ನವದೆಹಲಿ: ದೇವರ ನಾಡು ಕೇರಳದಲ್ಲಿ ಪ್ರಕೃತಿ ಮುನಿದಿದ್ದು, ವರುಣನ ಆರ್ಭಟಕ್ಕೆ ಅಕ್ಷರಶಃ ನಲುಗಿದ್ದು, ಸಾವಿರಾರು ಮಂದಿ ಸಂತ್ರಸ್ತರಾಗಿದ್ದಾರೆ.
ಇದೇ ರೀತಿ ಪ್ರವಾಹದಲ್ಲಿ ಸಿಲುಕಿದ್ದ ಜನರ ರಕ್ಷಣಾ ಕಾರ್ಯದಲ್ಲಿ ನೂರಾರು ಯೋಧರು ತಮ್ಮ ಜೀವವನ್ನೇ ಪಣಕ್ಕಿಟ್ಟು ಹೋರಾಡತ್ತಿದ್ದಾರೆ.
ಇಂತಹ ಸಂದರ್ಭದಲ್ಲಿ ಮರಗಳ ನಡುವೆ ಸಿಲುಕಿ ಜೀವನ್ಮರಣ ಹೋರಾಟದಲ್ಲಿದ್ದ ಸುಮಾರು 26 ಮಂದಿಯನ್ನು ಭಾರತೀಯ ಸೇನೆಯ ವೀರ ಯೋಧರೊಬ್ಬರು ರಕ್ಷಿಸಿ ಸಾಹಸ ಮೆರೆದಿದ್ದಾರೆ.
ಸೀ ಕಿಂಗ್ 42 ಬಿ ಹೆಲಿಕಾಪ್ಟರನ್ನು ಚಾಲನೆ ಮಾಡುತ್ತಿದ್ದರು ಕ್ಯಾಪ್ಟನ್ ರಾಜಕುಮಾರ್. ಭಾರತೀಯ ನೌಕಾ ದಳದ ಈ ಯೋಧ ಪರಮವೀರ ಚಕ್ರಕ್ಕೆ ಪಾತ್ರರಾಗಿದ್ದು, ಇಡಿಯ ದೇಶ ಹೆಮ್ಮೆ ಇವರ ಸಾಹಸಕ್ಕೆ ತಲೆ ದೂಗಬೇಕು.
ಪ್ರವಾಹ ಪರಿಸ್ಥಿತಿಯಲ್ಲಿ ಎರಡು ಮರಗಳ ನಡುವೆ ಸಿಲುಕಿದ್ದ ಜನರನ್ನು ಈ ಯೋಧ ತಮ್ಮ ಜೀವವನ್ನು ಪಣಕ್ಕಿಟ್ಟು, ಹೆಲಿಕಾಪ್ಟರನ್ನು ತೀರಾ ಸನಿಹಕ್ಕೆ ತೆಗೆದುಕೊಂಡು ತೆರಳಿ ರಕ್ಷಣಾ ಕಾರ್ಯ ಮಾಡಿದ್ದಾರೆ. ಆರಂಭದಲ್ಲಿ 26 ಮಂದಿಯನ್ನು ರಕ್ಷಿಸಬೇಕು ಎಂದುಕೊಂಡಿದ್ದ ಇವರು ಅಂತಿಮವಾಗಿ 32 ಮಂದಿಯನ್ನು ರಕ್ಷಿಸಿದ್ದಾರೆ.
ಕ್ಯಾಪ್ಟನ್ ರಾಜಕುಮಾರ್ ಇಡಿಯ ದೇಶದ ಹೆಮ್ಮೆ. ಈ ಯೋಧನ ಸಾಹಸಕ್ಕೆ ಇಡಿಯ ದೇಶ ತಲೆದೂಗಿ, ಗೌರವಿಸಬೇಕು.
#ನಮ್ಮಸೇನೆನಮ್ಮಹೆಮ್ಮೆ
Discussion about this post