ಕಲ್ಪ ಮೀಡಿಯಾ ಹೌಸ್ | ಸೊರಬ |
ಪಟ್ಟಣದ ವಕೀಲರ ಭವನದಲ್ಲಿ ತಾಲೂಕು ವಕೀಲರ ಸಂಘಕ್ಕೆ ಬುಧವಾರ ನಡೆದ ಚುನಾವಣೆಯಲ್ಲಿ ಬೃಹತ್ ಸ್ಪರ್ಧೆಯೊಂದಿಗೆ ನಾಗರಾಜ್ ಎನ್. ಕೆರೂರು ಅವರು ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದರು.
ಕಾರ್ಯದರ್ಶಿಯಾಗಿ ವಿನಯ್ ಎನ್. ಪಾಟೀಲ್, ಉಪಾಧ್ಯಕ್ಷರಾಗಿ ಹೆಚ್.ಕೆ. ಚಂದ್ರಶೇಖರ್ ಹಾಗೂ ಖಜಾಂಚಿಯಾಗಿ ಗೋಪಾಲ್ ಹೆಚ್ ಅವರು ಅವಿರೋಧವಾಗಿ ಆಯ್ಕೆಗೊಂಡರು.
ಬೆಳಿಗ್ಗೆ 11:30 ರಿಂದ ಸಂಜೆ 3 ಗಂಟೆಯವರೆಗೆ ನಡೆದ ಮತದಾನದಲ್ಲಿ 147 ಮತದಾರರಲ್ಲಿ 144 ಮಂದಿ ತಮ್ಮ ಮತದಾನ ಹಕ್ಕು ಚಲಾಯಿಸಿದರು. ಅಧ್ಯಕ್ಷ ಸ್ಥಾನಕ್ಕೆ ನಡೆದ ನೇರ ಸ್ಪರ್ಧೆಯಲ್ಲಿ ಹಿರಿಯ ವಕೀಲ ಎಂ. ನಾಗಪ್ಪ ವಿರುದ್ಧ ನಾಗರಾಜ್ ಎನ್. ಕೆರೂರು ಜಯ ಸಾಧಿಸಿದರು. ಉಪಾಧ್ಯಕ್ಷ ಸ್ಥಾನಕ್ಕೆ ಪ್ರಶಾಂತ ಕುಮಾರ್ ಎನ್.ಸಿ ವಿರುದ್ಧ ಹೆಚ್.ಕೆ. ಚಂದ್ರಶೇಖರ್ ಹಾಗೂ ಕಾರ್ಯದರ್ಶಿ ಸ್ಥಾನಕ್ಕೆ ಮಾರುತಿ ಕೆ.ಪಿ ವಿರುದ್ಧ ವಿನಯ್ ಎನ್. ಪಾಟೀಲ್ ಗೆಲುವು ಸಾಧಿಸಿದರು.

ಚುನಾವಣಾ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ವಕೀಲರು ಪರಸ್ಪರ ಸಿಹಿ ಹಂಚಿಕೊಂಡು ನೂತನ ಪದಾಧಿಕಾರಿಗಳನ್ನು ಅಭಿನಂದಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ನೂತನ ಅಧ್ಯಕ್ಷ ನಾಗರಾಜ್ ಕೆರೂರು, ಸಂಘದ ಅಭಿವೃದ್ಧಿಗಾಗಿ ನಾನು ಸಂಪೂರ್ಣ ಶ್ರಮಿಸುತ್ತೇನೆ ವಕೀಲರ ಹಿತದೃಷ್ಟಿಯಿಂದ ಶೈಕ್ಷಣಿಕ ಕಾರ್ಯಾಗಾರಗಳು, ಕಲ್ಯಾಣ ಕುಟುಂಬ ಸಹಾಯ ಯೋಜನೆಗಳು ಸೇರಿದಂತೆ ಹಲವು ಸದುದ್ದೇಶಿತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬಸವರಾಜ್, ಅಶೋಕ್ ಸಿ.ವೈ, ಎಂ.ಕೆ. ವೀರಭದ್ರಪ್ಪ, ಡಾಕಪ್ಪ ಹೆಚ್, ಉಮೇಶಪ್ಪ ಜಿ, ಸುಧಾಕರ್ ಪಿ. ನಾಯ್ಕ್, ಓಂಕಾರಪ್ಪ ಎಸ್, ನಾಗರಾಜ್ ಎಂ, ಮಾಲತೇಶ ಹೆಚ್, ಪ್ರಶಾಂತ್ ಜಿ, ಟಿ. ಗಂಗಾಧರ್, ಭೀಮಪ್ಪ ಹೆಚ್, ರಂಗನಾಥ ಸಿ, ಕಮಲಮ್ಮ ಸೇರಿದಂತೆ ಹಲವು ಹಿರಿಯ ವಕೀಲರು ಉಪಸ್ಥಿತರಿದ್ದರು.
(Report: Madhuram, Soraba)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news   
 
	    	







 Loading ...
 Loading ... 
							



 
                
Discussion about this post