಾನೂ ಕೂಡ ನೀರಾವರಿಗಾಗಿ ಹೋರಾಟ ಮಾಡಿದ್ದೇನೆ. ಜವಾಬ್ದಾರಿ ಬಂದಾಗ ಅದನ್ನು ನಿಭಾಯಿಸುವುದು ಅಷ್ಟೇ ಮುಖ್ಯ ಎಂದು ನಾನು ಭಾವಿಸಿದ್ದೇನೆ ಎಂದರು.
ಇಂದು ರಾಮೇಗೌಡರಿಗೆ ಪಶಸ್ತಿ ಕೊಟ್ಟಿದ್ದೀರಿ, ವಿದ್ಯಾ ಕ್ಷೇತ್ರದಲ್ಲಿ ದೊಡ್ಡ ಸಾಧನೆ ಮಾಡಿದ್ದಾರೆ. ದೂರ ಶಿಕ್ಷಣ ಎಂದರೆ ಮನೆ ಬಾಗಿಲಿಗಿ ಜ್ಞಾನವನ್ನು ಕೊಡುವ ಕೆಲಸ ಮಾಡಿದ್ದಾರೆ. ಮನೆಯಲ್ಲಿಯೇ ಕುಳಿತು ಶಿಕ್ಷಣ ಪಡೆಯುವಂತ ವ್ಯವಸ್ಥೆ ಮಾಡಿದ್ದಾರೆ. ಅವರಿಗೆ ಪಶಸ್ತಿ ಕೊಟ್ಟಿದ್ದು, ಪ್ರಶಸ್ತಿಯ ಮೌಲ್ಯ ಹೆಚ್ಚಾಗಿದೆ ಎಂದರು
ಶೈಲಜಾ ಅವರು ಅತಿ ಹೆಚ್ಚು ಸಮಯ ಕೆಲಸ ಮಾಡಿದ್ದೇನೆ. ನನ್ನ ಕರೆದರೂ ಬರುತ್ತೇನೆ. ಕರೆಯದಿದ್ದರೂ ಬರುತ್ತೇನೆ ಎಂದರು. ಅದೇ ಮಂಡ್ಯದ ಮಣ್ಣಿನ ಗುಣ. ಅವರು ಸಂಬಳ ಪಡೆದಿದ್ದೇನೆ. ಸೇವೆ ಅಲ್ಲ ಎಂದರು. ಕೆಲವು ಸರ್ಕಾರಿ ನೌಕರರು ಅದು ಸೇವೆಯಲ್ಲ ಅಧಿಕಾರ ಎಂದು ಭಾವಿಸಿದ್ದಾರೆ ಎಂದು ಹೇಳಿದರು.
11ನೇ ಶತಮಾನದಲ್ಲಿ ಕಲ್ಯಾಣ ಚಾಲುಕ್ಯರ 6ನೇ ವಿಕ್ರಮಾಧಿತ್ಯನ ಶಿಲಾ ಶಾಸನದಲ್ಲಿ ಆಳುವುದು ಬೇರೆ ಆಡಳಿತ ಮಾಡುವುದು ಬೇರೆ ಎಂದು ಬರೆಯಲಾಗಿದೆ. ಇವತ್ತು ಆಳುವವರು ಆಡಳಿತ ಮಾಡಲು ಹೋಗುತ್ತಿದ್ದಾರೆ. ಯಾವ ತಹಸೀಲ್ದಾರನ್ನು ಎಲ್ಲಿ ಹಾಕಬೇಕು. ಡಿಸಿಯನ್ನು ಯಾರನ್ನು ತರಬೇಕು ಎಂದು ಯೋಚಿಸುತ್ತಿದ್ದೇವೆ. ನಾವು ಆಡಳಿತ ಮಾಡುವ ಕೆಲಸ ಮಾಡುತ್ತಿದ್ದೇವೆ. ಆಡಳಿತ ಮಾಡುವವರು ಯಾವ ರಾಜಕಾರಣಿ ಹೇಗಿದ್ದಾರೆ. ಅವರನ್ನು ಪ್ಲೀಸ್ ಮಾಡಲು ಹೋಗುತ್ತಾರೆ. ಯಾವ ಬ್ಯಾಂಕ್ ಸಾಲ ಕೊಡುತ್ತಾರೆ ಎಂದು ನೋಡಿ ಯೋಜನೆಗಳನ್ನು ರೂಪಿಸುವುದು. ಅದು ನಮಗೆ ಬೇಕಿದೆಯೋ ಇಲ್ಲವೋ ಎನ್ನುವುದನ್ನು ಯೋಚಿಸುವುದಿಲ್ಲ. ಪ್ರಜಾಪ್ರಭುತ್ವ ಯಶಸ್ವಿಂದಾಗಬೇಕೆಂದರೆ ನಮ್ಮ ನಮ್ಮ ಕೆಲಸಗಳನ್ನು ನಾವು ಶ್ರದ್ಧೆಯಿಂದ ಮಾಡಬೇಕು. ಇನ್ನೊಬ್ಬರ ಬಗ್ಗೆ ಚಿಂತೆ ಮಾಡಬಾರದು. ಶೈಲಜಾ ಅವರು ಆ ರೀತಿ ಕೆಲಸ ಮಾಡಿದ್ದಾರೆ. ಅವರಿಗೆ ವಿಶೇಷ ಅಭಿನಂದನೆಗಳು ಎಂದು ಹೇಳಿದರು.
