ವಾಷಿಂಗ್ಟನ್: ವಿಶ್ವದ ಅತಿ ಕ್ರೂರ ಹಾಗೂ ಶ್ರೀಮಂತ ಉಗ್ರ ಸಂಘಟನೆ ಐಸಿಸಿ ಮುಖ್ಯಸ್ಥ ನಟೋರಿಯಸ್ ಅಬೂಬಕರ್ ಅಲ್ ಬಾಗ್ದಾದಿಯನ್ನು ಅಮೆರಿಕಾ ವಿಶೇಷ ಪಡೆಗಳು ಬೇಟೆಯಾಡಿ ಹೊಸಕಿ ಹಾಕಿದ ಕಾರ್ಯಾಚರಣೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದ ನಾಯಿಯೊಂದು ಗಾಯಗೊಂಡಿದ್ದು, ಇದರ ಫೋಟೋವನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ವೀಟ್ ಮಾಡಿದ್ದಾರೆ.
ಐಸಿಸಿ ಮುಖ್ಯಸ್ಥ ಬಾಗ್ದಾದಿಯನ್ನು ಸೆರೆ ಹಿಡಿದು ಕೊಲ್ಲುವಲ್ಲಿ ಮಹತ್ವದ ಪಾತ್ರ ವಹಿಸಿ, ಗಾಯಗೊಂಡಿರುವ ಅದ್ಬುತ ನಾಯಿಯ ಚಿತ್ರವನ್ನು ನಾವು ಬಿಡುಗಡೆ ಮಾಡುತ್ತಿದ್ದು, ಇದರ ಹೆಸರನ್ನು ಮಾತ್ರ ತಿಳಿಸುವುದಿಲ್ಲ ಎಂದಿದ್ದಾರೆ.
We have declassified a picture of the wonderful dog (name not declassified) that did such a GREAT JOB in capturing and killing the Leader of ISIS, Abu Bakr al-Baghdadi! pic.twitter.com/PDMx9nZWvw
— Donald J. Trump (@realDonaldTrump) October 28, 2019
ಕಾರ್ಯಾಚರಣೆ ವೇಳೆ ಕಣಕ್ಕೆ ಹಾರಿ ತನ್ನ ಕರ್ತವ್ಯವನ್ನು ಸಮರ್ಥವಾಗಿ ನಿಭಾಯಿಸಿದ ನಮ್ಮ ನಾಯಿ ಬಾಗ್ದಾದಿ ಅವಿತಿದ್ದ ಕಾಂಪೌಂಡ್ ಒಳಗೆ ಸ್ವತಃ ಹಾರಿ ಆತನನ್ನು ಸೆರೆ ಬಲಿ ಹಾಕುವಲ್ಲಿ ಮಹತ್ವದ ಪಾತ್ರ ವಹಿಸಿದೆ ಎಂದು ಟ್ರಂಪ್ ಹೇಳಿದ್ದಾರೆ.
Get In Touch With Us info@kalpa.news Whatsapp: 9481252093, 94487 22200
Discussion about this post