ಕಲ್ಪ ಮೀಡಿಯಾ ಹೌಸ್ | ಮುಜಾಫರ್ ನಗರ |
ನವವಿವಾಹಿತ ವ್ಯಕ್ತಿಯೋರ್ವ ಪತ್ನಿಗೆ ಗುಂಡಿಕ್ಕಿ ಸಾಯಿಸಿ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದ ಮುಜಫರ್ ನಗರದ ಮಖ್ಯಾಲಿ ಗ್ರಾಮದಲ್ಲಿ ನಡೆದಿದೆ.
ಘಟನೆ ಹಿನ್ನೆಲೆ
ನಸೀಮ್ ಮಲಿಕ್ ಐದು ತಿಂಗಳ ಹಿಂದೆ ಮಧ್ಯವರ್ತಿ ಸದ್ದಾಂ ಸಹಾಯದಿಂದ ನರ್ಗೀಸ್ (25) ಅವರನ್ನು ವಿವಾಹವಾಗಿದ್ದ. ಶುಕ್ರವಾರ ನಸೀಮ್ ಮತ್ತು ನರ್ಗೀಸ್ ಜಗಳವಾಡಿಕೊಂಡು ಮಧ್ಯಸ್ಥಿಕೆ ವಹಿಸಲು ಇಬ್ಬರೂ ಸದ್ದಾಂ ಎಂಬಾತನ ಮೊರೆ ಹೋಗಿದ್ದರು. ಆದರೆ ಅವನು ಓಡಿಹೋದ. ಸದ್ದಾಂ ನ ಮನೆಯಲ್ಲಿ ಜಗಳವಾಡುತ್ತಿದ್ದಾಗ ಆಕೆಯ ಮೇಲೆ ಗುಂಡಿನ ದಾಳಿ ನಡೆಸಿ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎನ್ನಲಾಗಿದೆ.
ಜಗಳ ಬಿಡಿಸಲು ಹೋದ ಮತ್ತೋರ್ವ ವ್ಯಕ್ತಿ ಸಬೀರ್ ಎಂಬಾತನಿಗೂ ಸಹ ಗುಂಡೇಟು ತಗುಲಿದ್ದು, ಗಾಯಗೊಂಡಿದ್ದಾರೆ. ಆತನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳದಿಂದ 2 ಪಿಸ್ತೋಲ್ ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
Also read: ಉಚಿತ ವಿದ್ಯುತ್ ಪಡೆಯುವ ಬಗ್ಗೆ ಸಚಿವ ಜಾರ್ಜ್ ಮಹತ್ವದ ಹೇಳಿಕೆ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post