ಮೆಲ್ಬೋರ್ನ್: ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ 3ನೆಯ ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತ ತಂಡ ದಿನಾಂತ್ಯ ಆಟಕ್ಕೆ 443 ರನ್‌ಗಳ ಮೂಲಕ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡು ಅಚ್ಚರಿ ಮೂಡಿಸಿದೆ.
ದಿನದಾಟದ ಮುಕ್ತಾಯಕ್ಕೆ ಕೇವಲ 10 ಓವರ್ ಗಳು ಬಾಕಿ ಇರುವಂತೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಭಾರತದ ಮೊದಲ ಇನ್ನಿಂಗ್ಸ್ ಅನ್ನು ಡಿಕ್ಲೇರ್ ಮಾಡಿದ್ದಾರೆ.
Here comes the declaration from the Indian Skipper#TeamIndia 443/7d https://t.co/xZXZnUvzvk #AUSvIND pic.twitter.com/CUZljroDCz
— BCCI (@BCCI) December 27, 2018
ಭಾರತ ತಂಡ ವಿಕೆಟ್ ನಷ್ಟಕ್ಕೆ 443 ರನ್ ಗಳಿಸಿದ್ದು, ಹೇಜಲ್ ವುಡ್ ಬೌಲಿಂಗ್ ನಲ್ಲಿ ರವೀಂದ್ರ ಜಡೇಜಾ ಔಟ್ ಆಗುತ್ತಿದ್ದಂತೆಯೇ ವಿರಾಟ್ ಕೊಹ್ಲಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿ ಅಚ್ಚರಿ ಮೂಡಿಸಿದರು.
ಇನ್ನು ಆಸಿಸ್ ತಂಡ ಕೂಡ ತನ್ನ ಮೊದಲ ಇನ್ನಿಂಗ್ಸ್ ಆರಂಭಿಸಿದ್ದು, ದಿನದಾಟದ ಅಂತ್ಯಕ್ಕೆ ಕಾಂಗರೂಗಳು ವಿಕೆಟ್ ನಷ್ಟವಿಲ್ಲದೇ 8 ರನ್ ಗಳಿಸಿದ್ದಾರೆ. ೫ ರನ್ ಗಳಿಸಿರುವ ಹ್ಯಾರಿಸ್ ಮತ್ತು 3 ರನ್ ಗಳಿಸಿರುವ ಫಿಂಚ್ 3ನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.
Stumps on Day 2 of the 3rd Test.
Australia 8/0, trail #TeamIndia 443/7d by 435 runs
Scorecard – https://t.co/xZXZnUvzvk #AUSvIND pic.twitter.com/gRuxXZS1NV
— BCCI (@BCCI) December 27, 2018
Discussion about this post