ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಮಂಡ್ಯ: ಕೆಆರ್’ಎಸ್ ಹಿನ್ನೀರು, ಕಾವೇರಿ ನದಿಯ ಬಲಮುರಿ, ಎಡಮುರಿ ಮತ್ತು ಮುತ್ತತ್ತಿ ಪ್ರವಾಸಿ ತಾಣದಲ್ಲಿ ಹೊಸ ವರ್ಷಾಚರಣೆ ನಿಷೇದಿಸಿ ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ಆದೇಶ ಹೊರಡಿಸಿದ್ದಾರೆ.
ಜಿಲ್ಲೆಯ ಶ್ರೀರಂಗಪಟ್ಟಣದ ಕೃಷ್ಣರಾಜ ಸಾಗರ ಅಣೆಕಟ್ಟೆಯ ಹಿನ್ನೀರು, ಕಾವೇರಿ ನದಿಯ ಹರಿವಿನ ಪ್ರಸಿದ್ದ ಪ್ರವಾಸಿ ತಾಣವಾದ ಬಲಮುರಿ ಮತ್ತು ಯಡಮೂರಿ ಹಾಗೂ ಮಳವಳ್ಳಿ ತಾಲೂಕಿನ ಮುತ್ತತ್ತಿ ಪ್ರವಾಸಿ ತಾಣದಲ್ಲಿ ವರ್ಷಾಚರಣೆಯ ಸಂದರ್ಭದಲ್ಲಿ ನೀರಿನಲ್ಲಿ ಮುಳುಗಿ ಸಾವನಪ್ಪಿದ ಘಟನೆಗಳು ಸಂಭವಿಸಿದೆ.
ಈ ಹಿನ್ನೆಲೆಯಲ್ಲಿ ಹೊಸ ವರ್ಷಾಚರಣೆಗೆ ಹೆಚ್ಚಿನ ಸಂಖ್ಯೆಯಲ್ಲಿ ಈ ಸ್ಥಳಗಳಿಗೆ ಪ್ರವಾಸಿಗರು ಆಗಮಿಸುವುದರಿಂದ ಜಿಲ್ಲೆಯ ಶ್ರೀರಂಗಪಟ್ಟಣದ ಕೆಆರ್’ಎಸ್ ಅಣೆಕಟ್ಟಿನ ಹಿನ್ನೀರು, ಕಾವೇರಿ ನದಿಯ ಪ್ರಸಿದ್ದ ಪ್ರವಾಸಿ ತಾಣ ಬಲಮುರಿ, ಯಡಮುರಿ ಮತ್ತು ಮಳವಳ್ಳಿ ಮುತ್ತತ್ತಿ ಪ್ರವಾಸಿ ತಾಣದಲ್ಲಿ ಯಾವುದೇ ಸಾವು ನೋವು ಸಂಭವಿಸದೇ ಇರಲಿ ಎಂದು ಮುಂಜಾಗ್ರತಾ ಕ್ರಮವಾಗಿ 2020ರ ಡಿ.31 ಮತ್ತು 2021ರ ಜ.1 ರಂದು ಎರಡು ದಿನ ಹೊಸ ವರ್ಷಾಚರಣೆ ನಡೆಸದಂದಂತೆ ಮೇಲಿನ ಸ್ಥಳಗಳಲ್ಲಿ ನಿಷೇಧಿಸಿ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post