ಕಲ್ಪ ಮೀಡಿಯಾ ಹೌಸ್ | ಮಂಗಳೂರು |
ಕಾರಾಗೃಹದಲ್ಲಿ ನಿಷೇಧಿತ ವಸ್ತುಗಳು ಪತ್ತೆಯಾದ ಹಿನ್ನೆಲೆಯಲ್ಲಿ ಕರ್ತವ್ಯ ಲೋಪವೆಸಗಿದ ಜೈಲು ಅಧೀಕ್ಷಕರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.
ಮಂಗಳೂರು ಜಿಲ್ಲಾ ಕಾರಾಗೃಹಕ್ಕೆ ಪೊಲೀಸ್ ಕಮಿಷನರ್ ನೇತೃತ್ವದ ಪೊಲೀಸರು ದಾಳಿ ನಡೆಸಿದ ಸಂದರ್ಭ ಮೊಬೈಲ್‌ಗಳ ಸಹಿತ ಮಾದಕ ದ್ರವ್ಯಗಳು ಜೈಲಿನೊಳಗೆ ನಿಷೇಧಿತ ವಸ್ತುಗಳು ಪತ್ತೆಯಾದ ಹಿನ್ನೆಲೆಯಲ್ಲಿ ಕರ್ತವ್ಯ ಲೋಪವೆಸಗಿದ ಜೈಲು ಅಧೀಕ್ಷಕ ಬಿ.ಟಿ. ಓಬಳೇಶಪ್ಪ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.
Also read: ಕೆಜಿಎಫ್ ನಲ್ಲಿ Integrated Township | ಯೋಜನಾ ವರದಿ ರೂಪಿಸಿ: ಸಚಿವ ಸುರೇಶ್ ಸೂಚನೆ
ಇಲಾಖಾ ವಿಚಾರಣೆ ಕಾಯ್ದಿರಿಸಿ ಮುಂದಿನ ಆದೇಶದ ತನಕ ಮೈಸೂರು ಕೇಂದ್ರ ಕಾರಾಗೃಹದ ಸಹಾಯಕ ಅಧೀಕ್ಷಕ ಕೆ.ಎನ್. ಮೋಹನ್ ಕುಮಾರ್ ಅವರನ್ನು ಮಂಗಳೂರು ಕಾರಾಗೃಹದ ಅಧೀ ಕ್ಷಕರ ಪ್ರಭಾರ ವಹಿಸಲಾಗಿದೆ ಎಂದು ಕಾರಾಗೃಹ ಮತ್ತು ಸುಧಾರಣಾ ಸೇವೆಯ ಮಹಾನಿರ್ದೇಶಕ ದೇವಜ್ಯೋತಿ ರೇ ತಿಳಿಸಿದ್ದಾರೆ.
ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗ್ರವಾಲ್ ನೇತೃತ್ವದಲ್ಲಿ ಜು.25ರಂದು ಮುಂಜಾನೆ 4 ಗಂಟೆಗೆ ಇಬ್ಬರು ಡಿಸಿಪಿಗಳು, ಮೂವರು ಎಸಿಪಿಗಳು, 15 ಇನ್ ಸ್ಪೆಕ್ಟರ್‌ಗಳು ಸೇರಿದಂತೆ 150 ಪೊಲೀಸರ ಪಡೆ ಜೈಲಿಗೆ ದಾಳಿ ನಡೆಸಿದ್ದು, ಈ ಸಂದರ್ಭ ಗಾಂಜಾ ಸಹಿತ ಹಲವಾರು ಪ್ಯಾಕೆಟ್ ಮಾದಕ ವಸ್ತುಗಳು, 25 ಮೊಬೈಲ್ ಫೋನ್, ಬ್ಲೂಟೂಥ್, ಐದು ಇಯರ್ ಫೋ ನ್, ಪೆನ್ ಡೈವ್, ಎರಡು ಚಾರ್ಜರ್ ಗಳು, ಕತ್ತರಿಗಳು, ಮೂರು ಕೇಬಲ್ ವಶಪಡಿಸಲಾಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿತ್ತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post