ನವದೆಹಲಿ: ಪುಲ್ವಾಮಾ ದಾಳಿಯ ಹಿನ್ನೆಲೆಯಲ್ಲಿ ಪಾಕಿಸ್ಥಾನದ ಬಾಲಾಕೋಟ್’ನಲ್ಲಿ ಉಗ್ರರ ಕ್ಯಾಂಪ್ ಮೇಲೆ ದಾಳಿ ನಡೆಸಿದ ನಂತರ ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆ ಹೆಚ್ಚಾಗಿದೆ ಎಂದು ಸಮೀಕ್ಷೆಯೊಂದು ವರದಿ ಮಾಡಿದೆ.
ಈ ಕುರಿತಂತೆ ರಾಷ್ಟ್ರೀಯ ಮಾಧ್ಯವೊಂದು ವರದಿ ಮಾಡಿದ್ದು, ಸಿ ವೋಟರ್ಸ್ ಐಎಎನ್’ಎಸ್ ಸ್ಟೇಟ್ ಆಫ್ ದಿ ನೇಷನ್ ಮಾರ್ಚ್ 7ರಂದು ಸಮೀಕ್ಷೆ ನಡೆಸಿದೆ. ಇದರಂತೆ ಶೇ.51ರಷ್ಟು ಮಂದಿ ಮೋದಿ ಆಡಳಿತಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪ್ರಮುಖವಾಗಿ, ಬಾಲಾಕೋಟ್ ದಾಳಿಯ ನಂತರ ಮೋದಿಯವರು ಜನಪ್ರಿಯತೆ ದ್ವಿಗುಣಗೊಂಡಿದ್ದರೆ, ಇದೇ ವೇಳೆ ರಾಹುಲ್ ಗಾಂಧಿಯವರು ಜನಪ್ರಿಯತೆ ಇಳಿಮುಖಗೊಂಡಿದೆ ಎನ್ನಲಾಗಿದೆ.
ಜನವರಿ 1ರಂದು ನಡೆಸಿದ ಸಮೀಕ್ಷೆಯಲ್ಲಿ ಈ ಸಂಖ್ಯೆ ಶೇ.36 ಪ್ರತಿಶತದಷ್ಟಿತ್ತು. ಅದೇ ಮಾರ್ಚ್ 7 ರ ನಿವ್ವಳ ಅನುಮೋದನೆ ರೈಟಿಂಗ್’ನಲ್ಲಿ ತೀವ್ರ ಏರಿಕೆ ಕಂಡುಬಂದಿದ್ದು, ಈ ವರ್ಷದ ಆರಂಭದಲ್ಲಿ ಶೇ.32ರಷ್ಟಿದ್ದ ರೇಟಿಂಗ್, ಬಳಿಕ ದ್ವಿಗುಣಗೊಂಡು ಶೇ.62 ಪ್ರತಿಶತಕ್ಕೆ ಏರಿಕೆಯಾಗಿದೆ ಎನ್ನಲಾಗಿದೆ.
ಮತ್ತೊಂದೆಡೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ ವರ್ಷದ ಆರಂಭದಲ್ಲಿ ಶೇ.23ರಷ್ಟಿದ್ದ ರೇಟಿಂಗ್ ಬಾಲಾಕೋಟ್ ವಾಯುದಾಳಿ ಬಳಿಕ ಶೇ.8ಕ್ಕೆ ಕುಸಿದಿದೆ ಎಂದು ವರದಿಯಾಗಿದೆ.
Discussion about this post