ಕಲ್ಪ ಮೀಡಿಯಾ ಹೌಸ್ | ಮೈಸೂರು/ಶಿವಮೊಗ್ಗ |
ಸಾಂಸ್ಕೃತಿಕ ರಾಜಧಾನಿ ಮೈಸೂರು ಹಾಗೂ ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ನಡುವೆ ಸಂಚರಿಸುವ ಎಕ್ಸ್’ಪ್ರೆಸ್ ರೈಲು #Express Train between Shivamogga-Mysore ಸಂಚಾರದಲ್ಲಿ ತಾತ್ಕಾಲಿಕ ವ್ಯತ್ಯಯವಾಗುತ್ತಿದ್ದು, ಪ್ರಯಾಣಿಕರು ಸಹಕರಿಸುವಂತೆ ನೈಋತ್ಯ ರೈಲ್ವೆ ಕೋರಿದೆ.
ಈ ಕುರಿತಂತೆ ನೈಋತ್ಯ ರೈಲ್ವೆ ಪ್ರಕಟಣೆ ಹೊರಡಿಸಿದ್ದು, ಮೈಸೂರಿನಿಂದ ಶಿವಮೊಗ್ಗದವರೆಗೂ ಸಂಚರಿಸುವ ಡೈಲಿ ಎಕ್ಸ್’ಪ್ರೆಸ್ ರೈಲಿನ ಸಂಚಾರದಲ್ಲಿ ನಿಗದಿತ ದಿನಾಂಕದವರೆಗೂ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ.
ಹಾಸನ ಮತ್ತು ಮಾವಿನಕೆರೆ ನಿಲ್ದಾಣಗಳಲ್ಲಿ ಹಳಿ ನಿರ್ವಹಣಾ ಕಾಮಗಾರಿ ಕೈಗೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಮಾರ್ಚ್ 13 ರಿಂದ ಮೇ 6, 2025 ರವರೆಗೆ ಮೈಸೂರಿನಿಂದ ಹೊರಡುವ ರೈಲು ಸಂಖ್ಯೆ 16225 ಮೈಸೂರು-ಶಿವಮೊಗ್ಗ ಟೌನ್ ಡೈಲಿ ಎಕ್ಸ್ ಪ್ರೆಸ್ ರೈಲು ಮಾರ್ಗದಲ್ಲಿ 80 ನಿಮಿಷಗಳ ಕಾಲ ತಡವಾಗಿ ಸಂಚರಿಲಿದೆ.
Also read: ಆಶಾ ಕಾರ್ಯಕರ್ತರು ಸಾಮಾಜಿಕ ಸ್ವಾಸ್ಥ್ಯದ ಹರಿಕಾರರು: ಡಾ. ಶಿವಕುಮಾರ ಅಭಿಪ್ರಾಯ
ಈ ರೈಲು ಮೈಸೂರಿನಿಂದ ಬೆಳಗ್ಗೆ 10.15ಕ್ಕೆ ಹೊರಟು ಸಂಜೆ 4.40ಕ್ಕೆ ಶಿವಮೊಗ್ಗ ತಲುಪುತ್ತದೆ. ಆದರೆ, ಮೇ 6ರವರೆಗೂ ಈ ರೈಲು ಶಿವಮೊಗ್ಗ ತಲುಪುವ ಸಮಯದಲ್ಲಿ ತಡವಾಗಲಿದೆ.
ರೈಲು ಮಾರ್ಗ ಬದಲಾವಣೆ
ಲಕ್ನೋ ವಿಭಾಗದ ವ್ಯಾಪ್ತಿಯಲ್ಲಿ ಜೋಡಿ ಹಳಿ ಮಾರ್ಗದ ಕಾಮಗಾರಿ ನಡೆಯುವುದರಿಂದ, ಮಾರ್ಚ್ 24, 2025 ರಂದು ಯಶವಂತಪುರ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 22683 ಯಶವಂತಪುರ – ಲಕ್ನೋ ಸಾಪ್ತಾಹಿಕ ಎಕ್ಸ್ ಪ್ರೆಸ್ ರೈಲು ಫಫಾಮೌ, ಉಂಚಹಾರ್, ರಾಯ್ ಬರೇಲಿ ಮತ್ತು ಲಕ್ನೋ ನಿಲ್ದಾಣಗಳ ಮೂಲಕ ಸಂಚರಿಸಲಿದೆ ಎಂದು ಉತ್ತರ ರೈಲ್ವೆಯು ಸೂಚಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post