ಕಲ್ಪ ಮೀಡಿಯಾ ಹೌಸ್ | ಮುಂಬೈ |
ಕಂಟೆಂಟ್ ಮತ್ತು ತಂತ್ರಜ್ಞಾನ ಶಕ್ತಿ ಕೇಂದ್ರವಾದ ಜೀ ಎಂಟರ್‌ಟೈನ್‌ಮೆಂಟ್ ಎಂಟರ್ಪ್ರೈಸಸ್ ಲಿಮಿಟೆಡ್ (‘Z’), #Zee Entertainment Enterprises Ltd., ದೇಶಾದ್ಯಂತ ಯುವ, ಉದಯೋನ್ಮುಖ ಚಿತ್ರಕಥೆ ಪ್ರತಿಭೆಗಳನ್ನು ಗುರುತಿಸಲು ಹೊರಟಿದೆ.
ಜೀ಼ ರೈಟರ್ಸ್ ರೂಮ್ #Zee Writers Room ಕೇವಲ ಪ್ರತಿಭೆಗಳನ್ನು ಹುಡುಕುವುದು ಮಾತ್ರವಲ್ಲದೇ ಅದಕ್ಕಿಂತಲೂ ಮಿಗಿಲಾದ ಯುವ, ಉದಯೋನ್ಮುಖ ಚಿತ್ರಕಥೆ ಬರಹಗಾರರ ಪ್ರತಿಭೆಯನ್ನು ಪತ್ತೆ ಹಚ್ಚಲಿದೆ. ಇದು ಕಂಪನಿಯ ಬ್ರಾಂಡ್ ಫಿಲಾಸಫಿಯಾದ ಯುವರ್ಸ್ ಟ್ರೂಲಿ, ಝೀ, ಜೊತೆಗೆ ತನ್ನ ಕಂಟೆಂಟ್ ಕೊಡುಗೆಯನ್ನು ಪ್ಲಾಟ್‌ಫಾರ್ಮ್‌ಗಳಾದ್ಯಂತ ಬೆಳೆಸುವ ಗುರಿಯೊಂದಿಗೆ ಉದ್ದೇಶಿಸಲಾದ ಸೃಜನಶೀಲ ಪ್ರಯತ್ನವಾಗಿದೆ. ಆಯ್ದ ಬರಹಗಾರರಿಗೆ ಜೀ಼ ನ ವಿಸ್ತೃತ ಟಿವಿ, ಡಿಜಿಟಲ್ ಮತ್ತು ಚಲನಚಿತ್ರ ಪ್ಲಾಟ್‍ಫಾರ್ಮ್‌ಗಳಲ್ಲಿ ಕಥೆಗಳನ್ನು ರಚಿಸಲು ಅವಕಾಶ ನೀಡುತ್ತಿದೆ.

80 ನಗರಗಳು ಮತ್ತು 32 ಈವೆಂಟ್ ಸೆಂಟರ್‌ಗಳಲ್ಲಿ ಹೊರಹೊಮ್ಮುತ್ತಿರುವ, ಈ ಅಭಿಯಾನವು ಪ್ರಸಾರ, ಡಿಜಿಟಲ್ ಮತ್ತು ಆನ್-ಗ್ರೌಂಡ್ ಪ್ಲಾಟ್‌ಫಾರ್ಮ್‌ಗಳಲ್ಲಿ ಹೆಚ್ಚಿನ-ಪ್ರಭಾವದ ಪ್ರೊಮೋಷನಲ್ ಬ್ಲಿಟ್ಜ್ ಮೂಲಕ ವಿಸ್ತರಿಸಲಾಗುತ್ತಿದೆ. ಈ ಕಾರ್ಯಕ್ರಮವು ಹಿಂದಿ, ಮರಾಠಿ, ಬಂಗಾಳಿ, ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿನ ಭರವಸೆಯ ಕಥೆಗಾರರನ್ನು ಗುರಿಯಾಗಿಸಿಕೊಂಡು, ಕಲ್ಪನೆ, ರಚನೆ ಮತ್ತು ನಿರೂಪಣಾ ಕರಕುಶಲತೆಯನ್ನು ಪೋಷಿಸುವಂತಹ ಸಂಯೋಜಿತ ಬರಹಗಾರರ ರೂಮ್‌ಗೆ ಪ್ರವೇಶಿಸಲು ಅಭೂತಪೂರ್ವ ಅವಕಾಶವನ್ನು ನೀಡುತ್ತದೆ. Watch the brand film here: ZEE Writers’ Room Brand Film