ಒಂದು ಕಾಲದಲ್ಲಿ ಯಾರಿಗೆ ಜಮೀನು ಇತ್ತೊ ಅವರು ವಿಶ್ವವನ್ನು ಆಳುತ್ತಿದ್ದರು. ಮತ್ತೊಂದು ಕಾಲ ಬಂತು ಯಾರ ಬಳಿ ದುಡ್ಡಿದೆಯೋ ಅವರು ಜಗತ್ತು ಆಳಿದರು. ನಮ್ಮ ಕರ್ನಾಟಕಕ್ಕಿಂತಲೂ ಚಿಕ್ಕದಾದ ಗೇಟ್ ಬಿಟನ್‌ನವರು 130 ದೇಶಗಳಲ್ಲಿ ವಸಾಹತು ಸ್ಥಾಪನೆ ಮಾಡಿದರು. 21ನೇ ಶತಮಾನ ಜ್ಞಾನದ ಯುಗ. ಯಾರ ಬಳಿ ಜ್ಞಾನ ಇದೆಯೋ ಅವರು ಜಗತ್ತನ್ನು ಆಳುತ್ತಿದ್ದಾರೆ. ಬಿಲ್ ಕ್ಲಿಂಟನ್ ಮತ್ತು ಬಿಲ್ ಗೇಟ್‌ರಲ್ಲಿ ಪ್ರಸಿದ್ದರು ಎಂಬ ಸಮೀಕ್ಷೆ ನಡೆಸಿದಾಗ ಬಿಲ್‌ಗೇಟ್ ಹೆಚ್ಚು ಪ್ರಸಿದ್ದರು ಎಂದು ಫಲಿತಾಂಶ ಬಂದಿತು.
ಭೂಮಿ ಎಷ್ಟಿದೆಯೋ ಅಷ್ಟೇ ಇದೆ. ಆದರೆ, ಭೂಮಿಯನ್ನು ಅವಲಂಬಿತರ ಸಂಖ್ಯೆ ಹೆಚ್ಚಳವಾಗಿದೆ. ರೈತರ ಮಕ್ಕಳು ಎಲ್ಲ ಉದ್ಯೋಗಗಳಲ್ಲಿ ಇರಬೇಕು. ಮಂಡ್ಯ ಮೋರ್ ದ್ಯಾನ್ ಇಂಡಿಯಾ ಆಗಬೇಕೆಂದರೆ, ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಡಬೇಕು. ಸಂಬಂಧಗಳು ಬಹಳ ಮುಖ್ಯ. ನಾನು ಸಂಬಂಧಗಳಿಗೆ ಬೆಲೆ ಕೊಟ್ಟು ಬಂದಿದ್ದೇನೆ. ಕುಟುಂಬದ ಜೊತೆಗೆ ಸಮಯ ಕಳೆಯಲು ಅವಕಾಶ ಕೊಟ್ಟಿದ್ದಕ್ಕೆ ನಾನು ನಿಮಗೆ ಋಣಿಯಾಗಿದ್ದೇನೆ. ಬದುಕು ತಾಯಿ ಗರ್ಭದಿಂದ ಭೂಗರ್ಭದವರೆಗೆ, ಇಷ್ಟೇ ಬದುಕು. ಸ್ವಾಮಿ ವಿವೇಕಾನಂದರು ಸಾಧಕನಿಗೆ ಸಾವು ಅಂತ್ಯವಲ್ಲ. ಸಾವಿನ ನಂತರವೂ ಬದುಕುವುದು ಸಾಧಕ ಅಂತ ಹೇಳಿದ್ದಾರೆ. ಸಾಧಕರಿಂದ ಸಾಧಕರಿಗೆ ಪಶಸ್ತಿ ಕೊಡುವಂಥದ್ದು ಗುರುತಿಸುವಂತ್ತಷ್ಟು ಜಯಪ್ರಕಾಶ ಗೌಡರ ತತ್ವ ಎಂದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು, ಬಿಜೆಪಿ ಮುಖಂಡ ಡಾ. ಸಿದ್ದರಾಮಯ್ಯ, ಇಂಡವಾಳು ಎಚ್.ಹೊನ್ನಯ್ಯ ಅವರ ಪುತ್ರ ಡಾ. ಎಚ್. ಸಿದೃಪ್ಪ ಹಾಗೂ ಮತ್ತಿತರರು ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post