ಕಲ್ಪ ಮೀಡಿಯಾ ಹೌಸ್ | ಮಂಗಳೂರು |
ನರಿಮೊಗರು-ಪಡೀಲ್ ನಿಲ್ದಾಣಗಳ ನಡುವೆ ಬಿಸಿಎಂ ಕಾರ್ಯಕ್ಕಾಗಿ ಲೈನ್ ಬ್ಲಾಕ್ ಹಾಗೂ ಪವರ್ ಬ್ಲಾಕ್ ಕೈಗೊಳ್ಳಲಾಗುತ್ತಿರುವುದರಿಂದ ಕೆಳಗಿನ ಈ ಮಾರ್ಗದ ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ.
ಈ ಕುರಿತಂತೆ ರೈಲ್ವೆ ಇಲಾಖೆ ಮಾಹಿತಿ ನೀಡಿದ್ದು, ನಿಗದಿತ ದಿನಗಳಲ್ಲಿ ಈ ಮಾರ್ಗದ ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ತಿಳಿಸಿದೆ.
ಈ ರೈಲು ಸಂಚಾರ ರದ್ದು:
- 56629 ಸಂಖ್ಯೆಯ #MangaloreCentral ಮಂಗಳೂರು ಸೆಂಟ್ರಲ್-ಸುಬ್ರಹ್ಮಣ್ಯ ರೋಡ್ ಪ್ಯಾಸೆಂಜರ್ ರೈಲು 23.03.2026 ರಿಂದ 14.04.2026 ರವರೆಗೆ ಹಾಗೂ 10.06.2026 ರಿಂದ 21.06.2026 ರವರೆಗೆ ರದ್ದುಪಡಿಸಲಾಗುತ್ತದೆ.
- 56630 ಸಂಖ್ಯೆಯ #SubramanyaRoad ಸುಬ್ರಹ್ಮಣ್ಯ ರೋಡ್ -ಮಂಗಳೂರು ಸೆಂಟ್ರಲ್ ಪ್ಯಾಸೆಂಜರ್ ರೈಲು 23.03.2026 ರಿಂದ 14.04.2026 ರವರೆಗೆ ಹಾಗೂ 10.06.2026 ರಿಂದ 21.06.2026 ರವರೆಗೆ ರದ್ದುಪಡಿಸಲಾಗಿದೆ.
ಈ ರೈಲುಗಳ ನಿಯಂತ್ರಣ
- 16515 ಸಂಖ್ಯೆಯ ಯಶವಂತಪುರ ಜಂಕ್ಷನ್ -ಕಾರವಾರ #Karwar ಎಕ್ಸ್’ಪ್ರೆಸ್ ರೈಲು 15.04.2026, 17.04.2026 ಮತ್ತು 20.04.2026 ರಂದು ಮಾರ್ಗ ಮಧ್ಯದಲ್ಲಿ 20 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತದೆ.
- 16575 ಸಂಖ್ಯೆಯ ಯಶವಂತಪುರ ಜಂಕ್ಷನ್ -ಮಂಗಳೂರು ಜಂಕ್ಷನ್ ಎಕ್ಸ್’ಪ್ರೆಸ್ ರೈಲು 16.04.2026 ಮತ್ತು 19.04.2026 ರಂದು ಮಾರ್ಗ ಮಧ್ಯದಲ್ಲಿ 20 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತದೆ.
- 16539 ಸಂಖ್ಯೆಯ ಯಶವಂತಪುರ-ಮಂಗಳೂರು ಜಂಕ್ಷನ್ ಎಕ್ಸ್’ಪ್ರೆಸ್ ರೈಲು 18.04.2026 ರಂದು ಮಾರ್ಗ ಮಧ್ಯದಲ್ಲಿ 20 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತದೆ.
- 56229 ಸಂಖ್ಯೆಯ ಮಂಗಳೂರು ಸೆಂಟ್ರಲ್-ಸುಬ್ರಹ್ಮಣ್ಯ ರೋಡ್ ಪ್ಯಾಸೆಂಜರ್ ರೈಲು 21.04.2026 ರಿಂದ 09.06.2026 ರವರೆಗೆ ಮಾರ್ಗ ಮಧ್ಯದಲ್ಲಿ 55 ನಿಮಿಷಗಳ ಕಾಲ ನಿಯಂತ್ರಿಸಲಾಗಿದೆ.
ಈ ರೈಲು ಮರುನಿಗದೀಕರಣ
56630 ಸಂಖ್ಯೆಯ ಸುಬ್ರಹ್ಮಣ್ಯ ರೋಡ್ -ಮಂಗಳೂರು ಸೆಂಟ್ರಲ್ ಪ್ಯಾಸೆಂಜರ್ ರೈಲು ಕೆಳಗಿನ ದಿನಾಂಕಗಳಲ್ಲಿ ಸುಬ್ರಹ್ಮಣ್ಯ ರೋಡ್ ಇಂದ, 15 ನಿಮಿಷ ತಡವಾಗಿ ಮರುನಿಗದೀಕರಿಸಲಾಗಿದೆ:
21.04.2026, 23.04.2026, 25.04.2026, 28.04.2026, 30.04.2026, 02.05.2026, 05.05.2026, 07.05.2026, 09.05.2026, 12.05.2026, 14.05.2026, 16.05.2026, 19.05.2026, 21.05.2026, 23.05.2026, 26.05.2026, 28.05.2026, 30.05.2026, 02.06.2026, 04.06.2026, 06.06.2026 ಹಾಗೂ 09.06.2026.
ಪ್ರಯಾಣಿಕರು ಮೇಲ್ಕಂಡ ಬದಲಾವಣೆಗಳನ್ನು ಗಮನಿಸಿ ತಮ್ಮ ಪ್ರಯಾಣವನ್ನು ಯೋಜಿಸಿಕೊಳ್ಳುವಂತೆ ರೈಲ್ವೆ ಇಲಾಖೆ ವಿನಂತಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















