ಕಲ್ಪ ಮೀಡಿಯಾ ಹೌಸ್ | ಮಂಡ್ಯ |
ಸರ್ಕಾರ ಕಂದಾಯ ಇಲಾಖೆಯಲ್ಲಿ ಹೊಸ ಸಾಫ್ಟ್ ವೇರ್ ಹಾಗೂ ಹೊಸ ನೀತಿಯನ್ನು ಜಾರಿಗೆ ತಂದು, ಬೆಳೆಹಾನಿಯಾದಂತಹ ಪ್ರದೇಶಗಳ ಸಮೀಕ್ಷೆ ನಡೆಸಿ ಒಂದು ತಿಂಗಳಲ್ಲಿ ಬೆಳೆ ಹಾನಿ ಪರಿಹಾರವನ್ನು ಒದಗಿಸುತ್ತಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ Minister R. Ashok ಅವರು ತಿಳಿಸಿದರು.
ಅವರು ಇಂದು ಜಿಲ್ಲಾ ಉಸ್ತುವಾರಿ ಸಚಿವ ಗೋಪಾಲಯ್ಯ ಕೆ ಹಾಗೂ ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ. ನಾರಾಯಣಗೌಡ ಅವರೊಂದಿಗೆ ಕೆ.ಆರ್. ಪೇಟೆ ತಾಲ್ಲೂಕಿನ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪರಿಶೀಲಿಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ ಬೆಳೆ ಹಾನಿ ಪರಿಹಾರ ಒಂದು ತಿಂಗಳೊಳಗೆ ನೀಡುತ್ತಿದ್ದು, 2 ಸಾವಿರ ಕೋಟಿ ಗಿಂತ ಹೆಚ್ಚಿನ ಹಣವನ್ನು ರೈತರ ಖಾತೆಗೆ ಹಾಕುವಂತಹ ಕೆಲಸವನ್ನು ಮಾಡಿದ್ದೇವೆ ಎಂದು ಹೇಳಿದರು.
ಮಳೆಯಿಂದ ಮಂಡ್ಯ ಜಿಲ್ಲೆಯಲ್ಲಿ ಸುಮಾರು 30 ಮನೆಗಳು ಸಂಪೂರ್ಣ ಹಾನಿಯಾಗಿದೆ , ಭಾಗಶಃ 176 ಮನೆ ಹಾನಿಯಾಗಿದೆ. 46 ಜಾನುವಾರುಗಳು, 168 ಹೆಕ್ಟೇರ್ ಕೃಷಿ ಬೆಳೆ,32 ತೋಟಗಾರಿಕೆ ಬೆಳೆ, 85 ಕಿ.ಮೀ ರಸ್ತೆಗಳು, 37 ಸೇತುವೆ ,9 ಶಾಲೆಗಳು 319 ವಿದ್ಯುತ್ ಕಂಬಗಳು ಹಾನಿಯಾಗಿರುತ್ತದೆ. ಮಂಡ್ಯದಲ್ಲಿ 5 ಕೆರೆಗಳು,ಮದ್ದೂರಿನಲ್ಲಿ 3 ಕೆರೆಗಳು,ನಾಗಮಂಗಲ 1ಕೆರೆ, ಕೆ.ಆರ್.ಪೇಟೆ 5 ಕೆರೆ ಹೆಚ್ಚು ಹಾನಿಯಾಗಿರುವುದು ಈ ಕೂಡಲೇ ಕ್ರಮವಹಿಸುತೇವೆ ಎಂದು ಹೇಳಿದರು.
ರಾಜ್ಯದಲ್ಲಿ ಜೂನ್ ನಿಂದ 4 ನೇ ಆಗಸ್ಟ್ ವರೆಗೆ ಒಟ್ಟು ಪ್ರವಾಹ ಪೀಡಿತ ಜಿಲ್ಲೆ 14, ಪ್ರವಾಹ ಪೀಡಿತ ಗ್ರಾಮಗಳು 115,ಪ್ರವಾಹ ಪೀಡಿತರ ಸಂಖ್ಯೆ 14902, ಪ್ರವಾಹದಿಂದ ಸಾವನ್ನಪ್ಪಿದವರು 64 ಜನ. ಇದರಲ್ಲಿ ಸಿಡಿಲು ಬಡಿತದಿಂದ 16, ಮರ ಬಿದ್ದು 4 ಜನ, ಮನೆ ಕುಸಿತದಿಂದ 15 ಜನ, ಪ್ರವಾಹದ ಸೆಳತಕ್ಕೆ ಸಿಕ್ಕಿ 19 ಜನ, ಭೂ ಕುಸಿತದಿಂದ 9, ವಿದ್ಯುತ್ ಅಪಘಾತದಿಂದ ಒಬ್ಬರು ಸಾವನ್ನಪ್ಪಿದ್ದಾರೆ ಎಂದರು.
