ಕಲ್ಪ ಮೀಡಿಯಾ ಹೌಸ್ | ಮುಂಬೈ |
ದೀಪಾವಳಿಯ #Dipawali ಸಂಭ್ರಮದ ನಡುವೆಯೇ ತೈಲ ಮಾರುಕಟ್ಟೆ ಕಂಪೆನಿಗಳು ವಾಣಿಜ್ಯ ಬಳಕೆಯ ಎಲ್’ಪಿಜಿ ಸಿಲಿಂಡರ್ #Commercial Cylinder ಬೆಲೆಯಲ್ಲಿ ವಿವಿಧ ನಗರಗಳಿಗೆ ತಕ್ಕಂತೆ ಏರಿಕೆ ಮಾಡುವ ಮೂಲಕ ಶಾಕ್ ನೀಡಿವೆ.
ಮೆಟ್ರೋ ನಗರಗಳಲ್ಲಿ ವಾಣಿಜ್ಯ ಬಳಕೆಯ ಎಲ್’ಪಿಜಿ ಸಿಲಿಂಡರ್ ಬೆಲೆಯನ್ನು ಏರಿಕೆ ಮಾಡಲಾಗಿದ್ದು, ನ.1ರ ಇಂದಿನಿAದಲೇ ಇದು ಜಾರಿಗೆ ಬರಲಿದೆ.
ಇದರಂತೆ, ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಎಲ್’ಪಿಜಿ ಸಿಲಿಂಡರ್ ದರವನ್ನು ನ.1ರ ಇಂದಿನಿAದ 62 ರೂ.ಗಳಷ್ಟು ಹೆಚ್ಚಿಸಲಾಗಿದ್ದು, ಚಿಲ್ಲರೆ ಬೆಲೆಯನ್ನು 1,740 ರೂ.ನಿಂದ 1,802 ರೂ.ಗೆ ತಂದಿದೆ. ಪರಿಷ್ಕೃತ ದರ ಇಂದಿನಿAದಲೇ ಜಾರಿಗೆ ಬಂದಿದೆ.
Also read: ಸಾಗರ | ಖಾಸಗಿ ಬಸ್ ಅಪಘಾತ | ಹಲವರಿಗೆ ಗಾಯ
ಅ.1 ರಂದು, ತೈಲ ಮಾರುಕಟ್ಟೆ ಕಂಪನಿಗಳು 19 ಕೆಜಿ ವಾಣಿಜ್ಯ ಸಿಲಿಂಡರ್ ದರವನ್ನು 48.50 ರೂ ಹೆಚ್ಚಿಸಿದ್ದು, ದೆಹಲಿಯಲ್ಲಿ ಚಿಲ್ಲರೆ ಬೆಲೆಯನ್ನು 1,740 ರೂ.ಗೆ ಏರಿಸಲಾಗಿದೆ.
ಸೆಪ್ಟೆಂಬರ್’ನಲ್ಲಿ, 19 ಕೆಜಿ ವಾಣಿಜ್ಯ ಎಲ್’ಪಿಜಿ ಗ್ಯಾಸ್ ಸಿಲಿಂಡರ್ ಬೆಲೆಯನ್ನು 39 ರೂ ಹೆಚ್ಚಿಸಲಾಯಿತು. ಚಿಲ್ಲರೆ ಬೆಲೆಯನ್ನು 1,691.50 ರೂ. ಆಗಸ್ಟ್’ನಲ್ಲಿ ತೈಲ ಕಂಪನಿಗಳು 8.50 ರೂ.ಗಳ ಹೆಚ್ಚಳವನ್ನು ಘೋಷಿಸಿದ್ದವು. ಇದು 19-ಕೆಜಿ ಎಲ್’ಪಿಜಿ ಸಿಲಿಂಡರ್ ಬೆಲೆಯಲ್ಲಿ ಸತತ ನಾಲ್ಕನೇ ಮಾಸಿಕ ಏರಿಕೆಯಾಗಿದೆ.
ದೆಹಲಿಯ ಹೊರತಾಗಿ, ಮುಂಬೈ, ಚೆನ್ನೆÊ ಮತ್ತು ಕೋಲ್ಕತ್ತಾದಲ್ಲಿ 19 ಕೆಜಿ ವಾಣಿಜ್ಯ ಎಲ್’ಪಿಜಿ ಗ್ಯಾಸ್ ಸಿಲಿಂಡರ್ ಬೆಲೆಯೂ ಹೆಚ್ಚಾಗಿದೆ. ಇತ್ತೀಚಿನ ಏರಿಕೆಯೊಂದಿಗೆ, ಚಿಲ್ಲರೆ ಬೆಲೆ ಈಗ ಮುಂಬೈನಲ್ಲಿ ರೂ 1,754.50, ಚೆನ್ನೆÊನಲ್ಲಿ ರೂ 1,964.50 ಮತ್ತು ಕೋಲ್ಕತ್ತಾದಲ್ಲಿ ರೂ. 1,911.50 ಆಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post