ಕಲ್ಪ ಮೀಡಿಯಾ ಹೌಸ್ | ಮುಜಾಫರಪುರ(ಬಿಹಾರ) |
ತಾನೇ 9 ತಿಂಗಳು ಹೊತ್ತು ಹೆತ್ತ 3 ವರ್ಷದ ಮಗುವನ್ನು ಪಾಪಿ ತಾಯಿಯೊಬ್ಬಳು ಅತ್ಯಂತ ಕ್ರೂರವಾಗಿ ಕತ್ತು ಸೀಳಿ ಕೊಂದು, ಬ್ಯಾಗ್’ನಲ್ಲಿ ಪ್ಯಾಕ್ #Mother killed child ಮಾಡಿರುವ ಘೋರ ಘಟನೆ ಬಿಹಾರದ ಮುಜಾಫರಪುರದಲ್ಲಿ ನಡೆದಿದೆ.
ಕಾಜಲ್ ಕುಮಾರಿ ಎಂಬ ನೀಚ ತಾಯಿ ತನ್ನ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಮೂರು ವರ್ಷದ ಮಗಳನ್ನು ಕತ್ತು ಸೀಳಿ ಕೊಲೆ ಮಾಡಿ, ನಂತರ ಬ್ಯಾಗ್’ನಲ್ಲಿ ಮುಚ್ಚಿಟ್ಟು, ಪರಾರಿಯಾಗಿದ್ದಾಳೆ.
ವರದಿಗಳ ಪ್ರಕಾರ, ಕಾಜಲ್ ಕಣ್ಮರೆಯಾಗುವ ಮೊದಲು ತನ್ನ ಎಲ್ಲಾ ಆಭರಣಗಳು, ಆಧಾರ್ ಕಾರ್ಡ್ ಮತ್ತು ಇತರ ಅಗತ್ಯ ವಸ್ತುಗಳನ್ನು ತನ್ನೊಂದಿಗೆ ತೆಗೆದುಕೊಂಡು ಹೋಗಿದ್ದಾಳೆ.
Also read: ಪೋಷಕರು ಮಕ್ಕಳ ನಡವಳಿಕೆ ಕಡೆಗೆ ಸೂಕ್ಷ್ಮವಾಗಿ ಗಮನಹರಿಸಿ: ಸಂತೋಷ್
ಅದೇ ಮನೆಯಲ್ಲಿ ವಾಸವಿದ್ದ ಮಿಶ್ತಿ ಅವರ ತಂದೆ ಮನೋಜ್ ಕುಮಾರ್ ಮತ್ತು ಆಕೆಯ ತಾಯಿಯ ಚಿಕ್ಕಪ್ಪ ಕರಣ್ ಕುಮಾರ್ ಕೆಲಸಕ್ಕೆ ತೆರಳಿದ್ದರು. ಮಧ್ಯಾಹ್ನ 2 ಗಂಟೆ ಸುಮಾರಿಗೆ, ಕಾಜಲ್ ತನ್ನ ಚಿಕ್ಕಮ್ಮನ ಹುಟ್ಟುಹಬ್ಬದ ಪಾರ್ಟಿಗೆ ಹೋಗುವುದಾಗಿ ಮತ್ತು ತಡರಾತ್ರಿಯಲ್ಲಿ ಹಿಂತಿರುಗುವುದಾಗಿ ನೆಲ ಮಹಡಿಯಲ್ಲಿ ವಾಸಿಸುವ ಸಂಬಂಧಿಗೆ ತಿಳಿಸಿದ್ದಾಳೆ. ಆದರೆ ಆ ಕ್ಷಣದಲ್ಲಿ ಯಾವುದೇ ಅನುಮಾನ ವ್ಯಕ್ತವಾಗಿಲ್ಲ.
ಆದರೆ, ಸಂಜೆಯ ನಂತರ ಮನೆಗೆ ಹಿಂದಿರುಗಿದ ನಂತರ, ಮನೋಜ್ ಮತ್ತು ಕರಣ್ ಗೇಟ್ ಲಾಕ್ ಮಾಡಿರುವುದನ್ನು ಕಂಡು ಕಾಣೆಯಾದ ಕಾಜಲ್ ಮತ್ತು ಮಿಶ್ತಿಗಾಗಿ ಹುಡುಕಲು ಪ್ರಾರಂಭಿಸಿದ್ದಾರೆ. ಆದರೂ ಎಲ್ಲೂ ಸಹ ಪತ್ತೆಯಾಗದ ಹಿನ್ನೆಲೆಯಲ್ಲಿ ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ ಪೊಲೀಸರಿಗೆ ಮನೆಯ ಹಿಂದಿನ ಹೊಂಡದಲ್ಲಿ ಚೀಲ ದೊರೆತಿದ್ದು, ಅದರಲ್ಲಿ ಮಗುವಿನ ಶವ ಪತ್ತೆಯಾಗಿದೆ.
ಪೊಲೀಸರು ಈಗ ಕಾಜಲ್ ಇರುವ ಸ್ಥಳವನ್ನು ಪತ್ತೆಹಚ್ಚಲು ಸಿಸಿಟಿವಿ ದೃಶ್ಯಗಳು ಮತ್ತು ಟವರ್ ಲೊಕೇಶನ್ ಸರ್ಚ್ ಮಾಡುತ್ತಿದ್ದಾರೆ. ತನಿಖೆ ಮುಂದುವರೆದಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post