ಕಲ್ಪ ಮೀಡಿಯಾ ಹೌಸ್ | ಮುಂಜಾನೆ ಸುವಿಚಾರ |ಜೀವನದಲ್ಲಿ ಸ್ವಾತಂತ್ರ ಬಹಳ ಮಹತ್ವದ್ದು ಅದನ್ನು ಉಳಿಸಿಕೊಳ್ಳಲು ಸತತವಾಗಿ ಹೋರಾಟ ನಡೆಸಲೇಬೇಕು.
ಜೀವನ ಎಂಬ ರಣರಂಗದಲ್ಲಿ ಸ್ವಾತಂತ್ರಕ್ಕಾಗಿ ಹೋರಾಟ ನಡೆದೇ ಇರುತ್ತದೆ. ಬಂಧನ ಎಂದರೆ ಕೈ ಕಾಲಿಗೆ ಬೇಡಿ ಹಾಕಿದಾಗ ಮಾತ್ರವಲ್ಲದೆ ದಿನ ನಿತ್ಯದ ಜೀವನದಲ್ಲಿ ನಮ್ಮ ಪೋಷಕರ, ಬಂಧುಗಳ, ದೊಡ್ಡವರ ಆದೇಶದಂತೆ ನಡೆಯುವುದು ಬಂಧನವಲ್ಲ.
ಮನಸ್ಸಿಗೆ ಆತ್ಮ ಸಾಕ್ಷಿ ಗೇ ಒಪ್ಪದ ಕಾರ್ಯಗಳನ್ನು ಮಾಡುವುದು ಬಂಧನವಾಗಿದೆ. ನಮ್ಮ ಅಸ್ತಿತ್ವ ಉಳಿಸಿಕೊಳ್ಳಲು ನಾವು ಹೋರಾಡುವುದೇ ಸ್ವತಂತ್ರದ ಹೋರಾಟವಾಗಿದೆ.
ಇಂದಿನ ಜನರಿಗೆ ಸ್ವಾತಂತ್ರ ಮತ್ತು ಸ್ವೇಚ್ಛಾಚಾರಕ್ಕೂ ವ್ಯತ್ಯಾಸ ಇದೆ ಎಂದು ಅರಿತು. ಸ್ವತಂತ್ರವಾಗಿ ಬದುಕಿ ಸ್ವೇಚ್ಛಾಚಾರದ ಮಾಯೆಗೇ ಒಳಗಾಗದೇ ಇರುವುದೇ ಸ್ವಾತಂತ್ರ ಇರುವ ಜೀವನವಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post