ನವದೆಹಲಿ: ಈ ಬಾರಿಗೆ ಲೋಕಸಭಾ ಚುನಾವಣೆಯಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ರೈತರಿಗೆ ಕನಿಷ್ಠ ಆದಾಯ ಖಾತರಿ ಯೋಜನೆ ಜಾರಿಗೊಳಿಸುವುದಾಗಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಭರವಸೆ ನೀಡಿದ್ದಾರೆ.
ಈ ಕುರಿತಂತೆ ಸುದ್ದಿಗಾರರೊಂದಿಗೆ ಇಂದು ಮಾತನಾಡಿರುವ ಅವರು, ನಾವು ಅಧಿಕಾರಕ್ಕೆ ಬಂದರೆ ದೇಶದ ಶೇ.20ರಷ್ಟು ಅತಿ ಬಡ ಕುಟುಂಬಗಳ ಖಾತೆಯಲ್ಲಿ ವಾರ್ಷಿಕ 72 ಸಾವಿರ ರೂ. ಠೇವಣಿ ಇಡುತ್ತೇನೆ ಎಂದಿದ್ದಾರೆ.
ನಾವು ಜಾರಿಗೊಳಿಸಲು ಯೋಜಿಸಿರುವ ಈ ಯೋಜನೆ ಒಂದು ಕ್ರಾಂತಿಕಾರಿ ಯೋಜನೆಯಾಗಲಿದ್ದು, ಇದರಿಂದ ಸುಮಾರು 25 ಕೋಟಿ ಜನರಿಗೆ ನೇರ ಲಾಭವಾಗಲಿದೆ. ಅಲ್ಲದೇ ಸುಮಾರು 5 ಕೋಟಿ ಕುಟುಂಬಗಳಿಗೆ ಸಹಕಾರಿಯಾಗಲಿದ್ದು, ಮಾಸಿಕ ಪ್ರತಿ ರೈತರ ಕುಟುಂಬಕ್ಕೆ ಆರು ಸಾವಿರ ರೂ. ಜಮೆಯಾಗುತ್ತದೆ ಎಂದು ಭರವಸೆ ನೀಡಿದ್ದಾರೆ.
Discussion about this post