ಹೈದರಾಬಾದ್: ಬರೀ ವಿವಾದಗಳನ್ನು ಸೃಷ್ಠಿಸುವ ಎಐಎಂಐಎಂ ಮುಖ್ಯಸ್ಥ ಅಸಾವುದ್ದೀನ್ ಓವೈಸಿ ಈಗ ಮತ್ತೊಂದು ಭಾರೀ ವಿವಾದವನ್ನು ಸೃಷ್ಠಿಸುವ ಹೇಳಿಕೆ ನೀಡಿದ್ದು, ದೇಶದಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಭಾರತವನ್ನು ಜಾತ್ಯತೀತವಾಗಿ ಉಳಿಸಿಕೊಳ್ಳಬೇಕು ಎಂದರೆ ಮುಸ್ಲಿಮರು ಮುಸ್ಲಿಂ ಅಭ್ಯರ್ಥಿಗಳಿಗೆ ಮಾತ್ರ ಮತ ನೀಡಬೇಕು. ಈ ಮೂಲಕ ನಮ್ಮ ಸಮುದಾಯವನ್ನು ಮಾತ್ರ ಬೆಂಬಲಿಸಬೇಕು ಎಂದು ಕರೆ ನೀಡಿದ್ದಾರೆ.
ಕ್ವಾಸಿಂ ಸಾವಿನಿಂದಾಗಿ ಈಗ ಚಿಂತಿಸುವ ಕಾಲ ಬಂದಿದೆ. ಅದರೆ, ಇದಕ್ಕಾಗಿ ಕಣ್ಣೀರು ಹಾಕಿ ಎಂದು ನಾನು ಕೇಳುವುದಿಲ್ಲ. ನಿಮ್ಮ ಆತ್ಮಸಾಕ್ಷಿಯನ್ನು ನಾನು ಎಚ್ಚರಿಸುತ್ತಿದ್ದೇನೆ. ಜಾತ್ಯತೀತತೆ ಬಗ್ಗೆ ಮಾತನಾಡುವ ಶಕ್ತಿಗಳು ದರೋಡೆ ಮಾಡುತ್ತಿದ್ದು, ಅವಕಾಶವಾದಿಗಳು ಹೆಚ್ಚುತ್ತಿದ್ದಾರೆ ಎಂದರು.
ಈಗ ನೀವೆಲ್ಲಾ ನಿಮ್ಮ ಹಕ್ಕುಗಳಿಗಾಗಿ ಹೋರಾಡಬೇಕಿದೆ. ಜಾತ್ಯತೀತತೆಯನ್ನು ಜೀವಂತವಾಗಿ ಉಳಿಸಬೇಕಾದರೆ, ಹೋರಾಟ ನಡೆಸಬೇಕಿದೆ. ಇದಕ್ಕಾಗಿ ರಾಜಕೀಯದಲ್ಲಿ ಮುಸ್ಲಿಂ ಮತದಾರರು ಮುಸ್ಲಿಂ ಅಭ್ಯರ್ಥಿಗಳಿಗೆ ಮಾತ್ರ ಮತ ಚಲಾವಣೆ ಮಾಡಬೇಕು ಎಂದು ಕರೆ ನೀಡಿದ್ದಾರೆ.
Discussion about this post