ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಹಾವೇರಿ: ಹಿರೇಕೆರೂರು ತಾಲೂಕಿನಲ್ಲಿ ಕೋವಿಡ್-19 ಸೋಂಕು ಹಿನ್ನಲೆಯಲ್ಲಿ ಕ್ಷೇತ್ರದಲ್ಲಿ ವೈದ್ಯಕೀಯ ಸೌಲಭ್ಯ, ಆಸ್ಪತ್ರೆಗಳ ಸ್ಥಿತಿಗತಿ,ಲಭ್ಯ ವೈದ್ಯರ ಸೇವೆ ಇತ್ಯಾದಿ ಕುರಿತು ಕೃಷಿ ಸಚಿವರೂ ಆಗಿರುವ ಹಿರೇಕೆರೂರು ಮತಕ್ಷೇತ್ರದ ಶಾಸಕ ಬಿ.ಸಿ. ಪಾಟೀಲ್ ಹಿರೇಕೆರೂರಿನ ನಿವಾಸದಲ್ಲಿಂದು ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಿದರು.
ಹಿರೇಕೆರೂರಿನಲ್ಲಿ ಕೋವಿಡ್ ಆಸ್ಪತ್ರೆ 16 ಕೊರೊನಾ ಸೋಂಕಿತರಿದ್ದು ಕೋವಿಡ್ ಆಸ್ಪತ್ರೆ ತೆರೆಯಲಾಗಿದೆ. ಸರ್ಕಾರಿ ಆಸ್ಪತ್ರೆಯ ವೈದ್ಯರೇ ಈ ಸೋಂಕಿತರ ಚಿಕಿತ್ಸೆ ಮಾಡುತ್ತಿದ್ದಾರೆ. ಈ ವೈದ್ಯರು ಸಹ ಇದೀಗ ಕ್ವಾರೆಂಟೇನ್ ಹೋಗುತ್ತಿದ್ದು ಪರ್ಯಾಯ ವೈದ್ಯ ಸಿಬ್ಬಂದಿ ಒದಗಿಸಬೇಕು. “ಡಿ” ಗ್ರೂಪ್ ನೌಕರರ ಸೇವೆಯೂ ಸ್ವಚ್ಛತೆಗೆ ಅಗತ್ಯವಿದೆ. ಹೀಗಾಗಿ ಆದಷ್ಟು ಸಿಬ್ಬಂದಿಗಳನ್ನು ಶೀಘ್ರವಾಗಿ ಒದಗಿಸಬೇಕೆಂದು ಬಿ.ಸಿ. ಪಾಟೀಲ್ ಅವರು ಜಿಲ್ಲಾಧಿಕಾರಿ ಕೃಷ್ಣಾ ಬಾಜಪೆಯವರಿಗೆ ಕರೆ ಮಾಡಿ ಸೂಚಿಸಿದರು. ಅಂತೆಯೇ ಜಿಲ್ಲಾವೈದ್ಯಾಧಿಕಾರಿ ರಾಜೇಂದ್ರ ದೊಡ್ಡಮನಿ ಅವರಿಗೆ ಕರೆ ಮಾಡಿ ಆಸ್ಪತ್ರೆಗೆ ಅಂಬ್ಯಲ್ಯುನ್ಸ್ ಒದಗಿಸಬೇಕು ಎಂದರು.
ಹಿರೇಕೆರೂರು ತಹಶೀಲ್ದಾರ್ ಭಗವಾನ್ ರಟ್ಟಹಳ್ಳಿ ತಹಶೀಲ್ದಾರ್ ಗುರುಬಸವನಗೌಡ, ಸಿಪಿಐ ಮಂಜುನಾಥ್ ಪಂಡಿತ್, ಪಿಎಸ್‌ಐ
ಗಳಾದ ದೀಪಾ, ಆಶಾ, ವೈದ್ಯ ಡಾ.ಹೊನ್ನಪ್ಪ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
Get In Touch With Us info@kalpa.news Whatsapp: 9481252093
Discussion about this post