Also read: ಹರ್ ಘರ್ ತಿರಂಗ್ ಅಭಿಯಾನ ಯಶಸ್ವಿಗೊಳಿಸಲು ಸ್ವಪ್ರೇರಣೆಯಿಂದ ಮುಂದೆ ಬನ್ನಿ: ಡಿಸಿ
ಇಡೀ ರಾಜ್ಯದಲ್ಲಿ ಸಂಪೂರ್ಣ ಮನೆ ಹಾನಿಯಾಗಿರುವುದು 608, ತೀವ್ರ ಮನೆ ಹಾನಿಯಾಗಿರುವುದು 2445 , ಭಾಗಶಃ ಮನೆ ಹಾನಿ 15074 .ಒಟ್ಟು 8057 ಜನರನ್ನು ಸ್ಥಾಳಂತರ ಮಾಡಲಾಗಿದೆ. ಅವಶ್ಯಕವಿರುವ ಸ್ಥಳಗಳಲ್ಲಿ ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ ಎಂದರು.
ಕಾಳಜಿ ಕೇಂದ್ರದಲ್ಲಿ ಆಶ್ರಿತರಿಗೆ ಮೊಟ್ಟೆ:
ಕಾಳಜಿ ಕೇಂದ್ರದಲ್ಲಿ 6933 ಜನರು ಆಶ್ರಯ ಪಡೆದಿದ್ದು, ಅವರಿಗೆ ಗುಣಮಟ್ಟದ ಬೆಳಗಿನ ತಿಂಡಿ, ಮಧ್ಯಾಹ್ನ ಹಾಗೂ ರಾತ್ರಿ ಊಟ ನೀಡಲಾಗುತ್ತಿದೆ. ಮೊಟ್ಟೆ ಸಹ ನೀಡಲು ತಿಳಿಸಲಾಗಿದೆ ಎಂದರು.
ಬೆಳೆ ಹಾನಿ ಪರಿಹಾರ ಸಕಾಗುತ್ತಿಲ್ಲ ಬಹಳ ಕಡಿಮೆ ಎಂದು ಸಲ್ಲಿಸಿದ ರೈತರ ಮನವಿಗೆ ಸ್ಪಂದಿಸಿ ಸರ್ಕಾರ ಪರಿಹಾರವನ್ನು ಹೆಚ್ಚಳ ಮಾಡಿದೆ ಎಂದರು.
ಮಳೆಹಾನಿಗೆ ಒಳಗಾದವರಿಗೆ ಡ್ರೈ ಕಿಟ್ ವಿತರಣೆ
ಡ್ರೈ ಕಿಟ್ ವಿತರಣೆ ಮಾಡುವಂತಹ ಹೊಸ ಯೋಜನೆಯನ್ನು ಕೆಲವೇ ದಿನಗಳಲ್ಲಿ ಜಾರಿಗೆ ತರಲಾಗುವುದು.ಮಳೆಹಾನಿ ಒಳಗಾದ ಪ್ರದೇಶದಲ್ಲಿ ವೇಗವಾಗಿ ಪರಿಹಾರ ನೀಡಲು ಕ್ರಮವಹಿಸುತ್ತೆವೆ ಎಂದರು.
ಸಚಿವರುಗಳು ಮಾವಿನಕಟ್ಟೆ ಕೊಪ್ಪಲುವಿನಲ್ಲಿ ಕೆರೆ ಕಟ್ಟೆ ಒಡೆದಿರುವುದನ್ನು ಪರಿಶೀಲಿಸಿದರು. ನೀರು ಹೊರ ಹೋಗದಂತೆ ಕೂಡಲೇ ಮರಳಿನ ಚೀಲಗಳನ್ನು ಹಾಕಿ ತಾತ್ಕಾಲಿಕವಾಗಿ ದುರಸ್ತಿಗೊಳಿಸುವಂತೆ ಸೂಚಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post