ನವದೆಹಲಿ: ಭಾರತೀಯ ಕ್ರಿಕೇಟ್ ತಂಡದ ಮಾಜಿ ಸ್ಕಿಪ್ಪರ್ ಮಹೇಂದ್ರ ಸಿಂಗ್ ಧೋನಿ ಕ್ರೀಡಾ ಕ್ಷೇತ್ರದಲ್ಲಿ ತಾವು ತೋರಿದ ಸಾಧನೆಯಂತೆಯೇ, ತಮ್ಮ ಪ್ರಾಮಾಣಿಕ ತೆರಿಗೆ ಪಾವತಿಯಲ್ಲೂ ಸಹ ದಾಖಲೆ ಬರೆದಿದ್ದು, ಇದು ನಂಬಲಸಾಧ್ಯವಾದ ಮೈಲಿಗಲ್ಲಿ ಸೃಷ್ಠಿಸಿದೆ.
ಜಾರ್ಖಂಡ್ ರಾಜ್ಯದಲ್ಲಿ ತಮ್ಮ ಸರ್ಕಾರಕ್ಕೆ 2017-18ನೆಯ ಸಾಲಿನಲ್ಲಿ ಧೋನಿ ಪಾವತಿಸಿರುವ ತೆರಿಗೆ ಮೊತ್ತ ಬರೋಬ್ಬರಿ 12.17 ಕೋಟಿ ರೂ. ಇಷ್ಟು ದೊಡ್ಡ ಮೊತ್ತದ ತೆರಿಗೆ ಪಾವತಿ ಮಾಡಿರುವ ಜಾರ್ಖಂಡ್ ರಾಜ್ಯದ ಏಕೈಕ ಪ್ರಜೆ ಎಂಬ ಖ್ಯಾತಿಗೆ ಪಾತ್ರವಾಗಿರುವ ಧೋನಿಯನ್ನು ಮೀರಿಸಿದಷ್ಟ ತೆರಿಗೆ ಪಾವತಿದಾರರು ಬಿಹಾರದಲ್ಲೂ ಇಲ್ಲ ಎಂದು ವರದಿಯಾಗಿದೆ.
2016-17ನೆಯ ಸಾಲಿನಲ್ಲಿ ಧೋನಿ ಆದಾಯ 10.93 ಕೋಟಿ ರೂ. ಅವರು ಪಾವತಿ ಮಾಡಿದ ತೆರಿಗೆ ಹಣ 1.24 ಕೋಟಿ ರೂ.
ವಿರಾಟ್ ಕೋಹ್ಲಿ ಹಾಗೂ ಸಚಿನ್ ತೆಂಡೂಲ್ಕರ್ ನಂತರ ಅತಿ ಹೆಚ್ಚು ಆದಾಯ ಹೊಂದಿರುವ ಕ್ರಿಕೆಟಿಗ ಧೋನಿ.
Discussion about this post