ಕಲ್ಪ ಮೀಡಿಯಾ ಹೌಸ್ | ಮುಂಜಾನೆ ಸುವಿಚಾರ |
ಕಷ್ಟಗಳು ಬಂದಾಗ ನಮ್ಮ ತಾಳ್ಮೆ ಹಾಗೂ ಶಕ್ತಿ ಸಾಮರ್ಥ್ಯದ ಅರಿವಾಗುತ್ತದೆ.
ಮನುಷ್ಯನ ಜೀವನ ಪಾಠವನ್ನು ಕಲಿಸುತ್ತಲೇ ಇರುತ್ತದೆ. ಅನುಭವಗಳು, ಪರೀಕ್ಷೆಗಳು ನಮ್ಮಲ್ಲಿರುವ ಅನೇಕ ಗುಣಗಳನ್ನು ಹೊರ ತರುತ್ತವೆ. ತಾಳ್ಮೆಯಿಂದ ಇರುವುದು ದೊಡ್ಡ ಸಾಮರ್ಥ್ಯ, ಎಲ್ಲರಿಗೂ ಇರುವುದಿಲ್ಲ.
ಮನಸ್ಸನ್ನು ಪ್ರಶಾಂತವಾಗಿಟ್ಟು ಕೊಂಡು ವಿವೇಚನೆಯಿಂದ ವಿಚಾರ ಮಾಡಿ ನಡೆದಾಗ ಎಂತದ್ದೇ ಸಮಸ್ಯೆಗಳು ಇರಲಿ ಅದನ್ನು ಸಮರ್ಥವಾಗಿ ಎದುರಿಸಿ ನಿಲ್ಲುವ ಆತ್ಮ ಸ್ಥೈರ್ಯ ಬರುತ್ತದೆ.
ಪರಮಾತ್ಮ ಮನುಷ್ಯನಿಗೆ ಕಷ್ಟವನ್ನು ಕೊಡುವಾಗ ಅದನ್ನು ಎದುರಿಸುವ ಶಕ್ತಿಯನ್ನು ಕೊಟ್ಟೆ ಪರಿಸ್ಥಿತಿಯನ್ನು ಕೊಟ್ಟಿರುತ್ತಾನೆ. ಹೀಗಾಗಿ ಸರ್ವಶಕ್ತ ಪರಮಾತ್ಮನನ್ನು ಮತ್ತು ನಮ್ಮಲ್ಲಿರುವ ಶಕ್ತಿಯನ್ನು ನಂಬಿ ಜೀವನ ನಡೆಸಬೇಕು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news




















