ಕಲ್ಪ ಮೀಡಿಯಾ ಹೌಸ್ | ಮಂಗಳೂರು |
ಭಾರೀ ಮಳೆಯ ಹಿನ್ನೆಲೆಯಲ್ಲಿ ಗುಡ್ಡ ಕುಸಿದು ರಾಷ್ಟ್ರೀಯ ಹೆದ್ದಾರಿ ಸಂಪರ್ಕ ಕಡಿತಗೊಂಡಿದ್ದು, ಸಾರ್ವಜನಿಕರ ಅನುಕೂಲಕ್ಕಾಗಿ ಬೆಂಗಳೂರು-ಮಂಗಳೂರು #Bangalore-Mangalore Train ನಡುವೆ ತುರ್ತಾಗಿ ವಿಶೇಷ ರೈಲು ಸಂಚಾರಕ್ಕೆ ಆದೇಶಿಸಲಾಗಿದೆ.
Gives me great satisfaction that, upon my request, an additional train will now run between Mangaluru-Bengaluru to facilitate passenger travel between the two cities as both roads on the Ghats are unavailable for movement with monsoon related landslides & other issues.
I thank… pic.twitter.com/53LDwVnwwa
— Captain Brijesh Chowta ಕ್ಯಾಪ್ಟನ್ ಬ್ರಿಜೇಶ್ ಚೌಟ (@CaptBrijesh) July 19, 2024
ಈ ಕುರಿತಂತೆ ದಕ್ಷಿಣ ಕನ್ನಡ ಸಂಸದ ಬ್ರಿಜೇಶ್ ಚೌಟ ಅವರು ಟ್ವೀಟ್ ಮೂಲಕ ಮಾಹಿತಿ ನೀಡಿದ್ದು, ಮಂಗಳೂರು-ಬೆಂಗಳೂರು ಸಂಪರ್ಕಿಸುವ ಎರಡು ಮುಖ್ಯ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಗುಡ್ಡ ಕುಸಿತದಿಂದಾಗಿ ಸಂಚಾರದಲ್ಲಿ ಆಡಚಣೆ ಉಂಟಾಗಿದೆ ಈ ಹಿನ್ನೆಲೆಯಲ್ಲಿ ಎರಡು ಹೆಚ್ಚುವರಿ ವಿಶೇಷ ರೈಲು ಸಂಚಾರ ಆರಂಭಿಸಲು ರೈಲ್ವೆ ನೈರುತ್ಯ ಆದೇಶ ನೀಡಿದೆ ಎಂದಿದ್ದಾರೆ.
Also read: ಅವಮಾನವಾದಾಗ ಪ್ರಶ್ನಿಸುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕು | ಸಂಸದ ಬಿ.ವೈ. ರಾಘವೇಂದ್ರ
ಪ್ರಯಾಣಿಕರ ಅನುಕೂಲಕ್ಕಾಗಿ ತುರ್ತಾಗಿ ರೈಲು ಸಂಚಾರ ಆರಂಭಿಸುವಂತೆ ಬ್ರಿಜೇಶ್ ಚೌಟ #Brijesh Chouta ರೈಲ್ವೆ ಇಲಾಖೆಗೆ ಮನವಿ ಮಾಡಿದ್ದರು.
ಹೀಗಿದೆ ವಿವರ:
- ವಿಶೇಷ ರೈಲು(ಸಂಖ್ಯೆ-06547) ಇಂದು(ಶುಕ್ರವಾರ) ಬೆಂಗಳೂರಿನಿAದ ರಾತ್ರಿ 11 ಗಂಟೆಗೆ ಹೊರಟು ನಾಳೆ(ಶನಿವಾರ) ಬೆಳಗ್ಗೆ 11.40ಕ್ಕೆ ಮಂಗಳೂರು ತಲುಪಲಿದೆ.
- ಇದೇ ವಿಶೇಷ ರೈಲು(ಸಂಖ್ಯೆ 06549) 21 ಮತ್ತು 22ರಂದು ಯಶವಂತಪುರರಿAದ ಮಂಗಳೂರು ಜಂP್ಷÀನ್’ಗೆ ಹೊರಡಲಿದ್ದು, 06550 ಸಂಖ್ಯೆಯ ರೈಲು 21 ಮತ್ತು 22ರಂದು ಮಂಗಳೂರು ಜಂP್ಷÀನ್’ನಿAದ ಯಶವಂತಪುರಕ್ಕೆ ಹೊರಡಲಿದೆ.
- ತಲಾ ಎರಡು ಸ್ಲೀಪರ್ ಕೋಚ್’ಗಳು ಸೇರಿದಂತೆ ಈ ಎಲ್ಲ ರೈಲುಗಳಲ್ಲಿ ಒಟ್ಟು 18 ಕೋಚ್’ಗಳು ಇರುತ್ತವೆ ಎಂದು ನೈರುತ್ಯ ರೈಲ್ವೆ ತಿಳಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post