ಕಲ್ಪ ಮೀಡಿಯಾ ಹೌಸ್ | ಮುಂಬೈ |
ರೀಲ್ಸ್ ಶೋಕಿಗೆ ಬಿದ್ದ ಯುವತಿ ಡ್ರೈವಿಂಗ್ ಬಾರದೇ ಇದ್ದರೂ ಕಾರು ಚಲಾವಣೆ ಮಾಡುವ ವೇಳೆ ಪ್ರಪಾತಕ್ಕೆ ಬಿದ್ದು ಸಾವನ್ನಪ್ಪಿದ್ದು, ಆಕೆಯ ಸ್ನೇಹಿತ ವಿರುದ್ಧ ಪ್ರಕರಣ ದಾಖಲಾಗಿದೆ.
ಮೂರು ದಿನಗಳ ಹಿಂದೆ ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರ ಜಿಲ್ಲೆಯಲ್ಲಿ ಸುಲಿಭಂಜನ್ ಗ್ರಾಮದ ದತ್ತ ಮಂದಿರಕ್ಕೆ ಶ್ವೇತಾ(23) ಎಂಬಾಕೆ ತನ್ನ ಸ್ನೇಹಿತನ ಜೊತೆಯಲ್ಲಿ ತೆರಳಿದ್ದರು.

Also read: ಹಾಸನ | ಹಾಡಹಗಲೇ ನಗರದಲ್ಲಿ ಶೂಟೌಟ್ | ಇಬ್ಬರ ಸಾವು | ಇಷ್ಟಕ್ಕೂ ನಡೆದ ಘಟನೆಯೇನು?
ಟೊಯೊಟಾ ಇಟಿಯೋಸ್ ಕಾರನ್ನು ನಿಧಾನವಾಗಿ ರಿವರ್ಸ್ ಗೇರ್’ನಲ್ಲಿ ಶ್ವೆತಾ ಚಲಾಯಿಸುತ್ತಿದ್ದರು. ಬ್ರೆಕ್ ಅಥವಾ ಎಕ್ಸಲೇಟರ್ ಬಗ್ಗೆ ತಿಳುವಳಿಕೆ ಇಲ್ಲದೇ ಏಕಾಏಕಿ ಎಕ್ಸಲೇಟರ್ ಒತ್ತಿದ್ದಾರೆ. ನೋಡ ನೋಡುತ್ತಿದ್ದಂತೆ, ಸ್ನೇಹಿತರ ಕಣ್ಣ ಮುಂದೆಯೇ ಕಾರು ಸಮೇತ ಆಕೆ ಸುಮಾರು 300 ಅಡಿ ಆಳದ ಪ್ರಪಾತಕ್ಕೆ ಬಿದ್ದಿದ್ದಾರೆ.

ಯುವತಿ ಬಳಿ ಡ್ರೈವಿಂಗ್ ಲೈಸೆನ್ಸ್ ಇದೆಯೇ ಅಥವಾ ಇಲ್ಲವೇ ಎಂಬುದನ್ನು ತಿಳಿಯದೆ ಕಾರಿನ ಕೀ ಕೊಟ್ಟು, ನಿರ್ಲಕ್ಷ್ಯ ವಹಿಸಿ ಸಾವಿಗೆ ಕಾರಣವಾದ ವ್ಯಕ್ತಿಯ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 304(ಎ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post