ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಅರವಿಂದ್ ಕೇಜ್ರಿವಾಲ್ ಅವರು ಓರ್ವ ಶಿಷ್ಟಾಚಾರ ತಿಳಿಯದ ದೆಹಲಿ ಮುಖ್ಯಮಂತ್ರಿಯಾಗಿದ್ದಾರೆ ಎಂದು ಬಿಜೆಪಿ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದೆ.
Also read: ಮೇ 1ರಂದು ಹವ್ಯಕ ಸಂಸ್ಥಾಪನೋತ್ಸವ ಮತ್ತು ಪ್ರಶಸ್ತಿ ಪ್ರದಾನ ಕಾರ್ಯಕ್ರಮ
ಈ ಕುರಿತಂತೆ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಅವರು ಟ್ವೀಟ್ ಮಾಡಿದ್ದು, ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಕೋವಿಡ್ 4ನೆಯ ಅಲೆ ಎದುರಿಸುವ ಕುರಿತಂತೆ ಪ್ರಧಾನಿಯವರು ನಡೆಸಿದ ವೀಡಿಯೋ ಕಾನ್ಫರೆನ್ಸ್ ಫುಟೇಜ್ ಶೇರ್ ಮಾಡಿ ಟೀಕಿಸಿದ್ದಾರೆ.
ಇಷ್ಟಕ್ಕೂ ಆಗಿದ್ದೇನು?
ಕೋವಿಡ್ ನಾಲ್ಕನೆಯ ಅಲೆಯನ್ನು ಎದುರಿಸುವ ಕುರಿತಾಗಿ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ವೀಡಿಯೋ ಕಾನ್ಫರೆನ್ಸ್ ನಡೆಸಿದ್ದಾರೆ. ಇದರಲ್ಲಿ ರಾಷ್ಟ್ರ ರಾಜಧಾನಿ ನವದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸಹ ಪಾಲ್ಗೊಂಡಿದ್ದರು.
Arvind Kejriwal continues to disgrace himself with uncouth mannerism… pic.twitter.com/h5RECiI7vl
— Amit Malviya (@amitmalviya) April 27, 2022
ವೀಡಿಯೋ ಕಾನ್ಫರೆನ್ಸ್’ನಲ್ಲಿ ಪ್ರಧಾನಿಯವರು ಮಾತನಾಡುತ್ತಿದ್ದ ವೇಳೆ ಅರವಿಂದ್ ಕೇಜ್ರಿವಾಲ್ ಅವರು ತಾವು ಕುಳಿತಿದ್ದ ಚೇರ್ ಹಿಂಭಾಗಕ್ಕೆ ಒರಗಿ, ತಮ್ಮ ಕೈಗಳನ್ನು ಹಿಂದಕ್ಕೆ ಚಾಚಿಕೊಂಡು ಆರಾಮವಾಗಿ ಕುಳಿತಿದ್ದರು. ಈ ವೀಡಿಯೋವನ್ನು ಶೇರ್ ಮಾಡಿರುವ ಅಮಿತ್ ಮಾಳವೀಯ ಅವರು, ಶಿಷ್ಟಾಚಾರವಿಲ್ಲ ದೆಹಲಿ ಸಿಎಂ(Mannerless CM of Delhi) ಎಂದು ಕಿಡಿ ಕಾರಿದ್ದಾರೆ.
ಅರವಿಂದ್ ಕೇಜ್ರಿವಾಲ್ ಅವರು ತಮ್ಮ ಅಸಭ್ಯ ವರ್ತನೆಗಳಿಂದ ತಮ್ಮನ್ನು ತಾವು ಅವಮಾನಿಸಿಕೊಳ್ಳುತ್ತಲೇ ಇದ್ದಾರೆ ಎಂದು ಟೀಕಿಸಿದ್ದಾರೆ.
Also Read: ತಂಬಾಕು ಸೇವನೆಯಿಂದ ಪ್ರತಿ 6 ಸೆಕೆಂಡ್’ಗೆ ಒಬ್ಬರು ಸಾವು: ಹೇಮಂತ್ ರಾಜ್ ಆತಂಕ
ಕೋವಿಡ್ 4ನೆಯ ಅಲೆಯನ್ನು ಸಮರ್ಥವಾಗಿ ಎದುರಿಸುವ ಕುರಿತಾಗಿನ ಅತ್ಯಂತ ಗಂಭೀರ ಹಾಗೂ ಉನ್ನತ ಮಟ್ಟದ ಈ ವೀಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ಕೇಜ್ರಿವಾಲ್ ಅವರು ಕುಳಿತಿದ್ದ ಭಂಗಿ ಅಥವಾ ದೇಹದ ಹಾವಬಾವ ಈಗ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಟೀಕೆಗೆ ಗುರಿಯಾಗಿದೆ.
ಕೇಜ್ರಿವಾಲ್ ಅವರನ್ನು ತರಾಟೆಗೆ ತೆಗೆದುಕೊಂಡಿರುವ ದೆಹಲಿ ಬಿಜೆಪಿ ಮಾಧ್ಯಮ ಪ್ರಮುಖ ನವೀನ್ ಕುಮಾರ್ ಜಿಂದಾಲ್ ಅವರು ಈ ವ್ಯಕ್ತಿಗೆ ಪ್ರಧಾನಿ ಅವರ ಮುಂದೆ ಹೇಗೆ ಕುಳಿತು ಮಾತನಾಡಬೇಕು ಎಂಬ ಕನಿಷ್ಠ ಸಂಸ್ಕಾರವಿಲ್ಲ. ಎಂತಹ ನಾಚಿಕೆಯಿಲ್ಲದ ಮನುಷ್ಯ ಎಂದು ಕಿಡಿ ಕಾರಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post