ಜೀ಼ ನ ಮುಖ್ಯ ಮಾರ್ಕೆಟಿಂಗ್ ಅಧಿಕಾರಿ ಕಾರ್ತಿಕ್ ಮಹಾದೇವ್ ಮಾತನಾಡಿ, ” ಜೀ಼ ರೈಟರ್ಸ್ ರೂಮ್ ಮೂಲಕ ಕಥೆ ಹೇಳುವ ಕೌಶಲ್ಯವನ್ನು ಹೆಚ್ಚಿಸುವ ಮೂಲಕ ಒಂದು ಹೆಜ್ಜೆ ಮುಂದೆ ಇಡುತ್ತಿದ್ದೇವೆ. ಇದು ಉತ್ಸಾಹಭರಿತ ಬರಹಗಾರರಿಗೆ ನಾಳೆಯ ಕಥೆಗಾರರಾಗಲು ಉತ್ತಮ ಅವಕಾಶ ನೀಡುತ್ತಿದ್ದೇವೆ” ಎಂದರು.

ಸಿಜು ಪ್ರಭಾಕರನ್, ಚೀಫ್ ಕ್ಲಸ್ಟರ್ ಆಫೀಸ್-ಸೌತ್, ವೆಸ್ಟ್, ಜೀ಼ ಎಂಟರ್ಟೈನ್ಮೆಂಟ್ ಎಂಟರ್ಪ್ರೈಸಸ್ ಲಿಮಿಟೆಡ್ ಮಾತನಾಡಿ “ದಕ್ಷಿಣ ಮತ್ತು ಪಶ್ಚಿಮ ಪ್ರದೇಶಗಳು ದೇಶದಲ್ಲಿಯೇ ಅತ್ಯಂತ ರೋಮಾಂಚನಕಾರಿ ಕಥೆಗಳನ್ನು ಹೇಳುವ ಸಂಸ್ಕೃತಿಗಳ ತವರೂರಾಗಿವೆ. ಜೀ಼ ರೈಟರ್ಸ್ ರೂಮ್, ಇಂತಹ ಉತ್ಸಾಹ ಮತ್ತು ಸೃಜನಶೀಲತೆಯನ್ನು ಟಿವಿ, ಒಟಿಟಿ ಮತ್ತು ಚಲನಚಿತ್ರದಾದ್ಯಂತ ಬೆಳೆದು ನಿಲ್ಲಬಹುದಾದ ವೃತ್ತಿಪರವಾದ ರಚನಾತ್ಮಕ ಕಂಟೆಂಟ್ ರಚಿಸಲು ಸಹಾಯ ಮಾಡುತ್ತದೆ” ಎಂದರು.

ನೋಂದಾಯಿಸಲು [www.zeewritersroom.com] ಗೆ ಭೇಟಿ ನೀಡಿ ಹಾಗು ಈ ಕೆಳಕಂಡ ಅಂಶಗಳನ್ನು ಗಮನಿಸಿ:
- ಲಿಖಿತ ಪರೀಕ್ಷೆ: ಭಾಗವಹಿಸುವವರು ಸೆಲೆಕ್ಷನ್ ಈವೆಂಟ್‌ಗೆ ಹಾಜರಾಗಬೇಕು ಮತ್ತು ಪರೀಕ್ಷೆಯನ್ನು ನೀಡಬೇಕು.
- ಸಲ್ಲಿಕೆಯ ಮೌಲ್ಯಮಾಪನ: ಒಂದು ಓದುವ ಸಮಿತಿಯು ಬರವಣಿಗೆಯ ಅರ್ಹತೆಯ ಆಧಾರದ ಮೇಲೆ ಅಗ್ರ 10% ಅನ್ನು ಶಾರ್ಟ್‌ಲಿಸ್ಟ್ ಮಾಡುತ್ತದೆ.
- ಸಂದರ್ಶನ ಪ್ರಕ್ರಿಯೆ: ಫೈನಲಿಸ್ಟ್‌ಗಳನ್ನು ಇಂಡಸ್ಟ್ರಿ ಪ್ಯಾನೆಲ್ ಮೂಲಕ ಮೌಲ್ಯಮಾಪನ ಮಾಡಲಾಗುತ್ತದೆ.
- ಜೀ಼ ರೈಟರ್ಸ್ ರೂಮ್‌ಗೆ ಸೇರ್ಪಡೆ: ಅಗ್ರ 100 ಜನರನ್ನು ಜೀ಼ ರೈಟರ್ಸ್ ರೂಮ್‌ಗೆ ಸೇರಿಸಲಾಗುತ್ತದೆ, ಅಲ್ಲಿ ಅವರು ಪರಿಣತರ ಮಾರ್ಗದರ್ಶನದಲ್ಲಿ ಕಥೆಯ ಕಲ್ಪನೆಗಳನ್ನು ಅಭಿವೃದ್ಧಿಪಡಿಸಿಕೊಳ್ಳುತ್ತಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post