ಕಲ್ಪ ಮೀಡಿಯಾ ಹೌಸ್ | ಮಂಗಳೂರು |
ಭಾರೀ ನಿರೀಕ್ಷೆಯ ಮಂಗಳೂರು-ಮಡಗಾಂವ್ ವಂದೇ ಭಾರತ್ ಸೂಪರ್ ಫಾಸ್ಟ್ ರೈಲಿನ Vande Bharath Superfast train ಪ್ರಾಯೋಗಿಕ ಸಂಚಾರ ಆರಂಭವಾಗಿದ್ದು, ಇದು ಯಶಸ್ವಿಯಾಗಿದೆ.
ಪ್ರಾಯೋಗಿಕ ಸಂಚಾರಕ್ಕೆ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ದಕ್ಷಿಣ ಕನ್ನಡ ಸಂಸದ ನಳೀನ್ ಕುಮಾರ್ ಕಟೀಲ್ MPNalinKumarKateel ಹಾಗೂ ಇಲಾಖೆಯ ಅಧಿಕಾರಿಗಳು ಚಾಲನೆ ನೀಡಿದರು.
ಎಲ್ಲೆಲ್ಲಿ ನಿಲುಗಡೆ?
ಮಂಗಳೂರು ಸೆಂಟ್ರಲ್ ನಿಲ್ದಾಣದಿಂದ ಬೆಳಗ್ಗೆ 8.30ಕ್ಕೆ ಹೊರಡುವ ರೈಲು ಮಧ್ಯಾಹ್ನ 1.15ಕ್ಕೆ ಮಡಗಾಂವ್ ತಲುಪಲಿದೆ. ಅದೇ ರೀತಿ ಮಧ್ಯಾಹ್ನ 1.45ಕ್ಕೆ ಮಡಗಾಂವ್’ನಿAದ ಹೊರಡುವ ರೈಲು ಸಂಜೆ 6.30ಕ್ಕೆ ಮಂಗಳೂರು ಸೆಂಟ್ರಲ್ ತಲುಪಲಿದೆ.
Also read: ಕೊರೋನಾ ಬಂದರೆ 7 ದಿನ ಐಸೋಲೇಷನ್ ಕಡ್ಡಾಯ: ಸಚಿವ ದಿನೇಶ್
ಇನ್ನು, ಮಂಗಳೂರು ಹಾಗೂ ಮಡಗಾಂವ್ ನಡುವೆ ಸಂಚರಿಸುವ ವಂದೇ ಭಾರತ್ ರೈಲು ಉಡುಪಿ ಹಾಗೂ ಕಾರವಾರದಲ್ಲಿ ನಿಲುಗಡೆ ನೀಡಲಿದೆ.
ಡಿ.30ರಂದು ಪ್ರಧಾನಿ ನರೇಂದ್ರ ಮೋದಿ ಅವರು ದೇಶದಲ್ಲಿ ಒಟ್ಟು ಆರು ವಂದೇ ಭಾರತ್ ರೈಲು ಸಂಚಾರಕ್ಕೆ ಚಾಲನೆ ನೀಡಲಿದ್ದು, ಮಂಗಳೂರು-ಮಡಗಾAವ್ ರೈಲಿಗೂ ಸಹ ಚಾಲನೆ ದೊರೆಯಲಿದೆ ಎಂದು ಹೇಳಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post