ಬೆಂಗಳೂರು: ಐಟಿ ದಾಳಿಯಿಂದಾದರೂ ನನಗೆ ಬರಬೇಕಿರುವ ಬಾಕಿ ಹಣ ನನಗೆ ಬಂದರೆ ಸಾಕು ಎಂದು ನಟ ಸುದೀಪ್ ಹೇಳಿದ್ದಾರೆ.
ತಮ್ಮ ನಿವಾಸದ ಮೇಲೆ ಐಟಿ ದಾಳಿ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಚಿತ್ರೀಕರಣವನ್ನು ಸ್ಥಗಿತಗೊಳಿಸಿ, ಬೆಂಗಳೂರಿನಲ್ಲಿರುವ ಜೆಪಿ ನಗರದ ತಮ್ಮ ನಿವಾಸಕ್ಕೆ ಆಗಮಿಸಿದ ವೇಳೆ ಅವರು ಮಾತನಾಡಿದ್ದಾರೆ.
ನಾನು ಯಾವುದೇ ತಪ್ಪು ಮಾಡಿಲ್ಲ. ಹಾಗಾಗಿ ಯಾವುದೇ ಭಯ ಇಲ್ಲ. ಐಟಿ ದಾಳಿಯಿಂದ ನನಗೆ ಬಾಕಿ ಇರುವ ಹಣ ಬಂದರೆ ಸಾಕು ಎಂದಿದ್ದಾರೆ.
ಆದಾಯ ತೆರಿಗೆ ಅಧಿಕಾರಿಗಳಿಗೆ ಎಲ್ಲ ರೀತಿಯ ಸಹಕಾರ ನೀಡುತ್ತೇನೆ. ನನ್ನ ತಾಯಿ ಒಬ್ಬರೇ ಇದ್ದರು. ಹಾಗಾಗಿ, ಮೈಸೂರಿನಿಂದ ಇಲ್ಲಿಗೆ ಬರಬೇಕಾಯಿತು ಎಂದರು.

















