ಕಲ್ಪ ಮೀಡಿಯಾ ಹೌಸ್ | ಮುಂಬೈ |
ಕ್ರಿಕೇಟ್ #Cricket ಪ್ರಿಯರು ಕಾತರದಿಂದ ಕಾಯುತ್ತಿರುವ ರಣಜಿ ಟ್ರೋಫಿಗೆ ಕ್ಷಣಗಣನೆ ಆರಂಭವಾದ ಬೆನ್ನಲ್ಲೇ ಅಭ್ಯಾಸ ಪಂದ್ಯದಲ್ಲಿ ಹೈಡ್ರಾಮಾ ನಡೆದಿದ್ದು, ಟೀಕೆಗೆ ದಾರಿ ಮಾಡಿಕೊಟ್ಟಿದೆ.
ಇಲ್ಲಿನ ಎಂಸಿಎ ಕ್ರಿಕೇಟ್ ಸ್ಟೇಡಿಯಂನಲ್ಲಿ ಮುಂಬೈ ಹಾಗೂ ಮಹಾರಾಷ್ಟ್ರ ತಂಡಗಳ ನಡುವೆ ಅಭ್ಯಾಸ ಪಂದ್ಯ ನಡೆದಿತ್ತು. ಈ ವೇಳೆ ಹೈಡ್ರಾಮಾ ನಡೆದಿದೆ.

ದಿನದಾಟದಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ ಪೃಥ್ವಿ ಶಾ, 181 ರನ್ ಬಾರಿಸಿದರು. ಅವರು 181 ರನ್ ಗಳಿಸಿದ್ದಾಗ ಮುಶೀರ್ ಖಾನ್ ಅವರ ಬೌಲಿಂಗ್’ನಲ್ಲಿ ಔಟಾದರು. ಕ್ರೀಸ್ ನಿಂದ ತೆರಳುತ್ತಿದ್ದ ಪೃಥ್ವಿ ಶಾ ಅವರಿಗೆ ಮುರ್ಶೀ ಅವರು ಟಾಟಾ ಬೈಬೈ ಎಂದು ಸಂಜ್ಞೆ ಮಾಡಿದರು.
ಈ ವರ್ತನೆ ಪೃಥ್ವಿ ಅವರನ್ನು ಕೆರಳಿಸಿದ್ದು, ಮುಶೀರ್ ಜೊತೆಯಲ್ಲಿ ಜಗಳ ತೆಗೆದಿದ್ದಾರೆ. ಈ ವೇಳೆ ಒಬ್ಬರಿಗೊಬ್ಬರಿಗೆ ಮಾತು ಬೆಳೆದು ಮುಶೀರ್ ಮೇಲೆ ಪೃಥ್ವಿ ಬ್ಯಾಟ್’ನಿಂದ ಹಲ್ಲೆಗೆ ಯತ್ನಿಸಿದ್ದಾರೆ ಎಂದು ದೂರಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news












Discussion about this post