ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಳಗಾವಿ: ದೇಶಕ್ಕಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ ಸಂಗೊಳ್ಳಿ ರಾಯಣ್ಣ ಹಾಗೂ ಛತ್ರಪತಿ ಶಿವಾಜಿ ಮಹಾರಾಜ್ ಅವರು ರಾಷ್ಟ್ರೀಯತೆಯ ಸಂಕೇತ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಲ್ಕು ದಿನದ ಹಿಂದೆ ಬೆಳಗಾವಿಗೆ ಬರಲು ಯೋಚಿಸಿದಾಗ ಇಷ್ಟು ಗೌರವ ಇಷ್ಟ ಸುಲಭವಾಗಿ ರಾಯಣ್ಣ ಹಾಗೂ ಶಿವಾಜಿ ಅವರ ಸಿಗುತ್ತದೆ ಎನಿಸಿರಲಿಲ್ಲ. ಸಂಗೊಳ್ಳಿ ರಾಯಣ್ಣ ಹಾಗೂ ಛತ್ರಪತಿ ಶಿವಾಜಿಯವರು ಹಿಂದವೀ ಸಾಮ್ರಾಜ್ಯ ಸ್ಥಾಪಿಸುವಲ್ಲಿನ ಪ್ರಯತ್ನ ಹಾಗೂ ಸ್ವತಂತ್ರಕ್ಕಾಗಿ ಇಬ್ಬರೂ ಹೋರಾಡಿದ ಹಿಂದಿನ ತ್ಯಾಗವನ್ನು ನಾವೆಲ್ಲರೂ ಎಂದಿಗೂ ಸ್ಮರಿಸಬೇಕು ಎಂದರು.
ಸಂಕುಚಿತ ಭಾವನೆಯಿಂದ ಇಬ್ಬರ ಬಗ್ಗೆ ಬೇರೆ ಬೇರೆ ಭಾವನೆ ಬಂದಿದೆ. ಶಿವಾಜಿ ಸರ್ಕಲ್ ಹಾಗೂ ರಾಯಣ್ಣ ಪುತ್ಥಳಿ ಪ್ರತಿಷ್ಠಾಪನೆಯಿಂದ ಈಗ ದೇಶವಾಸಿಗಳಿಗೆ ಸಂತೋಷವಾಗಿದೆ. ಇಬ್ಬರೂ ತ್ಯಾಗಿಗಳ ಜಾತಿ, ಭಾಷೆ ಹಾಗೂ ಹುಟ್ಟಿ ಬೆಳೆದ ರಾಜ್ಯಗಳು ಮುಖ್ಯವಾಗುವುದಿಲ್ಲ. ಇಬ್ಬರ ಬಗ್ಗೆ ಗೌರವಯುತವಾಗಿ ನಡೆದುಕೊಳ್ಳಬೇಕು ಎಂದು ತೀರ್ಮಾನವಾಗಿರುವುದು ಸಂತೋಷಕರ ವಿಚಾರ. ಇಲ್ಲಿ ಭಾಷೆ, ಜಾತಿ ಹಾಗೂ ರಾಜ್ಯಕ್ಕಿಂತಲೂ ರಾಷ್ಟ್ರೀಯತೆ ಮುಖ್ಯವಾಗಿದೆ ಎಂದರು.
ಸರ್ಕ್ಯೂಟ್ ಹೌಸ್’ನಲ್ಲಿ ಸಭೆ ನಡೆಸಿದ ಸಚಿವರು ಜಿಲ್ಲಾಧಿಕಾರಿಗಳು ಹಾಗೂ ನಗರ ಪೊಲೀಸ್ ಆಯುಕ್ತರಿಂದ ಪೀರನವಾಡಿಯಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆ ವಿಚಾರದಲ್ಲಿ ಸಂಪೂರ್ಣ ಮಾಹಿತಿ ಪಡೆದುಕೊಂಡರು.
ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರೊಂದಿಗೆ ಪೀರನವಾಡಿಗೆ ತೆರಳಿದ ಈಶ್ವರಪ್ಪನವರು ಸಂಗೊಳ್ಳಿ ರಾಯಣ್ಣ ಹಾಗೂ ಛತ್ರಪತಿ ಶಿವಾಜಿ ಮಹಾರಾಜ್ ಅವರ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡುವ ಮೂಲಕ ರಾಷ್ಟ್ರೀಯ ಏಕತೆಯ ಸಂದೇಶದ ಸಾರಿದರು.
Get In Touch With Us info@kalpa.news Whatsapp: 9481252093
Discussion about this post