ಕಲ್ಪ ಮೀಡಿಯಾ ಹೌಸ್ | ಮಾಸ್ಕೋ |
ಇದೇ ಮೊದಲ ಬಾರಿಗೆ ಮೋಸ್ಟ್ ಡೈಂಜರಸ್ ಆಗಿರುವ ಪರಮಾಣು ಶಸ್ತ್ರಾಸ್ತ್ರವನ್ನು ರಷ್ಯಾ ಹೊರ ತೆಗೆದಿದ್ದು, ಈ ಬೆಳವಣಿಗೆ ಇಡಿಯ ವಿಶ್ವದಲ್ಲೇ ಆತಂಕ ಸೃಷ್ಠಿ ಮಾಡಿದೆ.
ಉಕ್ರೇನ್ ಮೇಲೆ ಸುಮಾರು ಒಂದು ವರ್ಷಕ್ಕೂ ಹೆಚ್ಚಿನ ಅವಧಿಯಿಂದ ಯುದ್ಧ ಮಾಡುತ್ತಿರುವ ರಷ್ಯಾ ಈಗ ತನ್ನ ನಡೆಯಿಂದ ಆತಂಕವನ್ನು ಉಂಟು ಮಾಡಿದೆ.
ಈ ವಿಚಾರವನ್ನು ಉದ್ದೇಶಿಸಿ ಮಾತನಾಡಿರುವ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಈ ಬೇಸಿಗೆಯ ಅಂತ್ಯದ ವೇಳೆಗೆ ಉಳಿದ ಪರಮಾಣು ಶಸ್ತ್ರಾಸ್ತ್ರಗಳನ್ನು ತಲುಪಿಸುವ ಗುರಿಯಿದೆ. ಇದು ರಷ್ಯಾ ಹಾಗೂ ಅದರ ಕಾರ್ಯತಂತ್ರದ ಸೋಲಿನ ಬಗ್ಗೆ ಯೋಚಿಸುತ್ತಿರೋ ಎಲ್ಲಾ ವಿರೋಧಿಗಳಿಗೂ ತಿರುಗೇಟಿನ ಕ್ರಮವಾಗಿದೆ ಎಂದು ಹೇಳಿದ್ದಾರೆ.
Also read: ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ: ಹಲವು ಕಡೆಗಳಲ್ಲಿ ಬೆಂಕಿ ಹಚ್ಚಿದ ಕಿಡಿಗೇಡಿಗಳು
ಈ ಹೇಳಿಕೆ ಇದೀಗ ರಷ್ಯಾ ಉಕ್ರೇನ್ ಮೇಲೆ ಅಣ್ವಸ್ತ್ರದ ಬಳಕೆ ಮಾಡುತ್ತದೋ ಎಂಬ ಪ್ರಶ್ನೆಗೆ ಕಾರಣವಾಗಿದೆ ಮಾತ್ರವಲ್ಲದೇ ಜಗತ್ತಿನ ನಿದ್ದೆಗೆಡಿಸಿದಂತಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post