ಕಲ್ಪ ಮೀಡಿಯಾ ಹೌಸ್ | ಗಾಂಧಿನಗರ |
ತಮ್ಮ ತಾಯಿ ಹೀರಾಬೆನ್ ಅವರ ಅಂತ್ಯಸಂಸ್ಕಾರ ನೆರವೇರಿಸಿದ ಕೆಲವೇ ನಿಮಿಷಗಳಲ್ಲಿ ಮತ್ತೆ ಕರ್ತವ್ಯಕ್ಕೆ ಹಾಜರಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರ ನಡೆ ಇಡಿಯ ವಿಶ್ವಕ್ಕೇ ಮಾದರಿಯಾಗಿದೆ.
ಹೌದು… ತನ್ನ ತಾಯಿಯ ನಿಧನದ ಸುದ್ಧಿ 6 ಗಂಟೆಗೆ ತಿಳಿದ ನಂತರ 7.30ರ ವೇಳೆಗೆ ಗಾಂಧಿನಗರಕ್ಕೆ ಆಗಮಿಸಿದ ಪ್ರಧಾನಿಯವರು ಅಂತಿಮ ಯಾತ್ರೆಯಲ್ಲಿ ಪಾಲ್ಗೊಂಡು, ತಾಯಿಯ ಚಿತೆಗೆ ಅಗ್ನಿಸ್ಪರ್ಶ ಮಾಡಿ, ತಮ್ಮ ಅಂತಿಮ ಕರ್ತವ್ಯ ನಿರ್ವಹಿಸಿದ್ದಾರೆ.
ತಾಯಿಯನ್ನು ಕಳೆದುಕೊಂಡ ದುಃಖ ಮನದಲ್ಲಿ ಮಡುಗಟ್ಟಿದ್ದರೂ ಸಹ ಆಕೆಯ ಅಂತ್ಯಸಂಸ್ಕಾರ ನೆರವೇರಿಸಿದ ಕೆಲವೇ ನಿಮಿಷಗಳಲ್ಲಿ ತಮ್ಮ ಕರ್ತವ್ಯಕ್ಕೆ ಹಾಜರಾಗಿದ್ದಾರೆ ಪ್ರಧಾನಿಯವರು.
ಸೆಕ್ಟರ್ 30ರ ರುದ್ರಭೂಮಿಯಲ್ಲಿ ತಮ್ಮ ತಾಯಿಯವರು ಅಂತ್ಯಸಂಸ್ಕಾರ ನಡೆಸಿದ ಪ್ರಧಾನಿಯವರು, ಕೆಲವೇ ನಿಮಿಷಗಳ ಬಿಡುವು ಪಡೆದು, ಅಲ್ಲಿಂದ ನೇರವಾಗಿ ಗುಜರಾತ್ ರಾಜಭವನಕ್ಕೆ ತೆರಳಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಮೋದಿಯವರು ಪಾಲ್ಗೊಳ್ಳಬೇಕಿದ್ದ ಎಲ್ಲ ಕಾರ್ಯಕ್ರಮಗಳಲ್ಲಿ ಅವರು ವೀಡಿಯೋ ಕಾನ್ಪರೆನ್ಸ್ ಮೂಲಕವೇ ಭಾಗವಹಿಸಿ ತಮ್ಮ ಕರ್ತವ್ಯ ನಿರ್ವಹಿಸಲು ಮುಂದಾಗಿದ್ದಾರೆ.
ತಾಯಿ ಅಗಲಿ ಕೆಲವೇ ಗಂಟೆಗಳಲ್ಲಿ ಮತ್ತೆ ಕರ್ತವ್ಯಕ್ಕೆ ಹಾಜರಾಗಿರುವ ಮೋದಿಯವರ ಧೀಮಂತ ವ್ಯಕ್ತಿತ್ವ ಇಡಿಯ ವಿಶ್ವಕ್ಕೇ ಮಾದರಿಯಾಗಿದೆ. ಕರ್ಮಯೋಗದ ಪಾಠ ಮಾಡಿದ್ದ ತಾಯಿಯ ಮಾತಿನಂತೆ ಅಕ್ಷರಶಃ ನಡೆದುಕೊಳ್ಳುತ್ತಿರುವ ಮೋದಿಯವರ ನಡೆ ಪ್ರತಿಯೊಬ್ಬರಿಗೂ ಆದರ್ಶವಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post