ಕಲ್ಪ ಮೀಡಿಯಾ ಹೌಸ್ | ಮುಂಜಾನೆ ಸುವಿಚಾರ |
ಪಾಪ ಪ್ರಜ್ಞೆ ಇರಬೇಕು, ಸರಿ ತಪ್ಪುಗಳನ್ನು ಸರಿಯಾಗಿ ತಿಳಿದು ಸರಿ ದಾರಿಯಲ್ಲಿ ನಡೆಯಬೇಕು.
ತಪ್ಪುಗಳನ್ನು ಮಾಡದ ವ್ಯಕ್ತಿ ಪ್ರಪಂಚದಲ್ಲಿ ದೊರೆಯುವುದೇ ಇಲ್ಲ. ಒಂದಲ್ಲ ಒಂದು ತಪ್ಪನ್ನು ಎಲ್ಲರೂ ಮಾಡಿಯೇ ಇರುತ್ತಾರೆ. ಆದರೆ ಮಾಡಿದ ತಪ್ಪಿನ ಅರಿವಾದ ಮೇಲೆ ತಿದ್ದಿ ನಡೆಯುವವ ನಿಜವಾದ ಮನುಷ್ಯ. ಸರಿ ತಪ್ಪು, ಪಾಪ ಪುಣ್ಯಗಳ ಅರಿವು ನಮಗೆ ಇರಲೇ ಬೇಕು. ಆಗಲೇ ನಮಗೆ ಯಾವ ಮಾರ್ಗದಲ್ಲಿ ನಡೆಯಬೇಕೆಂದು ತಿಳಿಯುತ್ತದೆ.
ಎಂತದ್ದೇ ಕಷ್ಟ ಬಂದಾಗಲೂ ಸರಿಯಾದ ಮಾರ್ಗದಲ್ಲಿ ಧರ್ಮದ ಮಾರ್ಗದಲ್ಲಿ ನಡೆಯುವವ ಪೂಜನೀಯ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post