ಕಲ್ಪ ಮೀಡಿಯಾ ಹೌಸ್ | ಮುಂಬೈ |
ಲೋಕಸಭಾ ಚುನಾವಣೆ #Lok Sabha Election ಮತ ಎಣಿಕೆ ನಡೆಯುತ್ತಿರುವ ಬೆನ್ನಲ್ಲೇ ಷೇರು ಮಾರುಕಟ್ಟೆ #Share Market ಭಾರೀ ಮಟ್ಟದಲ್ಲಿ ಕುಸಿದಿದೆ.
ಭಾರತೀಯ ಷೇರು ಮಾರುಕಟ್ಟೆಯಲ್ಲಿ ಆರಂಭಿಕ ಭಾರೀ ಕುಸಿತ ಕಂಡಿದ್ದು, ಸೆನ್ಸೆಕ್ಸ್ 1,600 ಪಾಯಿಂಟ್ ಹಾಗೂ ನಿಫ್ಟಿ 500 ಪಾಯಿಂಟ್ ಕುಸಿತ ಕಂಡಿದೆ.
ಆರಂಭಿಕ ಟ್ರೆಂಡ್’ಗಳು ಬಿಜೆಪಿ ನೇತೃತ್ವದ ಎನ್’ಡಿಎ ಮೈತ್ರಿಕೂಟಕ್ಕೆ ಮುನ್ನಡೆಯನ್ನು ತೋರಿಸಿದಾಗಲೂ ಸ್ಥಳೀಯ ಷೇರುಗಳಲ್ಲಿ ತೀವ್ರ ಕುಸಿತ ಕಂಡುಬಂದಿದೆ.
Also read: 11 ಗಂಟೆ Updates | ಲಕ್ಷಕ್ಕೂ ಅಧಿಕ ಮತಗಳ ಅಂತರ ಕಾಯ್ದುಕೊಂಡ ಅಭ್ಯರ್ಥಿಗಳಿವರು
ಆದಾಗ್ಯೂ, ಆರಂಭಿಕ ಟ್ರೆಂಡ್’ಗಳು ಎಕ್ಸಿಟ್ ಪೋಲ್’ಗಳು ಭವಿಷ್ಯ ನುಡಿದಿದ್ದಕ್ಕಿಂತ ಎದುರಾಳಿ ಇಂಡಿಯಾ ಬ್ಲಾಕ್ ಹೆಚ್ಚು ಸ್ಥಾನ ಗಳಿಸುವ ಸಾಧ್ಯತೆ ಇದೆ ಎಂದು ತೋರಿಸಿದೆ.
ಎನ್’ಎಸ್’ಇ ನಿಫ್ಟಿ 50 ಸೂಚ್ಯಂಕವು ಬೆಳಿಗ್ಗೆ 9:15 ರ ಹೊತ್ತಿಗೆ 2.2% ರಷ್ಟು ಕುಸಿದು 22,779 ಕ್ಕೆ ತಲುಪಿದೆ. ಬಿಎಸ್’ಇ ಸೆನ್ಸೆಕ್ಸ್ ಶೇ.1.8 ರಷ್ಟು ಕುಸಿದು (75,163) ಕ್ಕೆ ತಲುಪಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news






















