ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಸಾಗರ: ತಾಲೂಕಿನ ಸಮಗ್ರ ಅಭಿವೃದ್ಧಿ ಹಗಲಿರುಳು ಶ್ರಮಿಸುತ್ತಿರುವ ಶಾಸಕ ಹಾಲಪ್ಪ, ಸಾಗರದ ಆಸ್ಪತ್ರೆಗೆ ವಿವಿಧ ಸೌಲಭ್ಯ ಮಂಜೂರು ಮಾಡುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಈ ಕುರಿತಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತ ಪಂಕಜ್ ಕುಮಾರ್ ಪಾಂಡೆ ಅವರನ್ನು ಇಂದು ಭೇಟಿಯಾಗಿ ಶಾಸಕರು ಚರ್ಚೆ ನಡೆಸಿದರು.
ಸಾಗರ, ಹೊಸನಗರ ಹಾಗೂ ಸೊರಬ ತಾಲೂಕಿನಲ್ಲಿ ಕೋವಿಡ್19 ವೈರಸ್ ಬಹಳಷ್ಟ ಹರಡುತ್ತಿದೆ. ಇಂತಹ ತುರ್ತು ಸಂದರ್ಭದಲ್ಲಿ ಸಾಗರದ ಉಪವಿಭಾಗೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ಇನ್ನೂ ಹೆಚ್ಚಿನ ಸೌಕರ್ಯದ ಅಗತ್ಯವಿದೆ. ಹೀಗಾಗಿ, ಸಾಗರದ ಉಪವಿಭಾಗಿಯ ಆಸ್ಪತ್ರೆಗೆ 2 ಆಂಬುಲೆನ್ಸ್, 3 ವೆಂಟಿಲೇಟರ್, 5 ಹೈ ಫ್ಲೋ ನಾಸಲ್ ಕೆನುಲಾ ಸೇರಿದಂತೆ ಹಲವು ವೈದ್ಯಕೀಯ ಸಲಕರಣೆಗಳನ್ನು ಪೂರೈಸಬೇಕು ಎಂದು ಮನವಿ ಮಾಡಿದರು.
Get In Touch With Us info@kalpa.news Whatsapp: 9481252093
Discussion about this post