ಕಲ್ಪ ಮೀಡಿಯಾ ಹೌಸ್ | ಮುಂಬೈ |
ಇಬ್ಬರು ಹುಡುಗರು ತಮ್ಮ 13 ವರ್ಷ ಕ್ಲಾಸ್ ಮೇಟ್ ವಿದ್ಯಾರ್ಥಿನಿ ಮೇಲೆ ತರಗತಿಯಲ್ಲೇ ಅತ್ಯಾಚಾರ ಎಸಗಿರುವ ಘಟನೆ ನಗರದಲ್ಲಿ ನಡೆದಿದೆ.
ಮಾಟುಂಗಾ ಪ್ರದೇಶದಲ್ಲಿನ ಸರ್ಕಾರಿ ಶಾಲೆಯಲ್ಲಿ ಘಟನೆ ಸೋಮವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ತರಗತಿಯಲ್ಲಿದ್ದ ಇತರ ವಿದ್ಯಾರ್ಥಿಗಳು ನೃತ್ಯ ಅಭ್ಯಾಸಕ್ಕಾಗಿ ಹೊರಬಂದಾಗ ಆಕೆಯ ಇಬ್ಬರು ಕ್ಲಾಸ್ ಮೇಟ್ಸ್’ಗಳು 8ನೆಯ ತರಗತಿ ವಿದ್ಯಾರ್ಥಿನಿ ಮೇಲೆ ಲೈಂಗಿಕ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.
Also read: ಚಿರತೆ, ನಾಯಿ ಹಾವಳಿಯಾಯ್ತು: ಮೈಸೂರಿನ ಕೊಳಚೆ ನೀರು ಸಂರಕ್ಷಣಾ ಘಟಕದಲ್ಲಿ ಮೊಸಳೆ ಪತ್ತೆ!
ಈ ಘಟನೆಯು ಹುಡುಗಿಯನ್ನು ಘಾಸಿಗೊಳಿಸಿದ್ದು, ಇದರಿಂದ ನೊಂದ ಆಕೆ ತನ್ನ ಕುಟುಂಬ ಸದಸ್ಯರೊಂದಿಗೆ ತನ್ನ ಸಂಕಟವನ್ನು ಹೇಳಿಕೊಂಡಿದ್ದಾಳೆ. ಪೋಷಕರು ತಕ್ಷಣ ಆರೋಪಿಗಳ ವಿರುದ್ಧ ದೂರು ದಾಖಲಿಸಿದ್ದಾರೆ ಎಂದು ವರದಿಯಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post