ನವದೆಹಲಿ: ಮೋದಿ ಸರ್ಕಾರದ ವಿರುದ್ಧ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯದ ಚರ್ಚೆ ವೇಳೆ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಕೇಂದ್ರ ಸಚಿವ ಹರ್ಸಿಮ್ರತ್ ಕೌರ್ ಬಾದಲ್ ಚಳಿ ಬಿಡಿಸಿದ್ದಾರೆ.
ತಮ್ಮ ಸಮಯದ ವೇಳೆ ಮಾತನಾಡುತ್ತಿದ್ದ ರಾಹುಲ್, ರಾಫೆಲ್ ನಡಲ್ ವಿಮಾನ ಖರೀದಿ ಒಪ್ಪಂದ , ನಿರುದ್ಯೋಗ , ನೋಟ್ ಅಮಾನ್ಯತೆ, ಮಹಿಳೆಯರ ಅಸುರಕ್ಷತೆ ಸೇರಿದಂತೆ ಹಲವು ವಿಚಾರಗಳನ್ನು ಪ್ರಸ್ತಾಪಿಸಿ ಕಿಡಿ ಕಾರಿದರು.
Lok Sabha speaker Sumitra Mahajan says, ‘aap to muskura rahi theen’ when Harsimrat Kaur Badal stands up to speak saying allegations were made against her during Rahul Gandhi’s speech’. Badal says, “Ye sansad hai, ye Munna bhai ka pappi jhappi area nahin hai”. pic.twitter.com/d1RJBVnOq4
— ANI (@ANI) July 20, 2018
ಇದರಿಂದ ಕೆರಳಿದ ಸಚಿವೆ ಕೌರ್ ಎದ್ದುನಿಂತು, ಇದು ಸಂಸತ್, ಮುನ್ನಭಾಯಿ ಸಿನಿಮಾ ಸೆಟ್ ಅಲ್ಲ ಎಂದು ಜೋರು ಧ್ವನಿಯಲ್ಲಿ ರಾಹುಲ್ ಗಾಂಧಿ ಆರೋಪಗಳಿಗೆ ಪ್ರತಿಯಾಗಿ ಟೀಕಿಸಿದರು.
ಆದರೆ, ಸಚಿವೆಯ ಮಾತಿಗೆ ಪ್ರತಿಪಕ್ಷಗಳೂ ಸಹ ಪ್ರತಿಯಾಗಿ ಆಕ್ರೋಶ ವ್ಯಕ್ತಪಡಿಸಿದವು. ಈ ವೇಳೆ ಮಾತಿನ ಚಕಮಕಿ ನಡೆಯಿತು. ನಂತರ ಸಭಾಧ್ಯಕ್ಷೆ ಸುಮಿತ್ರಾ ಮಹಾಜನ್ ಹರ್ಸಿಮ್ರತ್ ಕೌರ್ ಬಾದಲ್ ಅವರನ್ನು ಸಮಾಧಾನಪಡಿಸಿ ರಾಹುಲ್ ಗಾಂಧಿ ಮಾತು ಮುಂದುವರೆಸಲು ಅವಕಾಶ ಮಾಡಿಕೊಟ್ಟರು.
Discussion about this post