ಕಲ್ಪ ಮೀಡಿಯಾ ಹೌಸ್ | ಮೂಡಿಗೆರೆ |
ಸಾರ್… ಇಲ್ಲಿ ಕೆಲವರು ಗಲಾಟೆ ಆಗ್ತಿದೆ ಬೇಗ ಬನ್ನಿ ಸಾರ್ ಎಂದು ಯುವಕನೊಬ್ಬ 112 ಪೊಲೀಸರಿಗೆ ಕರೆ ಮಾಡಿದ್ದಾನೆ. ಇದನ್ನು ಆಧಾರಿಸಿ ಸ್ಥಳಕ್ಕೆ ದೌಡಾಯಿಸಿದ ಪೊಲೀಸ್ ಸಿಬ್ಬಂದಿಗೆ ಆ ಯುವಕನ ಮಾತು ಶಾಕ್ ನೀಡಿತ್ತು.
ಹೌದು… ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆ ಹಾರ ಬಳಿಯ ತಡುವೆ ಗ್ರಾಮದ ಅಶೋಕ್ ಎಂಬಾತ 112 ಸಂಖ್ಯೆಗೆ ಕರೆ ಮಾಡಿ ಸಾರ್ ಇಲ್ಲಿ ಗಲಾಟೆ ಆಗ್ತಿದೆ ಬೇಗ ಬನ್ನಿ ಎಂದಿದ್ದಾನೆ. ಆತನ ಕರೆಗೆ ಸ್ಪಂದಿಸಿ ತಕ್ಷಣವೇ ಬಣಕಲ್ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಅಲ್ಲಿಗೆ ತಲುಪಿದ ಪೊಲೀಸರು ಒಂದು ಕ್ಷಣ ಶಾಕ್ ಆಗಿದ್ದಾರೆ.
ಈತ ಕರೆ ಮಾಡಿದ ಸ್ಥಳಕ್ಕೆ ಹೋದ ಪೊಲೀಸರು ಅಶೋಕ್ ಬಳಿ ವಿಚಾರಣೆ ನಡೆಸಿದ್ದಾರೆ. ಅದಕ್ಕೆ ಆತ ನೀಡಿದ ಉತ್ತರದಿಂದ ಶಾಕ್ ಆಗಿದ್ದಾರೆ.
Also read: ಪ್ಯಾರಾಸಿಟಮಾಲ್ ಮಾತ್ರೆ ತಗೊಳ್ತೀರಾ? ಹಾಗಾದರೆ 53 ಔಷಧಿಗಳ ಬಗ್ಗೆ ಈ ಶಾಕಿಂಗ್ ಸುದ್ಧಿ ಓದಿ
ಜಗಳವೂ ಇಲ್ಲ, ಏನೂ ಇಲ್ಲ ಸಾರ್. ನಾನು ಮಹಾಲಯ ಪಿತೃ ಪಕ್ಷಕ್ಕೆ ಹೋಗಬೇಕಿದೆ. ಬಸ್ ಸಿಗುತ್ತಿಲ್ಲ, ಸಮವೂ ಆಯಿತು. ಮಳೆ ಬೇರೆ ಬರುತ್ತಿದೆ. ದಯಮಾಡಿ ನೆಂಟರ ಮನೆಗೆ ಡ್ರಾಪ್ ಮಾಡಿ ಎಂದು ಪೊಲೀಸರ ಬಳಿ ಯುವಕ ಗೋಗರೆದಿದ್ದಾನೆ. ಅಷ್ಟೇ ಅಲ್ಲದೆ, ಕೊಟ್ಟಿಗೆಹಾರದಿಂದ ಫಲ್ಗುಣಿ ಗ್ರಾಮಕ್ಕೆ ಡ್ರಾಪ್ ಮಾಡುವಂತೆ ಪಟ್ಟು ಹಿಡಿದಿದ್ದಾನೆ.
ಯುವಕನ ಮಾತು ಕೇಳಿ ಪೊಲೀಸರಿಗೆ ಒಂದು ಕ್ಷಣ ಬೈಯ್ಯಬೇಕೋ ನಗಬೇಕೋ ತಿಳಿಯಲಿಲ್ಲ. ಮಾವನ ಮನೆಗೆ ಊಟಕ್ಕೆ ಹೊರಟಿದ್ದ ಅಶೋಕ್’ಗೆ ಪೊಲೀಸರು ಬುದ್ದಿವಾದ ಹೇಳಿದ್ದಾರೆ. ಕೊನೆಗೆ ಪೊಲೀಸರೇ ಲಾರಿ ಅಡ್ಡ ಹಾಕಿ ಆ ವ್ಯಕ್ತಿಯನ್ನು ಮಾವನ ಮನೆಗೆ ಕಳಿಸಿದ್ದಾರೆ ಎನ್ನಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post