ಕಲ್ಪ ಮೀಡಿಯಾ ಹೌಸ್ | ಮುಂಬೈ |
ಮಹಾನಗರಿ ಅಂಧೆರಿಯಲ್ಲಿ ನಡೆದ ಅಖಿಲ ಭಾರತೀಯ ಸುರಕ್ಷಾ ಸಮೀತಿಯ ಮಹಾ ಸಭೆಯಲ್ಲಿ (ಎಬಿಪಿಎಸ್) ರಾಷ್ಟ್ರೀಯ ಕಾರ್ಯ ದರ್ಶಿ ಸ್ಥಾನದ ಜೊತೆಗೆ ಕರ್ನಾಟಕ ರಾಜ್ಯದ ಉಸ್ತುವಾರಿಯನ್ನು ಹಾಯ್ ಮಿಂಚು ಕನ್ನಡ ದಿನಪತ್ರಿಕೆಯ ಸಂಪಾದಕ ಅಮನ್ ಕೊಡಗಲಿಯವರಿಗೆ ಹೆಚ್ಚಿನ ಜವಾಬ್ದಾರಿ ವಹಿಸಲು ಸಭೆಯಲ್ಲಿ ನಿರ್ಣಯಿಸಿ ಎಬಿಪಿಎಸ್ ರಾಷ್ಟ್ರೀಯ ಅಧ್ಯಕ್ಷ ಜಿಗ್ನೇಷಭಾಯಿ ಕಾಲಾವಾಡಿಯಾ, ರಾಷ್ಟ್ರೀಯ ಉಪಾಧ್ಯಕ್ಷ ಇರ್ಷಾದ ಖಾನ , ಮಹಾರಾಷ್ಟ್ರ ರಾಜ್ಯದ ಎಬಿಪಿಎಸ್ ಗೌರವ ಅದ್ಯಕ್ಷರು ಸೊಹೆಲ್ ಖಂಡವಾನಿ ಮತ್ತು ಅಜಮೀರ ಖ್ವಾಜಾ ಗರೀಬನವಾಜ ದರ್ಗಾ ಕಮೀಟಿಯ ಸಲಹಾ ಸಮಿತಿ ಮಂಡಳಿಯ ಸದಸ್ಯರು ಭಾರತ ಸರಕಾರ, ಇವರು ಅಮನ್ ರವರಿಗೆ ಗೌರವಿಸಿ ಸತ್ಕರಿಸಿದರು.
ಸಭೆಯಲ್ಲಿ ಪತ್ರಕರ್ತರ ಮೇಲೆ ಹಲ್ಲೆಗಳು ಮೇಲಿಂದ ಮೇಲೆ ಆಗುತ್ತಿರುವದನ್ನು ಖಂಡಿಸಿದರು. ಅದಕ್ಕಾಗಿಯೇ ಪತ್ರರ್ಕರ ಸುರಕ್ಷತೆಗಾಗಿ ಪತ್ರಕರ್ತರ ಸುರಕ್ಷಾ ಕಾನೂನು ಜಾರಿಗಾಗಿ ಪತ್ರಕರ್ತರ ರಥ ಯಾತ್ರೆಯನ್ನು ಅ.2 ರಿಂದ ಗುಜರಾತನ ಗಾಂಧಿ ನಗರದಿಂದ ಆರಂಭಗೊಂಡು , ಮಹಾರಾಷ್ಟ್ರದ ಮುಂಬೈ , ಪೂನಾ ಕೋಲಾಪೂರ ಮಾರ್ಗವಾಗಿ ಕರ್ನಾಟಕದ ಬೆಳಗಾವಿ, ದಾವಣಗೆರೆ, ಬೆಂಗಳೂರು, ಮಾರ್ಗವಾಗಿ ಆಂದ್ರಪ್ರದೇಶ, ತೆಲಂಗಾಣ , ಮಧ್ಯಪ್ರದೇಶ, ಛತ್ತೀಸಗಡ, ಜಾರ್ಖಂಡ, ಬಿಹಾರ, ಉತ್ತರ ಪ್ರದೇಶ ಮಾರ್ಗವಾಗಿ ಸಂಚರಿಸಿ ಪತ್ರಕರ್ತರ ರಥ ಯಾತ್ರೆಯೂ ದೆಹಲಿಯ ಜಂತರ ಮಂತರನಲ್ಲಿ ಸಭೆ. ವಿವಿಧ ರಾಜ್ಯದ ಪತ್ರಕರ್ತರು ಬಹು ಸಂಖ್ಯೆಯಲ್ಲಿ ಪಾಲ್ಗೊಂಡುಪತ್ರಕರ್ತರ ಸುರಕ್ಷಾ ಕಾನೂನು ಜಾರಿಗಾಗಿ ಹಕ್ಕೊತ್ತಾಯ ಮಾಡಲು ಭಾಗವಹಿಸಲು ಕೋರಲಾಯಿತು.
ಸಭೆಯಲ್ಲಿ ವಿವಿಧ ಪಕ್ಷದ ಮುಖಂಡರು ಸ್ವಯಂ ಪ್ರೇರಣೆಯಿಂದ ನಾವು ನಿಮ್ಮ ರಥ ಯಾತ್ರೆಗೆ ಸಹಕಾರ ನೀಡುವದಾಗಿ ಭರವಸೆ ನೀಡಿದರು.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















