ಕಲ್ಪ ಮೀಡಿಯಾ ಹೌಸ್ | ಮುಂಬೈ |
ಹಡಗಿನಲ್ಲಿ ಪಾರ್ಟಿ ವೇಳೆ ಡ್ರಗ್ಸ್ ಸೇವನೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಶಾರುಖ್ ಖಾನ್ Sharukh Khan ಪುತ್ರ ಆರ್ಯನ್ ಖಾನ್’ಗೆ Aryan Khan ಕ್ಲೀನ್ ಚಿಟ್ ನೀಡಲಾಗಿದೆ.
ಡ್ರಗ್ಸ್ ಬಳಕೆ ತಡೆ ಏಜೆನ್ಸಿಯ ವಿಶೇಷ ತಂಡದಿಂದ ಆರ್ಯನ್’ಗೆ ಕ್ಲೀನ್ ಚಿಟ್ ನೀಡಲಾಗಿದ್ದು, ಇವರ ವಿರುದ್ಧ ಯಾವುದೇ ಸಾಕ್ಷಿಗಳಲ್ಲಿ ಎಂದು ಉಲ್ಲೇಖಿಸಲಾಗಿದೆ. ಆರ್ಯನ್ ಸುಮಾರು ಒಂದು ತಿಂಗಳು ಜೈಲಿನಲ್ಲಿ ಕಳೆದಿದ್ದರು.
ಆರ್ಯನ್, ಅವಿನ್ ಸಾಹು ಮತ್ತು ಇತರ 4 ಕಾರ್ಯಕ್ರಮ ಸಂಘಟಕರ ವಿರುದ್ಧ ಕಾರ್ಡೆಲಿಯಾ ಡ್ರಗ್ ಬಸ್ಟ್ ಪ್ರಕರಣದಲ್ಲಿ ಸಾಕಷ್ಟು ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಪ್ರಕರಣ ರದ್ದುಪಡಿಸಲಾಗಿದೆ. ಕಳೆದ ವರ್ಷ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋದ ತನಿಖೆಯ ಮಧ್ಯೆ ಅರ್ಬಾಜ್ ಮರ್ಚೆಂಟ್ ಮತ್ತು ಮುನ್ಮುನ್ ಧಮೇಚಾ ಅವರನ್ನು ಬಂಧಿಸಲಾಗಿತ್ತು. ಸುಮಾರು ನಾಲ್ಕು ವಾರಗಳ ನಂತರ ಅ೩೦ ರಂದು ಅವರು ಜೈಲಿನಿಂದ ಹೊರಬಂದಿದ್ದರು.
Also read: ಮೇ 29ರಂದು ಶಿವಮೊಗ್ಗದಲ್ಲಿ ಎಎಪಿ ವಲಯ ಸಮಾವೇಶ: ರವಿಕುಮಾರ್ ಮಾಹಿತಿ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post