ಕಲ್ಪ ಮೀಡಿಯಾ ಹೌಸ್
ಮುಂಬೈ: ಕಳೆದ ಕೆಲವು ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಬಾಲಿವುಡ್‌ನ ಹಿರಿಯ ನಟ ದಿಲೀಪ್ ಕುಮಾರ್ (98) ನಿಧನರಾಗಿದ್ದಾರೆ.
ತೀವ್ರ ಉಸಿರಾಟದ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ದಿಲೀಪ್ ಕುಮಾರ್ ಅವರಿನ್ನು ಮುಂಬೈನ ಪಿಡಿ ಹಿಂದುಜ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಂದು ಇಹಲೋಕ ತ್ಯಜಿಸಿದ್ದಾರೆ,
ಇತ್ತೀಚೆಗಷ್ಟೇ ದಿಲೀಪ್ ಅವರಿಗೆ ತೀವ್ರ ಉಸಿರಾಟದ ತೊಂದರೆ ಕಂಡುಬಂದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ, ಚಿಕಿತ್ಸೆಯ ನಂತರ ಚೇತರಿಸಿಕೊಂಡು ಮನೆಗೆ ಹಿಂತಿರುಗಿದ್ದರು. ಮತ್ತೆ ಆರೋಗ್ಯದಲ್ಲಿ ಏರುಪೇರಾದ ಕಾರಣ ಆಸ್ಪತ್ರೆಗೆ ಕರೆತರಲಾಗಿತ್ತು. ಸಾಂಟ್ರಾಕ್ರೂಜ್ ಚಿತಾಗಾರದಲ್ಲಿ ದಿಲೀಪ್ ಅವರ ಅಂತ್ಯಸಂಸ್ಕಾರ ನಡೆಸಲು ಕುಟುಂಬಸ್ಥರು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.
1922 ಡಿಸೆಂಬರ್ 11ರಲ್ಲಿ ಜನಿಸಿದ್ದ ದಿಲೀಪ್ ಕುಮಾರ್ ನಿಜವಾದ ಹೆಸರು ಮಹಮ್ಮದ್ ಯೂಸುಫ್ ಖಾನ್. ಪತ್ನಿ ಸಾಯಿರಾ ಬಾನು ಜೊತೆ ತುಂಬು ದಾಂಪತ್ಯ ಜೀವನ ನಡೆಸಿದ್ದಾರೆ. ಪಿಲ್ಮಫೇರ್ ಪ್ರಶಸ್ತಿ ಆರಂಭವಾದಾಗ ಅದನ್ನು ಪಡೆದ ಮೊದಲ ವ್ಯಕ್ತಿ ದಿಲೀಪ್ ಕುಮಾರ್. 1944ರಲ್ಲಿ ಜ್ವರ್ ಭಾತಾ ಚಿತ್ರದ ಮೂಲಕ ತಮ್ಮ ಸಿನಿ ಪಯಣ ಆರಂಭಿಸಿದ ದಿಲೀಪ್ ಅಂದಾಜ್, ದಾಗ್, ದೇವದಾಸ್, ಆಜಾದ್, ಶಕ್ತಿ, ಮಸಾಲ್, ಸೌದಾಗರ್, ಕ್ರಾಂತಿ, ಮಘಲ್ ಎ ಆಜಮ್ ಮುಂತಾದ ಚಿತ್ರಗಳಿಂದ ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿದಿದ್ದಾರೆ.
ಗಣ್ಯರ ಸಂತಾಪ:
ಬಾಲಿವುಡ್ ಹಿರಿಯ ನಟ ದಿಲೀಪ್ ಕುಮಾರ್ ಅವರು ನಿಧನ ಹೊಂದಿದ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ, ಮಾಜಿ ಪ್ರಧಾನಿ ದೇವೇಗೌಡ, ನಟ ಕಮಲ್ ಹಾಸನ್ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.
Deeply saddened by the demise of Dilip Saab. My heartfelt condolences to Saira Bhanuji. To me, he symbolised the finest secular traditions of our country. I always had a good conversation with him. RIP. #DilipKumar pic.twitter.com/7hrJTVemnT
— H D Devegowda (@H_D_Devegowda) July 7, 2021
ಸಾಮಾಜಿಕ ಜಾಲತಾಣ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ದಿಲೀಪ್ ಕುಮಾರ್ ಅವರ ನಿಧನಕ್ಕೆ ಸಂತಾಪ ಸೂಚಿಸುತ್ತಿದ್ದೇನೆ. ದಿಲೀಪ್ ಅವರನ್ನು ಚಿತ್ರ ಜಗತ್ತಿನ ದಂತಕಥೆ ಎಂದು ಸ್ಮರಿಸಲಾಗುತ್ತದೆ ಎಂದು ಹೇಳಿದ್ದಾರೆ.
ನಟ ದಿಲೀಪ್ ಕುಮಾರ್ ಅವರು ಅಪ್ರತಿಮ ಪ್ರತಿಭೆಯನ್ನು ಹೊಂದಿದ್ದರು. ಇದರಿಂದಲೇ ಬಹುತೇಕ ಪ್ರೇಕ್ಷಕರ ಮನಗೆದ್ದಿದ್ದರು. ಅವರ ನಿಧನ ನಮ್ಮ ಸಾಂಸ್ಕೃತಿಕ ಜಗತ್ತಿಗೆ ಆಗಿರುವ ದೊಡ್ಡ ನಷ್ಟವಾಗಿದೆ ಎಂದು ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post