ಕಲ್ಪ ಮೀಡಿಯಾ ಹೌಸ್ | ಮೈಸೂರು/ಶಿವಮೊಗ್ಗ |
ಯಾರ್ಡ್’ಗಳಲ್ಲಿ ಸುರಕ್ಷತೆಗೆ ಸಂಬಂಧಿಸಿದಂತೆ ನಿರ್ವಹಣಾ ಕಾರ್ಯಗಳ ಹಿನ್ನೆಲೆಯಲ್ಲಿ ಮೂರು ದಿನಗಳ ಕಾಲ ಮೈಸೂರು-ಶಿವಮೊಗ್ಗ ನಡುವಿನ ಎಕ್ಸ್’ಪ್ರೆಸ್ ರೈಲು #Mysore-Shivamogga Express Train ಸಂಚಾರದಲ್ಲಿ ವಿಳಂಬವಾಗಲಿದೆ.
ಈ ಕುರಿತಂತೆ ನೈಋತ್ಯ ರೈಲ್ವೆ ಮೈಸೂರು ವಿಭಾಗ ಮಾಹಿತಿ ಪ್ರಕಟಿಸಿದ್ದು, 16225 ಸಂಖ್ಯೆಯ ಮೈಸೂರು – ಶಿವಮೊಗ್ಗ ಟೌನ್ ನಡುವಿನ ಎಕ್ಸ್’ಪ್ರೆಸ್ ರೈಲು ಸಂಚಾರದಲ್ಲಿ ವಿಳಂಬವಾಗಲಿದೆ.
ಈ ಎಕ್ಸ್’ಪ್ರೆಸ್ ರೈಲು ಜುಲೈ 1, 3 ಮತ್ತು 4, 2025 ರಂದು ಮೈಸೂರು ನಿಲ್ದಾಣದಿಂದ 30 ನಿಮಿಷ ವಿಳಂಬವಾಗಿ ಹೊರಡಲಿದ್ದು. ಅಲ್ಲದೇ, ಮಾರ್ಗಮಧ್ಯೆ 70 ನಿಮಿಷಗಳವರೆಗೆ ನಿಯಂತ್ರಿಸಲಾಗುವುದು ಎಂದು ಇಲಾಖೆ ತಿಳಿಸಿದೆ.
ಮೈಸೂರು ವಿಭಾಗದ ಹೊಸ ಅಗ್ರಹಾರ ಮತ್ತು ಅಕ್ಕಿಹೆಬ್ಬಾಳು ಯಾರ್ಡುಗಳಲ್ಲಿ ಸುರಕ್ಷತೆಗೆ ಸಂಬಂಧಿಸಿದ ನಿರ್ವಹಣಾ ಕಾರ್ಯಗಳ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post