ಕಲ್ಪ ಮೀಡಿಯಾ ಹೌಸ್ | ಹಮಾಸ್ |
ಇಸ್ರೇಲ್ ಹಾಗೂ ಹಮಾಸ್ ನಡುವಿನ ಯುದ್ದವು ಭೀಕರ ಸ್ಥಿತಿಗೆ ತಲುಪಿದ್ದು, ಮಿಸೈಲ್ ದಾಳಿಗೆ ಸುಮಾರು 500 ಜನರು ಸಾವನ್ನಪ್ಪಿದ್ದು, 300ಕ್ಕೂ ಅಧಿಕ ನಾಗರಿಕರ ದೇಹಗಳು ಛಿದ್ರವಾಗಿವೆ ಎಂದು ವರದಿಯಾಗಿದೆ.
ಇಸ್ರೇಲ್ ಮೇಲೆ ಗಾಜಾದ ಹಮಾಸ್ ಉಗ್ರರು ದಾಳಿ ನಡೆಸಿದ್ದು, 5,000ಕ್ಕೂ ಹೆಚ್ಚು ರಾಕೆಟ್ ದಾಳಿ ನಡೆಸಿದ್ದಾರೆ. ಇತ್ತ ಟ್ಯಾಂಕರ್, ಮಿಸೈಲ್ ಮೂಲಕವೂ ದಾಳಿ ನಡೆಸಿದ್ದು, ಸಾವಿರಾರು ಉಗ್ರರು ಏಕಾಏಕಿ ಇಸ್ರೇಲ್’ಗೆ ನುಗ್ಗಿ ಸಾರ್ವಜನಿಕರ ಮೇಲೂ ದಾಳಿ ನಡೆಸಿದ್ದಾರೆ.

ಹಮಾಸ್ ಉಗ್ರರ ದಾಳಿಗೆ ಇಸ್ರೇಲ್ ಹೊತ್ತಿ ಉರಿಯುತ್ತಿದ್ದು, ಇದರ ನಡುವೆ ಇಸ್ರೇಲ್ ಒಳಗಿರುವ ಕೆಲ ಮಸೀದಿಗಳು ಇಸ್ರೇಲ್ ವಿರುದ್ಧವೇ ಯುದ್ಧ ಸಾರಿದೆ. ಲೌಡ್ ಸ್ಪೀಕರ್ ಮೂಲಕ ಇಸ್ರೇಲ್ ವಿರುದ್ಧ ನಡೆಯುತ್ತಿರುವ ಜಿಹಾದ್ ಹೋರಾಟದಲ್ಲಿ ಪಾಲ್ಗೊಳ್ಳಿ ಎಂದು ಮುಸ್ಲಿಮರಿಗೆ ಸಂದೇಶ ನೀಡಲಾಗುತ್ತಿದೆ.

ಇಸ್ರೇಲ್ ಹಿಂದೆಂದೂ ಕಂಡಿರದ ಐತಿಹಾಸಿಕ ದುರಂತವನ್ನು ಕಂಡಿದೆ. ಪ್ಯಾಲೆಸ್ತೀನ್’ನ ಭಯೋತ್ಪಾದಕ ಸಂಘಟನೆ ಹಮಾಸ್ ಕೇವಲ 20 ನಿಮಿಷಗಳಲ್ಲಿ ಇಸ್ರೇಲ್ ಮೇಲೆ 5 ಸಾವಿರ ರಾಕೆಟ್‌ಗಳನ್ನು ಹಾರಿಸಿದೆ.









Discussion about this post