ನವದೆಹಲಿ: ವಿವಾಹವಾದ ಮಾತ್ರಕ್ಕೆ ಹೆಣ್ಣು ಹಾಗೂ ಗಂಡು ಲೈಂಗಿಕ ಸಂಪರ್ಕಕ್ಕೆ ಒಪ್ಪಿಕೊಂಡಿದ್ದಾರೆ. ಯಾವಾಗಲೂ ದೊರೆಯುತ್ತಾರೆ ಎಂದು ಅರ್ಥವಲ್ಲ ಎಂದು ದೆಹಲಿ ಹೈಕೋರ್ಟ್ ಮಹತ್ವದ ತೀರ್ಪೊಂದನ್ನು ನೀಡಿದೆ.
ಪ್ರಕರಣವೊಂದರ ವಿಚಾರಣೆಯಲ್ಲಿ ತೀರ್ಪು ನೀಡಿರುವ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಗೀತಾ ಮಿತ್ತಲ್ ಹಾಗೂ ನ್ಯಾ.ಸಿ. ಹರಿ ಶಂಕರ್ ಅವರಿದ್ದ ಪೀಠ, ವಿವಾಹವಾಗಿದ್ದರೂ ಸಹ ಹೆಣ್ಣು ಅಥವಾ ಗಂಡು ಲೈಂಗಿಕ ಸಂಪರ್ಕ ಹೊಂದುವುದನ್ನು ನಿರಾಕರಿಸಬಹುದು. ಒಂದು ವೇಳೆ ಬಲವಂತದ ಸಂಪರ್ಕ ಬೆಳೆಸಿದರೆ ಅಥವಾ ಯತ್ನಿಸಿದರೆ ಅದನ್ನು ಅತ್ಯಾಚಾರ ಎಂದು ಪರಿಗಣಿಸಬಹುದು ಎಂದು ಹೇಳಿದೆ.
ಅತ್ಯಂತ ಪ್ರಮುಖವಾಗಿ, ವಿವಾಹವಾದ ನಂತರ ಹೆಣ್ಣು ಎಲ್ಲ ಸಮಯದಲ್ಲೂ ಸಿಗುತ್ತಾಳೆ ಎಂದು ಪತಿ ತಿಳಿದುಕೊಳ್ಳುವಂತಿಲ್ಲ. ಆಕೆಯ ಸಂಪೂರ್ಣ ಸಮ್ಮತಿ ಪಡೆದುಕೊಂಡೇ ಸಂಪರ್ಕ ಹೊಂದಬೇಕು ಎಂದು ಕೋರ್ಟ್ ಹೇಳಿದೆ.
ಅತ್ಯಾಚಾರಕ್ಕೆ ದೈಹಿಕ ಬಲವಂತ ಅವಶ್ಯವೆಂದು ತಪ್ಪಾಗಿ ಅರ್ಥೈಸಲಾಗಿದೆ. ಅತ್ಯಾಚಾರ ನಡೆದಿದೆ ಎಂಬುದನ್ನು ದೇಹದ ಮೇಲೆ ಗಾಯಗಳು ಇರಲೇಬೇಕು ಎಂದು ಹೇಳುವುದನ್ನು ಒಪ್ಪಲಾಗುವುದಿಲ್ಲ. ಇಂದಿನ ದಿನದಲ್ಲಿ ಅತ್ಯಾಚಾರದ ಅರ್ಥವನ್ನು ಬೇರೆ ಬೇರೆ ರೀತಿಯಲ್ಲಿ ಅರ್ಥೈಸಬೇಕಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ.
Discussion about this post